ಮನುಷ್ಯನ ಅನೇಕ ಕಷ್ಟಗಳಿಗೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಿಹಾರಗಳನ್ನು ಸೂಚಿಸಿದ್ದಾನೆ. ಬದುಕು ಭಾರ ಎನಿಸಿದಾಗ ಗೀತೆಯಲ್ಲಿ ಪರಿಹಾರ ಮಾರ್ಗಸೂಚಿ ಇದೆ. ಅರ್ಜುನ ಮಹಾನ್ ವೀರಾಗ್ರಣಿ, ಅವನು ಯಾರನ್ನಾದರೂ ಎದುರಿಸಬಲ್ಲ ಶಕ್ತಿ ಉಳ್ಳವನು. ಅವನು ಕೂಡ ತನ್ನ ಬಂಧುಗಳನ್ನೇ ಯುದ್ಧದಲ್ಲಿ ಎದುರಿಸಬೇಕೆಂದು ಅರಿವಾದಾಗ ಹೆದರಿದ, ವಿಷಾದಗೊಂಡ ಅವನನ್ನು ಎಚ್ಚರಿಸಲು ಯೋಗೀಶ್ವರ ಶ್ರೀಕೃಷ್ಣ ಹದಿನೆಂಟು ಅಧ್ಯಾಯಗಳ, ಏಳು ನೂರು ಶ್ಲೋಕಗಳ ಭಗವದ್ಗೀತೆಯನ್ನು ಹೇಳಿದ. ಅರ್ಜುನನಿಗೆ ಸಿಕ್ಕಿದಂತೆಯೇ ನಮಗೆ ಕೂಡ ನಮ್ಮ ಅನೇಕಾನೇಕ ಕಷ್ಟಗಳಿಗೆ ಪರಿಹಾರ ಭಗವದ್ಗೀತೆಯಲ್ಲಿದೆ. ಅದರ ಒಂದು ನೋಟ ಯತಿರಾಜ್ ವೀರಾಂಬುಧಿ ಕೃತಿ 'ಬದುಕು ಭಾರ ಗೀತಾ ಪರಿಹಾರ .
ಕಥೆಗಾರ,ಲೇಖಕ, ಅನುವಾದಕ, ಕಾದಂಬರಿಗಾರರಾದ ಯತಿರಾಜ್ ವೀರಾಂಬುಧಿ 11-08-1957ರಂದು ಮೈಸೂರಿನಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮೈಸೂರಿನಲ್ಲೇ ಪೂರ್ಣಗೊಳಿಸಿದ ಅವರು ಮೈಸೂರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಬಿ.ಇ (ಎಲೆಕ್ಟ್ರಿಕಲ್ ಪವರ್) ಮುಗಿಸಿದರು. ಬೆಂಗಳೂರು ಮತ್ತು ಸಲ್ತನತ್ ಆಫ್ ಒಮಾನ್‌ನಲ್ಲಿ ಕಾರ್ಯ ನಿರ್ವಹಿಸಿ 2013ರಲ್ಲಿ ನಿವೃತ್ತಿ ಪಡೆದಿದ್ದಾರೆ. ಯತಿರಾಜ್ ವೀರಾಂಬುಧಿಯವರ ಪ್ರಕಟಿತ ಕೃತಿಗಳು- ಆಪತ್ತಿಗೆ ಆಹ್ವಾನ, ಪರಿಶೋಧ, ಗಾಥೆ, ಮರದಡಿ ಮಳೆ, ಪಂಚಾನನ, ಜೀವನ್ಮುಖಿ, ಸಾಬೀತು, ಕುರುಡು ತಿರುವು, ಅವಿನಾಭಾವ, ಹಸ್ತಕ್ಷೇಪ, ಹಾಸುಹೊಕ್ಕು, ಕಪ್ಪು ನದಿ, ಉದ್ಯೋಗ ಪರ್ವ, ಕರೆದರೆ ಬಾರೆ..!, ಒಂದೊಂದಾಗಿ ಜಾರಿದರೆ, ರಣವೀಳ್ಯ, ಚಿರಸ್ಮಿತ, ಸುಖಿಯಾಗಿರು ...
READ MORE