ಚಿಂತಕ ಪಾ.ವೆಂ. ಆಚಾರ್ಯರು ವಿದ್ವಾಂಸರು. ಲೋಕಶಿಕ್ಷಣ ಟ್ರಸ್ಟ್ ನಡೆಸುತ್ತಿರುವ ಕಸ್ತೂರಿ ಮಾಸ ಪತ್ರಿಕೆಯ ಸಂಪಾದಕರಾಗಿದ್ದರು. ಲಾಂಗೂಲಾಚಾರ್ಯರು ಎಂಬ ಕಾವ್ಯನಾಮದೊಂದಿಗೆ ವಿದ್ವತ್ ಪೂರ್ಣ ಲೇಖನಗಳನ್ನು ಬರೆಯುತ್ತಿದ್ದ ಅವರು ಉಡುಪಿಯ ಶ್ರೀಕೃಷ್ಣ ಮಠದೊಂದಿಗೆ ಭಾವನಾತ್ಮಕ ಸಂಬಂಧವಿರಿಸಿಕೊಂಡಿದ್ದರು. ಈ ಕೃತಿಯಲ್ಲಿ ಶ್ರೀಕೃಷ್ಣ ಮಠದ ಪರಿಸರ, ವ್ಯಕ್ತಿಚಿತ್ರಗಳು, ಶಬ್ದವಿಹಾರ ಹಾಗೂ ನೆನಹುಗಳು ಹೀಗೆ ನಾಲ್ಕು ವಿಭಾಗಗಳನ್ನು ಮಾಡಿದ್ದು, ಮೊದಲನೆಯದರಲ್ಲಿ ಹುಲಿ ಕೊಂದ ಸ್ವಾಮಿಗಳು, ಮಠಾಧಿಪತ್ಯಕ್ಕೆ ಮೇಲಾಟವಿರಲಿಲ್ಲ, ರಥದಿಂದ ಧುಮುಕಿದ ಸ್ವಾಮಿಗಳು, ಸೋದೆಯ ನೆನಪುಗಳು ಇತ್ಯಾದಿ, ಎರಡನೆಯದರಲ್ಲಿ; ಗೋವಿಂದ ಪೈಗಳೊಂದಿಗೆ, ಶಿವರಾಮ ಕಾರಂತ ಪ್ರಪಂಚ, ಡಾ. ಟಿ. ಮಾಧವ ಪೈ, ಉಡುಪಿಯ ಕೆಲ ಪತ್ರಕರ್ತರು ಇತ್ಯಾದಿ ಮೂರನೇಯದರಲ್ಲಿ; ಸಾಮಾನ್ಯ ತುಳು ಬ್ರಾಹ್ಮಣ ತುಳು, ಪುತ್ತೂರು ಶಬ್ದ ವಿವೇಚನೆ, ಶಿವಳ್ಳಿ ಮತ್ತು ಶಿವರೂಪ ಇತ್ಯಾದಿ ಹಾಗೂ ನಾಲ್ಕನೆಯದರಲ್ಲಿ; ನನ್ನ ಪತಿ (ಲಕ್ಷ್ಮಿಬಾಯಿ ಪಾವೆಂ), ನನ್ನ ಉಡುಪಿಯ ಜೀವನ (ಪಾ.ವೆಂ), ಬದಲಾಗಿದೆ ಉಡುಪಿ ಇತ್ಯಾದಿ ಲೇಖನಗಳಿವೆ.
ಕನ್ನಡ ಸಾಹಿತ್ಯಸಂಶೋಧನೆ ಮಾಡಲು ಮೊತ್ತಮೊದಲು ಕಂಪ್ಯೂಟರ್ ಬಳಸಿದವರು ಡಾ. ಶ್ರೀನಿವಾಸ ಹಾವನೂರರು (1928-2010). ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದುದು, ವೈವಿಧ್ಯಮಯವಾದುದು. ಸಣ್ಣ ಕಥೆ, ಲಲಿತ ಪ್ರಬಂಧ, ಜೀವನ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ವಿಮರ್ಶೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ನಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಹಿಂದೆ ಮುಂಬಯಿಯ ಟಾಟಾ ಮೂಲಭೂತ ವಿಜ್ಞಾನ ಸಂಸ್ಥೆಯ ಗ್ರಂಥಪಾಲಕರಾಗಿದ್ದರು. ಮುಂದೆ ಮಂಗಳೂರು ಮತ್ತು ಮುಂಬಯಿ ವಿ.ವಿ.ಯ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದರು. ಆಮೇಲೆ ಪುಣೆಯಲ್ಲಿ ಮರಾಠಿ ಕನ್ನಡ ಸ್ನೇಹ ಸಂವರ್ಧನೆಯಲ್ಲಿ ಪಾತ್ರವಹಿಸಿದರು.. ಕೊನೆಗೆ ಕರ್ನಾಟಕ ಸರಕಾರದ ಸಮಗ್ರ ದಾಸ ಸಾಹಿತ್ಯ ಸಂಪಾದಕರಾಗಿ ೫೦ ಸಂಪುಟಗಳ ಪ್ರಕಟಣೆಯ ನೇತೃತ್ವ ವಹಿಸಿದರು. ಕನ್ನಡದ ನಾಡೋಜರೆಂದು ಹೆಸರಾದರು. ...
READ MORE