ಹರಿದಾಸರ ಸಮಾಜಮುಖಿ ಕೀರ್ತನೆಗಳು ಸಂಪುಟ-1

Author : ಕೃಷ್ಣ ಕೊಲ್ಹಾರ ಕುಲಕರ್ಣಿ

Pages 252

₹ 200.00




Published by: ವಿಜಯ ಪ್ರಕಾಶನ
Address: ವಿಜಯಪುರ
Phone: 9342018470

Synopsys

‘ಹರಿದಾಸರ ಸಮಾಜಮುಖಿ ಕೀರ್ತನೆಗಳು ಸಂಪುಟ-1 ’ ಕೃತಿಯು ಕೃಷ್ಣ ಕೊಲ್ಹಾರ ಕುಲಕರ್ಣಿ ಹಾಗೂ ಸುಭಾಸ ಕಾಖಂಡಕಿ ಅವರ ಸಂಪಾದಿತ ಬರಹಗಳ ಸಂಕಲನವಾಗಿದೆ.ಸಂತರು, ಶರಣರು, ಹರಿದಾಸರ ಬದುಕು ಎಂದರೆ ಬೆಟ್ಟದ ಮೇಲೆ ಅರಳಿದ ಸುಂದರವಾದ ಹೂವು ಇದ್ದಂತೆ. ತನ್ನ ಪಾಡಿಗೆ ತಾನು ಬೆಳೆದು ಮೊಗ್ಗಾಗಿ ಹೂವಾಗಿ ಅರಳಿ ಪರಿಸರದಲ್ಲೆಲ್ಲ ಪರಿಮಳವನ್ನು ಬೀರುವುದು. ಆ ಪರಿಮಳವನ್ನು ಆಘ್ರಾಣಿಸುವುದು ಬಿಡುವುದು ಪರಿಸರದ ಜನರ ಮನಸ್ಸಿಗೆ ಬಿಟ್ಟಿದ್ದು. ಆದರೆ, ಅದರ ಆಕರ್ಷಣೆಗೆ ಒಳಗಾದರೆ ಸಾಕು, ನಿರಂತರ ಆ ಪರಿಸರದಲ್ಲೇ ಬದುಕುವ ಆಸೆ ಸಹಜವಾಗಿ ಬರುತ್ತದೆ. ಆ ಪರಿಮಳವನ್ನೇ ಬೇಕಿದ್ದರೆ ಮಾನವ ಬದುಕಿನ ಶಾಶ್ವತ ಮೌಲ್ಯಗಳು ಎನ್ನಬಹುದು. ಹರಿದಾಸರ ಕೀರ್ತನೆಗಳೆಂದರೆ ಅಂತಹ ಮೌಲ್ಯಗಳ ಕಟ್ಟು ಎನ್ನುತ್ತದೆ ಈ ಕೃತಿ.

About the Author

ಕೃಷ್ಣ ಕೊಲ್ಹಾರ ಕುಲಕರ್ಣಿ
(16 October 1940)

ಕೇಂದ್ರ ಸರ್ಕಾರದ ಪ್ರಸಾರ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಡಾ. ಕೃಷ್ಣಕೊಲ್ಲಾರ ಕುಲಕರ್ಣಿ ಅವರು ಇತಿಹಾಸ-ಸಂಶೋಧನೆಗಳಲ್ಲಿ ವಿಶೇಷ ಆಸಕ್ತಿ ಉಳ್ಳವರು. ಬಿಜಾಪುರ ಜಿಲ್ಲೆಯ ಕೋಲ್ಹಾರದವರಾದ ಅವರು ಕಾದಂಬರಿ, ನಾಟಕ ಜೀವನ ಚಿತ್ರಗಳನ್ನು ಪ್ರಕಟಿಸಿದ್ದಾರೆ. ಆದಿಲ್‌ ಷಾಹಿ ಕಾಲದ ಪಠ್ಯಗಳ ಕನ್ನಡ ಅನುವಾದ ಯೋಜನೆಯ ಸಂಪಾದಕರಾಗಿದ್ದರು. ಸಿಂದಗಿಯ ಬಿಂದಗಿ, ಕರ್ನಾಟಕ ವೈಭವ ವಾರಪತ್ರಿಕೆ, ಮಾಧ್ವಮಠಗಳು, ಆದಿಲ್‌ಶಾಹಿ ಆಸ್ಥಾನದ ಸಾಹಿತ್ಯ (ಸಂಶೋಧನೆ), ಮಹಿಮಾಪತಿರಾಯರ ಕೀರ್ತನೆಗಳು, ಕೃಷ್ಣದಾಸರ ಕೀರ್ತನೆಗಳು, ತಿಂಮಾಯಣ, ಶ್ರೀಸತ್ಯಧ್ಯಾನದರ್ಶನ (ಸಂಪಾದನೆ), ರತ್ನಾಕರ, ಮನೆ ಮುಳುಗಿತು (ಕಾದಂಬರಿ), ದಾಸ ಮಹಿಪತಿ, ದಾಸ ಜಗನ್ನಾಥ, ಮನುಕುಲ ಒಂದೇ (ನಾಟಕಗಳು), ಜ್ಞಾನಾರ್ಜನೆ (ಸಣ್ಣ ಕಥೆ) ಪ್ರಕಟಿತ ಕೃತಿಗಳು. ಅವರು ಗಮಕ ಕಲಾ ಪರಿಷತ್ತಿಗೆ ಅಧ್ಯಕ್ಷರಾಗಿದ್ದರು (2006).  ...

READ MORE

Related Books