ಸಮಾಜದಲ್ಲಿ ಜಾತಿ ಪ್ರಜ್ಞೆಯ ಸೂಕ್ಷ್ಮ ಮತ್ತು ಸಂಕೀರ್ಣ ಒಲವು ಹಾಗೂ ನಲಿವುಗಳು ಹೇಗಿವೆ ಎಂಬುದನ್ನು ಅರ್ಥೈಸಿಕೊಳ್ಳಲು ನಡೆಸಿದ ಪ್ರಯತ್ನವೇ - ಈ ಕೃತಿ- ಜಾತಿ ಸಂವಾದ. ಸಾಮಾಜಿಕ ಅಭಿಪ್ರಾಯಗಳಿ ಇಲ್ಲಿವೆ. ಬಹುಪಾಲು ವೈಯಕ್ತಿಕ ಮತ್ತು ಖಾಸಗಿ ವಲಯದಲ್ಲೇ ಉಳಿದಿದ್ದು ಜಾತಿ ಕುರಿತ ಚರ್ಚೆ,ಸಂಪೂರ್ಣ ಮುಕ್ತವಾದ ಸಾರ್ವ ಜನಿಕ ಸಂವಾದವಾಗಿ ಬೆಳೆದು ಆರು ತಿಂಗಳ ಕಾಲ ವಿವಿಧ ಸ್ತರಗಳ ಸಾವಿರಾರು ಓದುಗರನ್ನು ಒಂದು ವಿಚಾರ ವೇದಿಕೆಗೆ ತಂದಿದೆ. ಪತ್ರಿಕೋದ್ಯಮದಲ್ಲಿ ಇದೊಂದು ಅಪೂರ್ವ ಸಾಮಾಜಿಕ ಪ್ರಯೋಗ. ಜಾತಿ ವ್ಯವಸ್ಥೆ ಮತ್ತು ಆಚರಣೆ ಕುರಿತು ತಾತ್ವಿಕ ವಿಮೋಚನೆ, ಅವುಗಳ ಸಾಮಾಜಿಕ-ರಾಜಕೀಯ ಆಯಾಮಗಳೂ ಚರ್ಚಿತವಾಗಿವೆ.