ಜೀವ ಭಾವಗಳ ತೇರನೇರಿ

Author : ಗುರುಪಾದ ಮರಿಗುದ್ದಿ

Pages 148

₹ 120.00




Year of Publication: 2017
Published by: ಸಿದ್ದಲಿಂಗೇಶ್ವರ ಬುಕ್‌ ಪಬ್ಲಿಕೇಷನ್ಸ್‌
Address: ಮುಖ್ಯ ರಸ್ತೆ, ಕಲಬುರ್ಗಿ- 585101
Phone: 9880020808

Synopsys

ಒಟ್ಟು ಹತ್ತು ಲೇಖನಗಳಿರು ಈ ಕೃತಿಯು ಕನ್ನಡದ ಮೇರು ಲೇಖಕರ ಬರಹಗಳ ಕುರಿತು ಈ ಲೇಖನಗಳು ವಿವರಿಸಿವೆ. ಕನ್ನಡದ ದೀಪ ಪದಂತಹ ಅಭಿಮಾನ ಒತ್ತರಿಸುವ ಕವಿತೆಗಳಿಂದ, ಕನ್ನಡ ಛಂದಸ್ಸಿನ ಚೂಲಮೂಲಗಳನ್ನು ಜಾಲಾಡಿ ನಿಖರ ವಿವರ ನೀಡುವ ವಿದ್ವತ್‌ ಕೃತಿಯಿಂದ ಡಾ. ಕರ್ಕಿ ಅವರು ಅಧ್ಯಯನಶೀಲರಿಗೆ,  ಅಧ್ಯಾಪಕರಿಗೆ ಇಂದಿಗೂ ಮಾದರಿಯಾಗಿದ್ದಾರೆ.

ಶಿವರುದ್ರಪ್ಪನವರೂ ಅದೇ ತೆರನಲ್ಲಿ, ಕವಿತೆ, ವಿಮರ್ಶೆಯಲ್ಲಿ ಅಪೂರ್ವ ಕೃತಿಗಳನ್ನು ನೀಡಿದ್ದಾರೆ. ಬೆ೦ಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ರೂವಾರಿಗಳಾಗಿ, ಹಲವು ಸಾಹಿತ್ಯ ಯೋಜನೆಗಳನ್ನು ಆರಂಭಿಸಿದವರು ಅವರು.ಅವರ ವಿಮರ್ಶಾ ಕೃತಿಗಳನ್ನು ವಿಮರ್ಶಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ.

ಎರಡು ಕಾವ್ಯ ಕೃತಿಗಳನ್ನು, ಒಂದು ಅನುಭವ ಕಥನವನ್ನುಇಲ್ಲಿ ಪರಿಶೀಲಿಸಲಾಗಿದೆ. ನರಗುಂದ ಹೋರಾಟವಾಧರಿಸಿ ಬರೆದ ಕಾದಂಬರಿಯ ವಿಮರ್ಶೆಯಾಗಿದೆ.ಗಾಂಧೀಜಿಯವರ ಗ್ರಾಮ ಸ್ಟರಾಜ್ಯದ ಚಿ೦ತನೆಗಳ ಬಗೆಗೆ ಈ  ಕೃತಿಯಲ್ಲಿ ವಿವರಿಸುತ್ತದೆ.

About the Author

ಗುರುಪಾದ ಮರಿಗುದ್ದಿ
(20 June 1956)

ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’.  ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...

READ MORE

Excerpt / E-Books

ರತ್ನಾಕರನ ಭೋಗ-ಯೋಗದ ತೊಡಕು, ಅಕ್ಷಯವಸ್ತ್ರ- ಲೇಖನಗಳು ವಿಮರ್ಶೆ,ವಿಶ್ಲೇಷಣೆ, ‌ ವೈಜಾರಿಕತೆಗಳ ಸ್ಪರ್ಶ ಪಡೆದಿವೆ. ಭರತೇಶನ ಚಿತ್ರಣದಲ್ಲಿ ಭೋಗ, ಯೋಗಗಳು ಸಮನ್ವಯಗೊಂಡಿಲ್ಲ ಮತ್ತು ಇತರ ಪಾತ್ರಗಳು ಅದರ ಪ್ರಭಾವ ಪಡೆದುದಿಲ್ಲ; ಕಾವ್ಯದಲ್ಲಿ ಭೋಗ ವಿಜೃಂಭಿಸಿ ವೈರಾಗ್ಯ, ತ್ಯಾಗಗಳು ಸಹಜ ವಿಕಾಸವನ್ನು ಹೊಂದಿಲ್ಲ  ಎಂದು ಶಿವರುದ್ರಪ್ಪನವರು  ನಿದರ್ಶನಗಳ ಜೊತೆಗೆ ವಿವರಿಸಲು ಪ್ರಯತ್ನಿಸುತ್ತಾರೆ. ಅಲ್ಲಿಯವರೆಗೆ ರತ್ನಾಕರರವರ್ಣಿ ಭೋಗ-ಯೋಗಗಳನ್ನು ಸಮನ್ವಯಗೊಳಿಸಿದ ಕವಿ ಎಂದು ಕನ್ನಡ ವಿಮರ್ಶೆಯಲ್ಲಿ ಬಿಂಬಿತವಾದ ಗಾಢ ನಂಬಿಕೆಯನ್ನು ಪ್ರಶ್ನಿಸಿ ಹೊಸ ವಿಚಾರವನ್ನು, ಚರ್ಚೆಯನ್ನು ಈ ಮೂಲಕ ಅವರು ಆರಂಭಿಸುತ್ತಾರೆ. ಅವರು ನಿದರ್ಶನಗಳೊಂದಿಗೆ ಆಕರದ ಅನುಮಾನ, ಪ್ರಶ್ನೆಗಳಿಗೆ ವಿಮರ್ಶಕರು ಗ೦ಭೀರವಾದ ಚಿಂತನೆಗೆ ತೊಡಗಬೇಕಾಗುತ್ತದೆ.

ಪರಂಪರೆಯ ಬಗೆಗೆ ಶಿವರುದ್ರಪ್ಪನವರೆಗೆ ತುಡಿತವಿದೆ. “ಪರಂಪರೆ ಮತ್ತು ರಾಘವಾಂಕ ಪ್ರತಿಭೆ' ಇದಕ್ಕೆ ಇನ್ನೊಂದು ನಿದರ್ಶನ. ಹರಿಹರನ ಕಾವ್ಯ ಪರಂಪರೆಗೆ ಮುಖಾಮುಖಿಯಾಗಿ ತನ್ನದೇ ಕಾವ್ಯ ಮಾರ್ಗವನ್ನು ರಾಘವಾಂಕ ಕಟ್ಟಿಕೊಂಡುದನ್ನು "ದಂತ ಭಗ್ನ” ಕತೆಯು ಸೂಚಿಸುತ್ತದೆ೦ದು ಗುರುತಿಸುವುದು ಕುತೂಹಲಕರವಾಗಿದೆ.     ರಾಘವಾಂಕನು ಮತಧರ್ಮದ ಮಿತಿಗಳನ್ನು ಮೀರಿ ರಚಿಸಿದ ಕೃತಿ. ಹರಿಶ್ಚಂದ್ರ ಕಾವ್ಯವಾದರೆ,ಇತರ ಕೃತಿಗಳು ಮತಧರ್ಮಕ್ಕೆ ಒಳಪಟ್ಟು ರಚಿಸಿದವುಗಳು. ಸಿದ್ದರಾಮಚರಿತೆ ಲೋಕಕಲ್ಯಾಣದ ವಸ್ತುವಿನ ಶೈವ ಸಾತ್ವಿಕ ಕಾವ್ಯ. ಸೋಮನಾಥ ಚರಿತೆ ಅನ್ಯಮತ ದ್ವೇಷದ ತಾಮಸಿಕೆಯಿ೦ದ ತುಂಬಿದೆ. ಆದಯ್ಯನ ಉಗ್ರ ವ್ರತನಿಷ್ಠೆ ಪಶಂಸಿಸುವ ಡಾ. ಆರ್‌.ಸಿ. ಹಿರೇಮಠರ "ಮಹಾಕವಿ ರಾಘವಾಂಕ'ದ ಅಭಿಮತವನ್ನುತಾತ್ರಿಕವಾಗಿ ಖಂಡಿಸುತ್ತಾರೆ.

ಮತ-ಧರ್ಮ ಪ್ರಚಾರದ ಕಾವ್ಯಗಳನ್ನು ಸಹಿಸಬಹುದು,ಖಂಡನೆಯ, ಅನ್ಯಮತ ವಿನಾಶ ಚಿ೦ತನೆಯ ದೃಷ್ಟಿಯನ್ನು ಒಪ್ಪಲಾಗದೆಂದು ಅವರ ನೀತಿಯಾಗಿದೆ. ಹಾಗಾಗಿ ಪರಂಪರೆಯಲ್ಲಿಟ್ಟು ರಾಘವಾಂಕನ ಕಾವ್ಯಗಳ ಶಕ್ತಿ,ಇತಿಮಿತಿ ಎರಡನ್ನೂ ಗುರುತಿಸುತ್ತಾರೆ.ಅವರು ಬರೆದಿರುವ "ಅಕ್ಷಯವಸ್ತ'ವು ತೌಲನಿಕ ವಿಮರ್ಶೆಗೆ ಉತ್ತಮವಿದರ್ಶನವಾಗಿದೆ. ಅಲ್ಲಿ ದ್ರೌಪದಿ ವಸ್ತಾಪಹರಣ, ಅಕ್ಷಯವಸ್ತ್ರ ಪ್ರಸಂಗಗಳು ಮೂಲಭಾರತದಲ್ಲಿ, ಪಂಪ-ರನ್ನರಲ್ಲಿ,ಕುಮಾರವ್ಯಾಸನಲ್ಲಿ, ನನ್ನಯ್ಯ ಕವಿಯಲ್ಲಿ ಚಿತ್ರಿತವಾದತೆರ, ರೀತಿ ವಿವರಿಸುತ್ತ ಕವಿಗಳ ಆಶಯ, ವರ್ಣನೆಗಳ ವ್ಯತ್ಯಾಸ ಗ್ರಹಿಸಲಾಗಿದೆ. ಈ ಬಗೆಯ ತೌಲನಿಕ ವಿಮರ್ಶೆಗೆ ಬಹು ಭಾಷಾ ಪರಿಚಯ, ಓದಿನ ವಿಸ್ತಾರ, ತುಲನೆಯ ಕ್ರಮ ಕವಿ ಕಾವ್ಯ ಹಿನ್ನಲೆಗಳ ಅಗತ್ಯವಿರುತ್ತದೆ

Related Books