ಲೇಖಕ ಎಸ್. ಶಿವಾನಂದ ಅವರ ’ಮಹಾತ್ಮ ಮತ್ತು ಗುರುದೇವ ಸಂವಾದ’ ಕೃತಿಯು ಲೇಖನ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಯು. ಆರ್.ಅನಂತಮೂರ್ತಿ ಅವರು, ಮಹಾತ್ಮ ಮತ್ತು ಗುರುದೇವ ಇಬ್ಬರ ನಡುವೆ ಹಲವು ಭಿನ್ನಾಭಿಪ್ರಾಯಗಳಿದ್ದವು. ಈ ಭಿನ್ನಾಭಿಪ್ರಾಯಗಳು ಒಂದು ದೊಡ್ಡ ಸತ್ಯವನ್ನು ಆವಿಷ್ಕಾರ ಮಾಡಿಕೊಳ್ಳುವ ಪ್ರಯತ್ನದ ಅಂಗಾಂಗಗಳಂತೆ ಸಾಮರಸ್ಯಕ್ಕಾಗಿ ಹಾತೊರೆಯುತ್ತಿದ್ದವು. ಪ್ರಪಂಚದ ಚರಿತ್ರೆಯಲ್ಲಿ ಕೆಲವು ಸಾರಿ ಮಾತ್ರ ಎರಡು ಚೈತನ್ಯಗಳು ಒಂದಕ್ಕೊಂದು ಎದುರಾಗುವ, ಎದುರಾಗಿ ಒಂದು ಇನ್ನೊಂದನ್ನು ಒಳಗೊಳ್ಳುವ ಸಂವಾದ ನಡೆಯುತ್ತದೆ. ಅಂತಹ ಒಂದು ಸಂವಾದ ಗಾಂಧಿ ಮತ್ತು ಟ್ಯಾಗೋರರ ನಡುವೆ ನಡೆದಿದೆ. ಈಗಲೂ ಇಬ್ಬರ ವಾದವೂ ಪ್ರಸ್ತುತವಾಗಿಯೇ ಉಳಿದಿದೆ’ ಎನ್ನುತ್ತಾರೆ.
ಎಸ್. ಶಿವಾನಂದ ಅವರು ವಿಮರ್ಶಕರು, ಚಿಂತಕರು ಲೇಖಕರು. ಅವರದು ಮೂಲತಃ ಪ್ರಮೇಯ ಕಟ್ಟುವ ಮನಸ್ಸು. ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಅವರಿಗೆ ಪಾಶ್ಚಿಮಾತ್ಯ ಸಾಹಿತ್ಯ ಮತ್ತು ಥಿಯರಿಗಳ ಅಭ್ಯಾಸದ ಹಿನ್ನೆಲೆಯೂ ಇದೆ. ಕೃತಿಗಳು: ಮಹಾತ್ಮ ಮತ್ತು ಗುರುದೇವ ಸಂವಾದ, ಸಾಹಿತ್ಯ ಮತ್ತು ಸಾಹಿತ್ಯೇತರ ...
READ MORE