ಲೇಖಕ ಬಸವರಾಜ ಫಕೀರಪ್ಪ ಸುಣಗಾರ ಅವರ ಲೇಖನಗಳ ಸಂಕಲನ ‘ಅನ್ನಿಸಿದ್ದು’. ಕೃತಿಗೆ ಬೆನ್ನುಡಿ ಬರೆದ, ಶಿ.ಗು. ಕುಸುಗಲ್ಲ ‘ವ್ಯಕ್ತಿ ಸಾಧನೆ, ಸೇವೆ, ನಾಡು ನುಡಿ, ಶಿಕ್ಷಣ, ಮನೋವಿಕಾಸ, ದೈಹಿಕ ಮತ್ತು ಸಾಮಾಜಿಕ ಸ್ವಾಸ್ಥ ಮೊದಲಾಗಿ ತಮ್ಮ ಅಡಿ ಬರಹಗಳಲ್ಲಿ ಮಾಡಿದ ಚಿಂತನೆಗಳು ಇವರ ಮನದಾಳದಿಂದ ಹೊರಹೊಮ್ಮಿದವು. ಸರಳ ಸುಂದರ ಶೈಲಿಯಿಂದ ನಿರೂಪಿತಗೊಂಡ ಲೇಖನಗಳು ಓದುಗರ ಮನಸ್ಸಿಗೆ ಹಿಡಿಸುತ್ತವೆ. ಜಾಗೃತಗೊಳಿಸುವ, ಚಿಂತನೆಗೆ ಅಣಿಗೊಳಿಸುವ ಇವರ ವಿಚಾರ ಸರಣಿ ವಿಶೇಷವಾದುದು.ಜನಪರ ನಿಲುವಿನ ಬಿಡಿ ಬರಹಗಳನ್ನು ಈ ಕೃತಿಯಲ್ಲಿ ಸಂಕಲನಗೊಳಿಸಿದ ಸಾರ್ಥಕ ಭಾವ ಲೇಖಕರಲ್ಲಿದೆ. ಓದುಗರ ಮನ ಮುಟ್ಟುವಲ್ಲಿ, ಅರಳಿಸುವಲ್ಲಿ ಹಾಗೂ ಅರಿವು ಮೂಡಿಸುವ ದಿಸೆಯಲ್ಲಿ ಈ ಹೊತ್ತಿಗೆ ಯಶಸ್ವಿಯಾಗುತ್ತದೆ. ಸುಂದರ ಸಮಾಜ ನಿರ್ಮಾಣಕ್ಕೆ ಇಂಥ ಸುವಿಚಾರಗಳು ಹೆದ್ದಾರಿಗಳಾಗುತ್ತವೆ.’ ಎಂದು ಪ್ರಶಂಸಿದ್ದಾರೆ.
ಲೇಖಕ ಬಸವರಾಜ ಫಕೀರಪ್ಪ ಸುಣಗಾರ ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಗೇರಿಯವರು. ತಂದೆ ಫಕೀರಪ್ಪ, ತಾಯಿ ನಿಂಗಮ್ಮ. ಬಿಎ, ಟಿಸಿಎಚ್ ಪೂರೈಸಿದ್ದಾರೆ. ಪ್ರಶಸ್ತಿ: ಆದಶ೯ ಶಿಕ್ಷಕ ಪ್ರಶಸ್ತಿ,ಗುರು ಕುಲ ರಾಜ್ಯ ಪ್ರಶಸ್ತಿ, ವರ್ಷದ ವ್ಯಕ್ತಿ ಪ್ರಶಸ್ತಿ 2013,ಮೌಲ್ಯ ಶಿಕ್ಷಣ ಸಂಪದ ರಾಜ್ಯ ಪ್ರಶಸ್ತಿ, ವಿವಿಧ ಮಠಾಧೀಶರಿಂದ ಸೇವಾ ರತ್ನ ಪ್ರಶಸ್ತಿ. ಕೃತಿಗಳು: ಅಭಿಮಾನದ ನನ್ನೂರು(ಅಂಕಣ ಬರಹಗಳ ಸಂಕಲನ), ನಿಜಶರಣ ಅಂಬಿಗರ ಚೌಡಯ್ಯನವರು(ಲೇಖನಗಳ ಸಂಗ್ರಹ), ಆದರ್ಶ ಶಿಕ್ಷಕ: ಒಂದು ಚಿಂತನೆ (ಲೇಖನಗಳ ಸಂಕಲನ), ಅನಿಸಿದ್ದು. ...
READ MORE