ವೀರಶೈವ ಹಂಡೆವಜೀರ ಜನಾಂಗದ ಪರಿಚಯ

Author : ಎನ್.ಸಿ. ಪಾಟೀಲ

Pages 46

₹ 20.00




Year of Publication: 2004
Published by: ಸಂಸ್ಕೃತಿ ಅಧ್ಯಯನ ಪೀಠ ವಿಜಾಪುರ

Synopsys

ವೀರಶೈವ ಹಂಡೆವಜೀರ ಜನಾಂಗದ ಪರಿಚಯ ಎಸ್‌.ಸಿ. ಪಾಟೀಲ ಅವರ ಕೃತಿಯಾಗಿದೆ. ಕರ್ನಾಟಕದ ಬಹುದೊಡ್ಡ ಸಮಾಜಗಳಲ್ಲಿ ಒಂದಾದ ವೀರಶೈವ ಸಮಾಜ ಬಹು ಪ್ರಾಚೀನ ಕಾಲದಿಂದಲೂ ಕನ್ನಡ ನಾಡು, ನುಡಿ ಸಂಸ್ಕೃತಿಗೆ ತನ್ನದೇ ಆದ ಮೌಲಿಕ ಕೊಡುಗೆಯನ್ನು ನೀಡುತ್ತ ಬಂದಿದೆ. ಕಾಲ, ದೇಶ, ಪರಿಸರಕ್ಕೆ ಅನುಗುಣವಾಗಿ ಈ ಸಮಾಜದಲ್ಲಿಯೂ ಅನೇಕ ಪ್ರವಾಹಗಳು ಹರಿದು ಬಂದಿವೆ. ಕೆಲವು ಸಲ ದೊಡ್ಡ ದೊಡ್ಡ ತೆರೆಗಳು ಬಂದು ಹೋಗಿವೆ. ಹನ್ನೆರಡನೆಯ ಶತಮಾನ ಇಂತಹ ದೊಡ್ಡ ತೆರೆಗೆ ಒಂದು ನಿದರ್ಶನವೆನ್ನ ಬಹುದು. ಆದರೆ ಈ ಪ್ರವಾಹ ನಿಂತನೀರಾಗಿಲ್ಲ. ನಿರಂತರ ಪ್ರವಹಿಸುವ ಜೀವಸೆಲೆಯಾಗಿ ಅನೇಕ ಏಳು ಬೀಳುಗಳನ್ನು ತನ್ನ ಒಡಲಲ್ಲಿ ಗರ್ಭಿಕರಿಸುತ್ತ ಹೊಸ ಬೆಳಕನ್ನು ಚೆಲ್ಲುತ್ತ ಹೊರ ಬಂದಿರುವದನ್ನು ಇತಿಹಾಸದುದ್ದಕ್ಕೂ ಕಾಣುತ್ತೇವೆ. ಪ್ರಸ್ತುತ ಸಮಕಾಲೀನ ಸಮಾಜದಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮುಂತಾದ ಕಾರಣಗಳಿಂದಾಗಿ ಈ ಸಮಾಜದಲ್ಲಿರುವ ಅನೇಕ ಒಳಪಂಗಡಗಳು ತಮ್ಮದೇ ಆದ ಸಂಘಟನೆಗಳ ಮೂಲಕ ಅವು ಸಾಕಷ್ಟು ಪ್ರಗತಿಯನ್ನು ಹೊಂದುತ್ತಲಿವೆ. ದೊಡ್ಡ ಸಮುದಾಯದ ಈ ಸಮಾಜ ದಲ್ಲಿ ಅನೇಕ ಅಲ್ಪಸಂಖ್ಯಾತ ಒಳಪಂಗಡಗಳು ಸಮಾಜದ ಮುಖ್ಯ ವಾಹಿನಿಗೆ ಇನ್ನೂ ಬಂದಿಲ್ಲ. ಇಂದು ಅನಿವಾರ್ಯವಾಗಿ ಅವು ಹೋರಾಟ, ಸಂಘಟನೆ ಯಂತಹ ಮಾರ್ಗವನ್ನು ಅನುಸರಿಸುತ್ತ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸಿವೆ. ಈ ಹಿನ್ನೆಲೆಯಲ್ಲಿ ವೀರಶೈವ ಹಂಡೆವಜೀರ ಸಮುದಾಯವು ಹೊರ ತಾಗಿಲ್ಲ. ತನ್ನ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಯ ಹಿನ್ನಲೆಯಲ್ಲಿ ವ್ಯವಸ್ಥಿತವಾದ ಸಂಘಟನೆಯನ್ನು ಹೊಂದುವ ಉದ್ದೇಶದಿಂದ ಪ್ರಸ್ತುತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿ ಮುಖ್ಯ ವೀರಶೈವ ಹಂಡೆವಜೀರ ಸಮುದಾಯದ ಸಂಘಟನೆ ಈ ಸಮಾಜದ ಸರ್ವಾಂಗೀಣ ಪ್ರಗತಿಯನ್ನು ಸಾಧಿಸುವ ಬಲವಾದ ಮುಖ್ಯ ಉದ್ದೇಶವಾಗಿ ಈ ಸಂಘಟನೆ ಹೊರ ಹೊಮ್ಮುವ ಸದಾಶಯವನ್ನು ಇಲ್ಲಿ ಹೊಂದಲಾಗಿದೆ. ಎಂದು ಜಿ.ಎನ್‌ ಪಾಟೀಲ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಎನ್.ಸಿ. ಪಾಟೀಲ
(22 July 1977)

ನಿಂಗಣ್ಣಗೌಡ ಚೆನ್ನಬಸಣ್ಣಪಾಟೀಲ್ ಮೂಲತಃ ಗದಗ ಜಿಲ್ಲೆಯ ತಾಲೂಕಿನ ಸಾಸರವಾಡ ಗ್ರಾಮದವರು. ಬಿ.ಎ. ಬಿ.ಇಡಿ. ಪದವೀಧರರು. ಗ್ರಾಮದಲ್ಲೇ ಕೃಷಿ ಕೈಗೊಂಡಿದ್ದಾರೆ. ಅರಳು ಮಲ್ಲಿಗೆ, ಕೆಂಪು ಬಾವುಟ-ಈ ಎರಡು ಅವರ ಕವನ ಸಂಕಲನಗಳು. ಶಿರಹಟ್ಟಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನ ಸಂದಿವೆ.  ...

READ MORE

Related Books