ಬರಹಗಾರರ ಸೃಷ್ಟಿಶೀಲತೆಯ ಸೋಜಿಗಗಳು ಎಂಬ ಉಪಶೀರ್ಷಿಕೆಯಡಿ ಲೇಖಕ ಟಿ.ಎಸ್. ಗೊರವರ ಅವರು ಸಂಪಾದಿಸಿದ ಲೇಖನಗಳ ಸಂಗ್ರಹ ಕೃತಿ-ಬರವಣಿಗೆಯ ತಾಲೀಮು. ಬೆನ್ನುಡಿಯಲ್ಲಿ ಸಂಪಾದಕರು ಹೇಳುವಂತೆ ‘ಬಹುತೇಕ ಕಲೆಗಳಿಗೆ ತನ್ನದೇ ಆದ ರೂಢಿಗತ ಮಾದರಿಗಳಿದ್ದ ಹಾಗೆ ಬರವಣಿಗೆಗೆ ಯಾವುದೇ ನಿರ್ದಿಷ್ಟ ಮಾದರಿಗಳು ಇರಲಾರವು. ಬರವಣಿಗೆಗೆ ಬೇಕಾಗಿರುವ ಬಹುದೊಡ್ಡ ಪೂರ್ವ ತಾಲೀಮು ಅನುಭವದ ಮಾಗುವಿಕೆ. ಧ್ಯಾನಸ್ಥ ಸ್ಥಿತಿ. ಒಬ್ಬ ಬರಹಗಾರ ಈ ಎರಡನ್ನೂ ತನ್ನದಾಗಿಸಿಕೊಳ್ಳುವ ವಿಧಾನದಲ್ಲೇ ಬೇರೆ ಬರಹಗಾರರಿಗಿಂತ ಭಿನ್ನವಾಗಬಲ್ಲ. ಯಾವುದೇ ಲೇಖಕನಿಗೆ ಪೂರ್ವ ತಾಲೀಮು ಕೇವಲ ಬದುಕಿನ ಅನುಭವಗಳಿಂದ ಲಭ್ಯವಾದರೆ ಸಾಲದು. ಬರಹಕ್ಕೆ ಚಾಲಕ ಶಕ್ತಿ, ಅಭಿವ್ಯಕ್ತಿಯ ಸೇತುವೆಯಾದ ಭಾಷಿಕ ವಿನ್ಯಾಸಗಳು ಕೈ ಹಿಡಿಯಬೇಕು. ಈ ನೆಲೆಯಲ್ಲಿ ಪ್ರತಿ ಬರಹಗಾರನೂ ತಾಲೀಮು ನಡೆಸಿರುತ್ತಾನೆ. ಕನ್ನಡದ ಸಂವೇದನಾಶೀಲ ಬರಹಗಾರರು ತಮ್ಮ ಬರವಣಿಗೆಯ ತಾಲೀಮಿನ ಕುರಿತು ಇಲ್ಲಿ ಬರೆದಿದ್ದಾರೆ’ ಎನ್ನುವ ಮೂಲಕ ಪುಸ್ತಕದಲ್ಲಿ ಸಂಕಲನಗೊಂಡ ವಿಷಯಗಳ ಸ್ವರೂಪವನ್ನು ದಾಖಲಿಸಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ಗ್ರಾಮದ ಟಿ.ಎಸ್. ಗೊರವರ, 1984 ಜೂನ್ 10 ರಂದು ಜನಿಸಿದರು. ರಾಜೂರು, ಗಜೇಂದ್ರಗಡದಲ್ಲಿ ವಿದ್ಯಾಭ್ಯಾಸ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಭ್ರಮೆ (2007) ಕಥಾ ಸಂಕಲನ, ಆಡು ಕಾಯೋ ಹುಡುಗನ ದಿನಚರಿ (2011) ಅನುಭವ ಕಥನ, ಕುದರಿ ಮಾಸ್ತರ (2012) ಕಥಾ ಸಂಕಲನ, ರೊಟ್ಟಿ ಮುಟಗಿ (2016) ಕಾದಂಬರಿ, ಮಲ್ಲಿಗೆ ಹೂವಿನ ಸಖ (2018) ಕಥಾ ಸಂಕಲನ ಪ್ರಕಟಿತ ಕೃತಿಗಳು. ತನ್ನ ಎದೆಯ ಮೆದುವನ್ನೇ ನಾದಿ ನಾದಿ ಮಿದ್ದು ಒಂದು ಹದದಲ್ಲಿ ಕೆತ್ತಿದಂತಿರುವ ಇವರ ...
READ MORE