ಕೆ. ಸತ್ಯನಾರಾಯಣ ಅವರ ಪ್ರಬಂಧಗಳ ಸಂಕಲನ ನಮ್ಮ ಪ್ರೀತಿಯ ಕ್ರಿಕೆಟ್. ಇದು ಒಟ್ಟು ಎಂಟು ವಿವಿಧ ಪ್ರಬಂಧಗಳಿರುವ ಕೃತಿ. ಪ್ರತಿಯೊಂದು ಪ್ರಬಂಧದ ವಿಷಯವೂ ಆಸಕ್ತಿದಾಯಕವಾಗಿದೆ. "ನಮ್ಮ ಪ್ರೀತಿಯ ಕ್ರಿಕೆಟ್" "ಕೆಲವು ಮೇಷ್ಟ್ರುಗಳು"ಮತ್ತೆ ಬಾಲ್ಯಕ್ಕೆ ಕರೆದೊಯ್ದರೆ, "ದೇವರನ್ನು ನಂಬುವುದು" "ಗೆಳೆಯರು ಉಳಿಯುವರೆ" ನಮ್ಮಲ್ಲೊಂದು ಆಧ್ಯಾತ್ಮಿಕ ಚಿಂತನೆಯನ್ನು,ಅಲೌಕಿಕ ಜಿಜ್ಞಾಸೆಯನ್ನು ಹುಟ್ಟುಹಾಕುತ್ತದೆ. "ಮಧ್ಯಾಹ್ನದ ಸೊಬಗು" ಸಿದ್ಧ ಮಾದರಿಯನ್ನು ಬದಿಗಿಟ್ಟು ಹೊಸ ಆಯಾಮದಲ್ಲಿ ಪ್ರಕೃತಿಯೊಂದಿಗಿನ ಅನುಸಂಧಾನದ ಮೂಲಕ ಗಮನವನ್ನು ಸೆಳೆದರೆ, "ಓದುವ ಜನರು" ಮತ್ತು "ರೈಲು ಪ್ರಯಾಣದ ಸ್ವಾರಸ್ಯಗಳು" ತೀರಾ ಸಾಮಾನ್ಯವೆನಿಸುವ ಸಂಗತಿಗಳಲ್ಲಿ ಇರುವ ಬದುಕಿನ ಸಣ್ಣಪುಟ್ಟ ಚೇತೋಹಾರಿ ಅನುಭವಗಳನ್ನು ಪರಿಚಯಿಸುತ್ತದೆ.
ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...
READ MORE