ಲೇಖಕ ಬಿ.ಜಿ.ಎಲ್. ಸ್ವಾಮಿ ಅವರು ಬರೆದ ಕೃತಿ-ಸಸ್ಯ ಪುರಾಣ. ಸಸ್ಯಗಳ ವಿಸ್ಮಯ ಲೋಕದ ಬಗ್ಗೆ ಕನ್ನಡಿಗರಿಗೆ ಮಾಹಿತಿ ನೀಡಿದ ಇವರ ಕೃತಿ ಹಸಿರು ಹೊನ್ನು ಪ್ರಕಟಿಸಿರುವ ಲೇಖಕರು, ಈಗ ಮತ್ತೆ ಸಸ್ಯ ಪುರಾಣ ಕೃತಿ ಬರೆದಿದ್ದಾರೆ. ಇಲ್ಲಿ ಬಿಡಿ ಲೇಖನಗಳಿವೆ. ಹಾಸ್ಯಮಯವಾಗಿ ಹೇಳುತ್ತಲೇ ವಿಜ್ಞಾನದ ಗಂಭೀರತೆಯನ್ನು, ಜೀವನದಲ್ಲಿ ಅದರ ಅನಿವಾರ್ಯತೆಯನ್ನು ಬಿಂಬಿಸುವ ಲೇಖಕರ ಶೈಲಿ ಓದುಗರನ್ನು ಸೆಳೆಯುತ್ತದೆ.
ಬಿ. ಜಿ. ಎಲ್. ಸ್ವಾಮಿ ಅಂತರ್‌ರಾಷ್ಟ್ರೀಯ ಮಟ್ಟದ ಸಸ್ಯವಿಜ್ಞಾನಿ, ಹಿರಿಯ ವಿದ್ವಾಂಸ, ಸಾಹಿತಿ, ಚಿಂತನಶೀಲ ಬರಹಗಾರ ಡಾ. ಬಿ.ಜಿ.ಎಲ್. ಸ್ವಾಮಿ. `ಶ್ರೇಷ್ಠ ವಿಜ್ಞಾನಿ' ಎಂದು ಹೆಸರಾಗಿದ್ದ ಖ್ಯಾತ ಸಂಶೋಧಕ ಸ್ವಾಮಿ ಅವರ ಪೂರ್ಣ ಹೆಸರು ’ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣಸ್ವಾಮಿ’. ಕನ್ನಡದ ಹಿರಿಯ ಸಾಹಿತಿ ಡಿವಿಜಿಯವರ ಪುತ್ರ. 1916ರ ಫೆಬ್ರುವರಿ ಐದರಂದು ಜನಿಸಿದ ಅವರು ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡರು. ತಂದೆಯ ಗುಂಡಪ್ಪ ಹಾಗೂ ಅವರ ಗ್ರಂಥ ಭಂಡಾರದಿಂದ ಪ್ರತಿಭಾನ್ವಿತರಾದ ವ್ಯಕ್ತಿ. ಪ್ರಾಥಮಿಕದಿಂದ ಪದವಿಯವರೆಗೆ ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ ಅವರು ಸೆಂಟ್ರಲ್ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ವಿದ್ಯಾರ್ಥಿ ಆಗಿರುವಾಗ ಕರ್ನಾಟಕ ಸಂಘದ ಕಾರೈದರ್ಶಿ ...
READ MORE