ಹರಿವು ಡಾ.ಎಂ ಎಸ್ ಮಣಿ ಅವರ ಲೇಖನಗಳ ಸಂಗ್ರಹ. "ಪತ್ರಿಕಾ ಬರವಣಿಗೆಯಲ್ಲಿಯೇ ಹೊಸ ರೂಪ ಆಕಾರಗಳನ್ನು ಅರಳಿಸಲು ಸಾಧ್ಯವಾದರೆ ಅಲ್ಲಿ ಲೇಖಕರು ಸೃಷ್ಟಿಯಾಗುತ್ತಾರೆ. ತಮ್ಮ ನಿತ್ಯದ ವೃತ್ತಿಯಲ್ಲಿ ತಮ್ಮ ಮೂಲ ಸಂವೇದನೆಯ ಹಂಬಲಗಳಿಗೆ ಅವಕಾಶ ಮಾಡಿಕೊಳ್ಳುತ್ತಾರೆ. ಇಂಥವರ ಸಾಲಿನಲ್ಲಿ ಗೆಳೆಯ ಮಣಿ ಸೇರಿದ್ದಾರೆ. ವಿವಿಧ ಅಭಿವ್ಯಕ್ತಿ ವಿನ್ಯಾಸಗಳ ಮೂಲಕ ಪತ್ರಿಕಾ ಬರವಣಿಗೆಯಲ್ಲಿ ಸಮತೋಲನ ಸಾಧಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಸಾಹಿತ್ಯ ಕೃಷಿಯ ಆಂತರಿಕ ತುಡಿತ ಮತ್ತು ಪತ್ರಿಕಾ ಬರವಣಿಗೆಯ ಪ್ರಾಮಾಣಿಕ ಅನಿವಾರ್ಯತೆಗಳ ನಡುವೆ ಸಾಧಿಸಿದ ಸಮತೋಲನದ ರೂಪವಾಗಿ ಅವರ 'ಹರಿವು' ಕೃತಿ ಮೂಡಿಬಂದಿದೆ" ಎಂದು ಲಕ್ಷ್ಮಣ ಕೊಡಸೆ ಪುಸ್ತಕಕ್ಕೆ ಬರೆದ ಮತುಗಳಲ್ಲಿ ಹೇಳಿದ್ದಾರೆ.
ಡಾ.ಎಂ.ಎಸ್. ಮಣಿ ಅವರು ಪತ್ರಿಕಾ ರಂಗದಲ್ಲಿ ಉಪಸಂಪಾದಕ, ಸುದ್ದಿ ಸಂಪಾದಕರಾಗಿ , ಅಂಕಣಕಾರಾಗಿ 25 ವರ್ಷಗಳ ಅನುಭವ ಹೊಂದಿದ್ದಾರೆ. ಮಾಧ್ಯಮ ಅಕಾಡೆಮಿಯಂಥ ಅನೇಕ ಸಂಘ ಸಂಸ್ಥೆಗಳಲ್ಲಿ ಸದಸ್ಯತ್ವ ಪಡೆದುಕೊಂಡಿದ್ದು, ಪತ್ರಕರ್ತರ ಸಂಘಟನೆ, ಕಾರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ, ಸಂಸ್ಕೃತಿ, ಸಂಗೀತ ಕ್ಷೇತ್ರಗಳಲ್ಲಿಯೂ ಆಸಕ್ತಿ ಉಳ್ಳವರು. ಚಿಂತಕ ಸಾಧಕ ಹೆಚ್ ವಿಶ್ವನಾಥ್, ಕರುನಾಡಿನ ತ್ಯಾಗರಾಜರು, ತಲ್ಲಣ,ಹರಿವು, ಒಡಲಾಗ್ನಿ, ಭಾವಭಿತ್ತಿ, ಕಡಗೋಲು, ಮನುಭಾರತ, ಸುಡುಬಯಲು ಇವು ಮಣಿ ಅವರ ಕೃತಿಗಳು. ...
READ MORE