ರವೀಂದ್ರ ಭಟ್ಟ ಅವರ ಅಂಕಣ ಬರಹಗಳ ಸಂಗ್ರಹ ‘ಸಂಪನ್ನರು’. ಕುಲಪತಿಗಳು ಕೆ.ಎಸ್.ರಂಗಪ್ಪ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಅವರು ಹೇಳುವಂತೆ ವಿವಿಧ ವ್ಯಕ್ತಿಗಳ, ವಿಷಯಗಳ ಸಂಗ್ರಹವೇ ಈ ಕೃತಿ. ಸಂಕಣ ಬರಹಗಳ ಹೆಸರಿನಲ್ಲಿ ಸಿದ್ಧಗೊಂಡ ಈ ಬರಹಗಳು ಒಂದು ಇತಿಮಿತಿಯಲ್ಲಿ ಅನಾವರಣಗೊಂಡಿದ್ದು, ದೊಡ್ಡ ಚಿಂತನೆಗೆ ಹಾಗೂ ಓದಿಗೆ ಅವಕಾಶ ಮಾಡಿಕೊಡುವಲ್ಲಿ ಅನುಮಾನವಿಲ್ಲ ಎಂದಿದ್ದಾರೆ.
ಕೃತಿಯ ಪರಿವಿಡಿಯಲ್ಲಿ ರಾಬಟ್ ಮಂಡೆಲ್, ವಿಧಾನಸೌಧ ಕನ್ನಡಮಯ ಆಗಬೇಕು -ದೇಜಗೌ, ನಿಂಜಲಿಂಗಪ್ಪ, ಇದು ಸತ್ಯನ್, ಒಂದು ನಗು...ನೂರಾರು ನೆನಪು..ಅಪ್ಪಟ ದೇಸೀ ಪ್ರತಿಭೆ, ಮಾನವತಾವಾದಿ ಡಿವಿಕೆ ಮೂರ್ತಿ, ಹೆಮ್ಮೆಯ ವಿಜ್ಞಾನಿ ಡಾ.ವಿ.ಪ್ರಕಾಶ್, ದೂರಶಿಕ್ಷಣದ ವಿಜ್ಞಾನ: ನನ್ನ ಕನಸು ಸೇರಿದಂತೆ 62 ಶೀರ್ಷಿಕೆಗಳ ಅಂಕಣ ಬರಹಗಳು ಈ ಕೃತಿಯಲ್ಲಿವೆ.
ಹಿರಿಯ ಪತ್ರಕರ್ತ, ಲೇಖಕ ರವೀಂದ್ರ ಭಟ್ಟ ಅವರು ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್.ಸಿ. ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. 1990ರಲ್ಲಿ ಸಂಯುಕ್ತ ಕರ್ನಾಟಕದಿಂದ ವೃತ್ತಿ ಆರಂಭಿಸಿದ ಅವರು ನಂತರ ಕನ್ನಡಮ್ಮ, ಅಭಿಮಾನಿ, ಅರಗಿಣಿ, ಈ ಸಂಜೆ, ಉದಯವಾಣಿಗಳಲ್ಲಿ ಸೇವೆ ಸಲ್ಲಿಸಿದ್ದು, 1995ರಿಂದ ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಇವರೇ ಬರಮಾಡಿಕೊಂಡ ಬರ’, ‘ಹೆಜ್ಜೇನು’ (ಆದಿವಾಸಿ ನಾಯಕಿ ಜಾಜಿ ತಿಮ್ಮಯ್ಯ ಅವರ ಜೀವನ ಚರಿತ್ರೆ), ‘ಬದುಕು ಮರದ ಮೇಲೆ’, ‘ಮೂರನೇ ಕಿವಿ’, ‘ಸಂಪನ್ನರು’, ‘ಅಕ್ಷಯ ನೇತ್ರ’, ...
READ MORE