ಕೊನೆಗೂ ಖರೆ ನಾಟಕಕಾರ ಆಗಲೇ ಇಲ್ಲ ಗಿರೀಶ್ ಕಾರ್ನಾಡ್

Author : ಎನ್. ಕೆ. ಮೋಹನ್ ರಾಂ

Pages 167

₹ 160.00




Year of Publication: 2019
Published by: ಶಿಶಿಭ ಪ್ರಕಾಶನ
Address: ನಂ 2, 6ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು.
Phone: 9620402737

Synopsys

ಪತ್ರಕರ್ತ ಮೋಹನರಾಂ ಅವರು ಗಿರೀಶ್ ಕಾರ್ನಾಡ್ ಅವರ ಸಾಧನೆಗಳ ಹಿಂದಿರುವ ಹಲವು ಕಥನಗಳನ್ನು, ಕಾರ್ನಾಡರ ಮತ್ತೊಂದು ಪ್ರತಿಭೆಯ ಮುಖವನ್ನು ಇಲ್ಲಿ ಅನಾವರಣಗೊಳಿಸಿದ್ದಾರೆ.

ಮೋಹನ್ ರಾಂ ಸ್ವತಃ ರಂಗಕರ್ಮಿಯಾಗಿ, ಕಾರ್ನಾಡರ ಬದುಕಿನ ಕುರಿತು, ಹಲವು ದಿಸೆಗಳಲ್ಲಿ, ಹಲವಾರು ಪ್ರಮುಖ ಬರಹಗಾರರು, ವಿಮರ್ಶಕರು ಬರೆದ, ಆಡಿದ ಮಾತುಗಳನ್ನು ಕೂಡಾ ಸೇರಿಸಿಕೊಂಡು ಚರ್ಚೆಗೆ ಬಹುನೆಲೆಯನ್ನು ಒದಗಿಸಿದ್ದಾರೆ.

'ಪ್ರಭುತ್ವದ ಕಾಣಿಕೆಗಳಲ್ಲೇ ಬೆಳೆದ ಕಾರ್ನಾಡರ ಬದುಕು ಯಾವ ರೀತಿಯಲ್ಲೂ ಆದರ್ಶವಾಗಲಾರದು. ಆಗಕೂಡದೂ ಕೂಡ. ಪ್ರಭುತ್ವದ ಕಾಣಿಕೆಯನ್ನು ಭ್ರಷ್ಟತೆ ಎಂದು ತಿಳಿಯುವ ತುರ್ತು ಈ ಕಾಲದ ಅಗತ್ಯವಾಗಿದೆ. ಈ ಪುಸ್ತಕ ಬರೆದಿದ್ದರ ಕಾರಣ ಇದೇ. 'ಎಂದು ಹೇಳುತ್ತಾರೆ ಮೋಹನರಾಂ.

About the Author

ಎನ್. ಕೆ. ಮೋಹನ್ ರಾಂ

ಪತ್ರಕರ್ತ ಎನ್.ಕೆ. ಮೋಹನರಾಂ ಅವರು ಕರ್ನಾಟಕದ ಹಿರಿಯ ಪತ್ರಕರ್ತರಲ್ಲಿ ಒಬ್ಬರು. ಲಂಕೇಶ್ ಅವರ ಒಡನಾಡಿಯಾಗಿದ್ದ ಮೋಹನರಾಂ ಅವರು ಲಂಕೇಶ್, ಜಯಲಲಿತಾ, ರಾಮಾನುಜಾಚಾರ್ಯ ಅವರನ್ನು ಕುರಿತು ಪುಸ್ತಕ ಪ್ರಕಟಿಸಿದ್ದಾರೆ. ಬಳಸುವ ಭಾಷೆ, ವಿಚಾರಗಳ ಬೌದ್ಧಿಕ ಭಾರದಿಂದ ಕುಸಿಯಕೂಡದು, ಅದನ್ನು ಹೇಳುವ ಕ್ರಮ ನೇರ, ಸರಳ, ಚೇತೋಹಾರಿಯಾಗಿರಬೇಕು: ಲಂಕೇಶರಿಂದ ಇದನ್ನು ಕಲಿತ ಮೋಹನ್ ರಾಂ ಅದನ್ನು ತಮ್ಮ ಪುಸ್ತಕದಲ್ಲಿ ಮುಂದುವರೆಸಿದ್ದಾರೆ. ...

READ MORE

Reviews

ಹಿರಿಯ ಪತ್ರಕರ್ತ ಮೋಹನರಾಂ ಅವರು ಒಂದು ವರ್ಷದ ಹಿಂದೆ ಪಿ.ಲಂಕೇಶ್ ಅವರ ಇನ್ನೊಂದು ಮುಖವನ್ನು ತೋರುವ ಪುಸ್ತಕವೊಂದನ್ನು ಹೊರತಂದು, ಸುದ್ದಿ ಮಾಡಿದರು. ಈಗ ಗಿರೀಶ್ ಕಾರ್ನಾಡ್ ಅವರ ಸಾಧನೆಗಳ ಹಿಂದಿರುವ ಹಲವು ಕಥನ ಗಳನ್ನು, ಕಾರ್ನಾಡರ ಇನ್ನೊಂದು ಮುಖವನ್ನು ಹೊರಗೆಡಹಿದ್ದಾರೆ. ಯಾರ ಕುರಿತೂ ಮುಲಾಜು ವಹಿಸದೆ, ತಾನು ಕಂಡದ್ದನ್ನು ಮತ್ತು ತನ್ನ ಅನಿಸಿಕೆಯನ್ನು ಕಟುವಾಗಿ ಓದುಗರ ಮುಂದಿಡುವ ಮೋಹನರಾಂ ಅವರ ಶೈಲಿ ಕೆಲವರಿಗಾದರೂ ಇಷ್ಟವಾ ದೀತು, 'ಪ್ರಭುತ್ವದ ಕಾಣಿಕೆಗಳಲ್ಲೇ ಬೆಳೆದ ಕಾರ್ನಾಡರ ಬದುಕು ಯಾವ ರೀತಿ ಯಲ್ಲೂ ಆದರ್ಶವಾಗಲಾರದು. ಆಗಕೂಡದೂ ಕೂಡ. ಪ್ರಭುತ್ವದ ಕಾಣಿಕೆಯನ್ನು ಭ್ರಷತೆ ಎಂದು ತಿಳಿಯುವ ತುರ್ತು ಈ ಕಾಲದ ಅಗತ್ಯವಾಗಿದೆ. ಈ ಪುಸ್ತಕ ಬರೆದಿದ್ದರ ಕಾರಣ ಇದೇ.' ಎಂದು ಮೊದಲ ಮಾತಿನಲ್ಲಿ ಹೇಳಿರುವ ಮೋಹನರಾಂ ಅವರು, ಈ ಪುಸ್ತಕದಲ್ಲಿ ಹಲವು ಹೊಸ ಸಂಗತಿಗಳನ್ನು ಬಿಚ್ಚಿಡುತ್ತಾರೆ, ಕುತೂಹಲ ಮೂಡಿಸುತ್ತಾರೆ.

ಕೃಪೆ : ವಿಶ್ವವಾಣಿ ( 2019 ಡಿಸೆಂಬರ್‌ 22)

................................................................................................................................................................................

ಕಾರ್ನಾಡ್ ನಾಟಕಗಳ ಕುರಿತು ಹೊಸ ಚರ್ಚೆ

ಪುಸ್ತಕದ ಬಗ್ಗೆ ಹೇಳುವ ಮೊದಲು ರಂಗಕರ್ಮಿ, ಪತ್ರಕರ್ತ ಮತ್ತು ಲೇಖಕ ಎನ್.ಕೆ.ಮೋಹನ್‌ರಾಂ ಬಗ್ಗೆ ಎರಡು ಮಾತು. ಜಯಲಲಿತಾ ಮತ್ತು ಲಂಕೇಶ್ ಬಗ್ಗೆ ಇವರು ಇತ್ತೀಚೆಗೆ ಬರೆದ ಎರಡು ಪುಸ್ತಕಗಳೂ ತೀವ್ರ ಚರ್ಚೆಗೆ ಒಳಗಾಗಿವೆ. ಇದೇ ಜಾಡಿನಲ್ಲಿ ಕಾರ್ನಾಡ್ ಕುರಿತ ಪುಸ್ತಕ ಹೊರ ಬಂದಿದೆ. ಇವರು ಯಾವುದೋ, ಯಾರದೋ ರೆಫರೆನ್ಸ್ ಇಟ್ಟುಕೊಂಡು ಬರೆಯುವುದಿಲ್ಲ, ತಾವೇ ಆ ಘಟನೆ, ಕಾಲಘಟ್ಟಕ್ಕೆ ಸಾಕ್ಷಿಯಾಗಿದ್ದನ್ನು ಉಲ್ಲೇಖಿಸುತ್ತಾರೆ. ಪೂರಕವಾದ ಸಾಕ್ಷ್ಯಗಳನ್ನೂ ಇಡುತ್ತಾರೆ. ಖ್ಯಾತ ನಾಟಕಕಾರ ಎನ್ನುವ ಭುಜ ಕಿರೀಟವನ್ನು ಹೊತ್ತ ಗಿರೀಶ್ ಕಾರ್ನಾಡರ ಬಗ್ಗೆ ಮೋಹನ್ ರಾಂ ಹೇಳುವುದನ್ನು ಒಪ್ಪುವುದು ಕಷ್ಟವೆನ್ನಿಸಿದರೂ, ನಿರಾಕರಿಸುವುದೂ ಕಷ್ಟ. 'ತೆರೆಯ ಮೇಲೆ ಮಾತ್ರವಲ್ಲ

ನಿಜ ಜೀವನದಲ್ಲೂ ಕೆಟ್ಟನಟರಾಗಿದ್ದ ಕಾರ್ನಾಡರು ಕಣ್ಣೀರಿಗಾಗಿ ಸದಾ ಬಳಸುತ್ತಿದ್ದದ್ದು ಗ್ಲಿಸರಿನ್ನನ್ನೇ' ಎಂದು ಬರೆಯುವ ಮೋಹನ್‌ರಾಂ, ತಮ್ಮ ಮಾತು ಅಭಿಪ್ರಾಯಕ್ಕೆ ಪೂರಕವಾದ ಘಟನೆಗಳನ್ನು ಜೊತೆಯಲ್ಲಿಟ್ಟಿದ್ದಾರೆ. ಒಪ್ಪುವುದು ಬಿಡುವುದು ಬೇರೆ ವಿಷಯ. ಆದರೆ, ಒಪ್ಪಿತ ವಾದಗಳಿಗೆ ಇನ್ನೊಂದು ಮುಖವೂ ಇದೆ ಎನ್ನುವುದನ್ನು ಇಲ್ಲಿನ ಬರಹಗಳು ನೆನಪಿಸುತ್ತವೆ. 'ಪ್ರಭುತ್ವದ ಕಾಣಿಕೆಯನ್ನು ಭ್ರಷ್ಟತೆ ಎಂದು ತಿಳಿಯುವ ತುರ್ತು ಈ ಕಾಲದ ಅಗತ್ಯ. ಈ ಪುಸ್ತಕ ಬರೆದಿದ್ದರ ಕಾರಣ ಇದೇ' ಎಂದಿದ್ದಾರೆ ಮೋಹನ್‌ರಾಂ.  

ಕೃಪೆ : ವಿಜಯಕರ್ನಾಟಕ (2020 ಫೆಬ್ರುವರಿ 16)

Related Books