ಹಾದಿಯ ಹಣತೆಗಳು

Author : ಎಚ್.ಎನ್. ಗೀತಾ

Pages 96

₹ 120.00




Year of Publication: 2023
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

‘ಹಾದಿಯ ಹಣತೆಗಳು’ ಕೃತಿಯು ಎಚ್.ಎನ್. ಗೀತಾ ಅವರ ಸ್ಪೂರ್ತಿಧಾಯಕ ಬರಹಗಳ ಸಂಕಲನವಾಗಿದೆ. ಬಹಳಷ್ಟು ಬದುಕು ಕಂಡ ಹಲವು ರಂಗಗಳ ತಜ್ಞರು ಈ ಮಾಲೆಗೆ ಬರೆದಿರುತ್ತಾರೆ. ಸಕಾರಾತ್ಮಕ ಚಿಂತನೆ, ಆರೋಗ್ಯಕರ ಸ್ವಯಂ ನಂಬುಗೆ, ಅಹಂಕಾರವಲ್ಲದ ಆತ್ಮವಿಶ್ವಾಸ, ಆತ್ಮಾಭಿಮಾನ, ಜೀವನ ಕೌಶಲದ ವಿಷಯಗಳು, ದೈಹಿಕ ಆರೋಗ್ಯ, ಮಾನಸಿಕ ಧೈರ್ಯ, ನೈತಿಕ ಬಲ ಈ ಎಲ್ಲ ವಿಷಯಗಳನ್ನು ಒಳಗೊಂಡು ಈ 'ಮಾಲೆ' ಹೊರಬಂದಿದೆ. ಇದು ಜೀವನ ವಿಕಸನ ಮಾಲೆ, ಇಲ್ಲಿ ಜೀವನ ಕೌಶಲಗಳ ಸ್ಫೂರ್ತಿಯ ಕತೆಗಳನ್ನು, ಸರಳ ಭಾಷೆಯಲ್ಲಿ ತರುವ ಪ್ರಯತ್ನದ್ದು. ಮರೆತ ಜೀವನ ಮೌಲ್ಯಗಳನ್ನು, ಅರಿತು ನಡೆಯುವ ಆಶಯದ್ದು. ಅರಿವು-ಅಳವಡಿಕೆಯ ನಡುವಿನ ಅಂತರವನ್ನು ಕುಗ್ಗಿಸುವ ಲಕ್ಷದ್ದು ಹಾಗೂ ಡಿಜಿಟಲ್ ನಶೆಯ ಯುಗದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವ ಹಂಬಲದ್ದು. ಜೀವನ ವಿಕಸನ ಮಾಲೆ ಹೊಸಯುಗದ ಹೊಸ ಸವಾಲುಗಳನ್ನು ಉದ್ದೇಶಿಸುವ ನಮ್ರ ಪ್ರಯತ್ನದ್ದು. ಈ ಪುಸ್ತಕದಲ್ಲಿ ಹಾದಿಯ ಹಣತೆಗಳಾಗಿ ಇತರರ ಬಾಳನ್ನು ಹಸನು ಮಾಡಿದ ಅನುಕರಣೀಯರ ವ್ಯಕ್ತಿಚಿತ್ರಗಳಿವೆ, ಪ್ರಸಂಗಗಳಿವೆ. ಹಿಂದಿನ ಮರೆತ ಕತೆಗಳು, ಇಂದಿನ ಕಾಲಕ್ಕೂ ಸರಿ ಎನಿಸುವ ಬರಹಗಳೂ ಇಲ್ಲಿ ಸಂಗ್ರಹವಾಗಿವೆ.

About the Author

ಎಚ್.ಎನ್. ಗೀತಾ

ಬಿ. ಎಸ್ಸಿ ಪದವೀಧರರಾಗಿರುವ ಎಚ್. ಎನ್. ಗೀತಾ ಅವರಿಗೆ ಬಾಲ್ಯದಿಂದಲೇ ಕವನ ರಚನೆಯಲ್ಲಿ ಆಸಕ್ತಿ. ಜಾಹಿರಾತು ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದಾಗ ಅನುವಾದದಲ್ಲೂ ಆಸಕ್ತಿ ಬೆಳೆಸಿಕೊಂಡರು.  ಅಚಲ ಪತ್ರಿಕಾ ಬಳಗದಲ್ಲಿ ಕಾರ್ಯ ನಿರ್ವಹಿಸಿರುವ ಅವರಿಗೆ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಪ್ರಸ್ತುತ ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಉದ್ಯೋಗಿಯಾಗಿರುವ ಅವರಿಗೆ ಸಂಗೀತ, ಪ್ರವಾಸ ಹಾಗೂ ಚಾರಣಗಳಲ್ಲಿ ಆಸಕ್ತಿ, ನವಕರ್ನಾಟಕ ಪ್ರಕಟಿಸಿರುವ 'ಬಹುರೂಪಿ ಗಾಂಧಿ' ಮತ್ತು ಅಸ್ಸಾ ನಾಡಿಯಾ ’ಅಮ್ಮನಿಗೆ ಹಜ್ ಬಯಕೆ’ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books