‘ಮನಸಿನ ಪುಟಗಳ ನಡುವೆ’ ಕೃತಿಯು ರವಿ ಬೆಳಗೆರೆ ಅವರ ವಿಶೇಷ ಬರಹಗಳ ಸಂಗ್ರಹವಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿ ರವಿ ಬೆಳಗೆರೆಯವರ ಮಾತುಗಳನ್ನು ಹೀಗೆ ಕಟ್ಟಿಕೊಟ್ಟಿದ್ದಾರೆ; ಹಾಯ್ ಬೆಂಗಳೂರಿನ ಭಿನ್ನವಾಗಿ ಓ ಮನಸೇ ಓದುಗರು ಜಗತ್ತನೇ ತಂದು ನನ್ನ ಸುತ್ತ ಇಳಿಸಿದರು. ಪುಸ್ತಕ, ಇಂಟರ್ ನೆಟ್ಟು, ಪತ್ರಗಳು, ಸಿ.ಡಿ.ಗಳು ದೇಶ ವಿದೇಶಗಳ ವರದಿಗಳು, ಹಳೇ ಮ್ಯಾಗಝೀನುಗಳು ಹೀಗೆ ಒಂದು ದೊಡ್ಡ ಗುಡ್ಡೆಯ ಮಧ್ಯದಿಂದ ಎದ್ದು ಬಂದ ಪತ್ರಿಕೆ ಓ ಮನಸೇ. ಇಲ್ಲಿ ಮಿದುಳಿಗೆ ವಿಪರೀತ ಕೆಲಸ. ಆಡಿದ ಮಾತೆಲ್ಲವೂ ಹೃದಯದಿಂದಲೇ ಆಡಬೇಕೆಂಬುದು ಕಡ್ಡಾಯ. ಇಬ್ಬರು ಗೆಳೆಯರು ಪಕ್ಕ ಪಕ್ಕ ಕುಳಿತು ಮಾತಾಡಿದಂತೆ, ಆಶ್ಲೀಲ ಅನ್ನಿಸದಂತೆ, ಅವಾಚ್ಯವಾಗದಂತೆ, ಕೇವಲ ತನಗೋಸ್ಕರ ಬರೆದಿದ್ದಾರೆ ಎನ್ನಿಸುವಂತೆ ಬರೆಯಬೇಕು ಅಂತ ಕುಳಿತವನು ನಾನು, ತುಂಬಾ ಇಷ್ಟವಾದ ಹುಡುಗಿಗೆ “ನಿನ್ನನ್ನು ನಾನು ಸತ್ತು ಹೋಗುವಷ್ಟು ಇಂಟೆನ್ಸ್ ಆಗಿ ಪ್ರೀತಿಸ್ತಿದೀನಿ” ಅಂತ ಬರೆದು, ಆ ಹಾಳೆಯನ್ನು ಒಯ್ದು ಅವಳ ಕೈಗಿಟ್ಟು ಬಿಡುತ್ತಾನಲ್ಲ ಹುಡುಗ? ಹಾಗೆ unprepared ಆಗಿ ತುಂಬ ಚೆಂದಗೆ ಓ ಮನಸೇ… ಪತ್ರಿಕೆ ರೂಪುಗೊಳಿಸುತ್ತಾ ಹೋದೆ. ಅಪಾರವಾದ ಓದುಗ ಬಳಗವನ್ನು ಸೃಷ್ಟಿಸಿಕೊಂಡು ತನ್ನದೇ ವಿಭಿನ್ನ ಧಾಟಿಯಲ್ಲಿ ನಿರೀಕ್ಷೆಗೂ ಮೀರಿ ಬೆಳೆಯುತ್ತಾ ಹೋಯಿತು. ಈಗ ಪುಸ್ತಕರೂಪವಾಗಿ ಅದರ ಕೆಲವೊಂದು ಪುಟಗಳು ನಿಮ್ಮೆದುರಿಗಿದೆ.
ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...
READ MORE