‘ಕಂಡದ್ದು ಕಾಣದ್ದು’ ಕೃತಿಜಗತ್ತಿಗೆ ಹೀಗೊಂದು ಪಯಣ ಕೃತಿಯು ಸುಭಾಷ್ ರಾಜಮಾನೆ ಅವರ ಲೇಖನಸಂಕಲನವಾಗಿದೆ. ತಾವು ಓದಿ ಮೆಚ್ಚಿಕೊಂಡ, ಒಪ್ಪಿಕೊಂಡ ಕೃತಿಗಳು, ಕೃತಿಕಾರರು ಇತರ ಓದುಗರಲ್ಲೂ ನೆಲೆಗೊಳ್ಳಬೇಕೆಂಬ ಹಂಬಲ ಇವರ ಬರಹಗಳಲ್ಲಿ ಮೈದುಂಬಿಕೊಂಡಿದೆ. ರಾಮಭಾವು ಬಿಜಾಪುರೆ ಅವರ ಹಾರ್ಮೋನಿಯಂ ವಾದನದ ಕುರಿತ ಬರಹ, ಸರಸ್ವತಿ ರಿಸಬೂಡ ಸೇರಿದಂತೆ ಹಲವರ ಕುರಿತ ಲೇಖನಗಳನ್ನು ನಾವಿಲ್ಲಿ ಕಾಣಬಹುದು.
ಲೇಖಕ, ಅನುವಾದಕ ಸುಭಾಷ್ ರಾಜಮಾನೆ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕುಸನಾಳದವರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಸ್ನಾತಕೋತ್ತರ ಪದವಿ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಿಎಡ್ ಪದವಿ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿರುವ ಅವರು ಪ್ರಸ್ತುತ ಸರ್ಕಾರಿ ರಾಮನಾರಾಯಣ್ ಚೆಲ್ಲಾರಾಮ್ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನುವಾದಿಸಿರುವ ಕೃತಿಗಳು: `ದಿ ಆರ್ಟಸ್ಟ್' (ಮೈಕೆಲ್ ಹಜನ್ ವಿಸಿಯಸ್), 'ಬದುಕಿನ ಅರ್ಥವನ್ನು ಹುಡುಕುತ್ತಾ...' (ವಿಕ್ಟರ್ ಫ್ರಾಂಕ್ಲ್), 'ಮುಳುಗದಿರಲಿ ಬದುಕು' (ಎಪಿಕ್ಟೇಟಸ್), 'ರಾತ್ರಿಗೆ ಸಾವಿರ ಕಣ್ಣುಗಳು' (ಅಲೆಸ್ಸಂಡ್ರೋ ...
READ MORE