ಲೇಖಕ ಡಾ ಸುರೇಂದ್ರಕುಮಾರ ಕೆರಮಗಿ ಅವರ ‘ಸಾಹಿತ್ಯ ಸಂಜೀವಿನಿ’ ಕೃತಿಯು ಹೊಸಗನ್ನಡ ಸಾಹಿತ್ಯದ ಹಾಗೂ ಸಂಶೋಧನೆ ಕುರಿತು ಲೇಖನಗಳನ್ನು ಒಳಗೊಂಡಿದೆ. ಕನ್ನಡ ಸಾಹಿತ್ಯದ ಹಿರಿಮೆ ಗರಿಮೆಗಳ ಕುರಿತಾದ 12 ಲೇಖನಗಳಿವೆ. ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು, ಕಲಬುರ್ಗಿ ಜಿಲ್ಲೆಯ ಶತಮಾನದ ಸಂಶೋಧನೆ, ಕನ್ನಡ ನವೋದಯ ಸಾಹಿತ್ಯಕ್ಕೆ ಇಂಗ್ಲಿಷ್ ಗೀತೆಗಳ ಕೊಡುಗೆ, ಶ್ರೀಕೃಷ್ಣ ಆಲನಹಳ್ಳಿಯವರ ಕಾದಂಬರಿಗಳಲ್ಲಿ ಮಹಿಳಾ ಸಂವೇದನೆಗಳು, ಕನ್ನಡ ಕಾದಂಬರಿಗಳಲ್ಲಿ ದಲಿತ ಸಂವೆದನೆ ಗಳು,ಕನ್ನಡದಲ್ಲಿ ಅನುವಾದ ಸಾಹಿತ್ಯ, ಸೇರಿದಂತೆ 12 ಮಹತ್ವದ ಲೇಖನಗಳ ಸಂಗ್ರಹ ಇದಾಗಿದೆ. ಕನ್ನಡ ಸಾಹಿತ್ಯದಲ್ಲಿ ವ್ಯಕ್ತವಾದ ಜನಪರ ಕಾಳಜಿ ಹಾಗೂ ಅಧ್ಯಯನ ಪೂರ್ಣವಾದ ವಿಮರ್ಶಾತ್ಮಕ ಸಂಶೋಧನಾತ್ಮಕ ಗುಣಗಳಿಂದ ಕೂಡಿದ ಲೇಖನಗಳಿವೆ.
ಡಾ. ಸುರೇಂದ್ರಕುಮಾರ್ ಕೆರಮಗಿ ಅವರು ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನವರು. ಸ್ವಾಯತ್ತ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರು. "ಡಾ.ಹಾ.ಮಾ ನಾಯಕ ಅವರ ಅಂಕಣ ಸಾಹಿತ್ಯ ಒಂದು ಅಧ್ಯಯನ" ವಿಷಯವಾಗಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯವು ಇವರಿಗೆ ಪಿಎಚ್ ಡಿ ಪ್ರದಾನ ಮಾಡಿದೆ. ಹಳೆಗನ್ನಡ ಸಾಹಿತ್ಯದಲ್ಲೂ ಇವರಿಗೆ ಆಸಕ್ತಿ. ರಾಷ್ಟ್ರೀಯ,ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಕೃತಿಗಳು: ಆಯ್ದ ವೈಚಾರಿಕ ಪ್ರಬಂಧಗಳ ಸಂಗ್ರಹ, ಹಾ.ಮಾ ನಾಯಕ,ಕನ್ನಡದಲ್ಲಿ ಅಂಕಣ ಸಾಹಿತ್ಯ, ಸೃಷ್ಟಿ ಸೌರಭ, ಮಾತು ಮಥಿ ಸಿದಾಗ, ಸಾಹಿತ್ಯ ಸುಧೆ, ಸಾಹಿತ್ಯ ಸಂಜೀವಿನಿ, ಹೈದರಾಬಾದ ಕರ್ನಾಟಕದ ಪ್ರಮುಖ ಕಾದಂಬರಿಕಾರರು, ಮಡಿವಾಳ ...
READ MORE