ವಿಚಾರ-ವಿಹಾರ; ಕವಿ ಕೆ.ಎಸ್. ನಿಸಾರ್ ಅಹಮದ್ ಅವರ ಲೇಖನಗಳ ಸಂಗ್ರಹವಿದು. ಕಥೆ ಕೇಳು ಗುಬ್ಬಕ್ಕ, ನಿನ್ನ ವ್ಯಥೆಯ ಕಥೆ ಕೇಳು, ‘ನಡೀರ ಓಗಾನ, ಗಿಡ ನೆಡಾನ', ಹುದ್ದೆ ಮುದ್ದೆ ನಿದ್ದೆ : ಬದುಕು ಇಷ್ಟೇನೆ ಪದ್ದೆ?, ಅನಿರೀಕ್ಷಿತ ಪತ್ರ : ಫಲಿಸದ ಪ್ರೇಮ ಮತ್ತು ಸ್ನೇಹ', ವಯಸ್ಸೆಂಬ ಶಿಕ್ಷಕ, ಡಿ.ವಿ.ಜಿ. ಚಿತ್ರಿಸಿದ ಹಾಸ್ಯ ಪ್ರಸಂಗಗಳು, ಬೈ ವಿಮರ್ಶೆ - ಜೈ ವಿಮರ್ಶ, ಸಾಹಿತ್ಯದ ಸತ್ವವರ್ಧಕಗಳು, ಆಶಯ ಮತ್ತು ಅಭಿವ್ಯಕ್ತಿ, ಸಾಹಿತ್ಯದ ನೆಲೆ-ಬೆಲೆ’ ಮುಂತಾದವು ಒಳಗೊಂಡಿವೆ.
ಭಾವಗೀತೆಗಳ ಮೊದಲ ಕನ್ನಡ ಧ್ವನಿಸುರುಳಿ ‘ನಿತ್ಯೋತ್ಸವ’ದ ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ಕವಿತೆ, ವಿಮರ್ಶೆ, ಅನುವಾದದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರ ತಂದೆ ಮೈಸೂರು ಸರ್ಕಾರದಲ್ಲಿ ರೆವೆನ್ಯೂ ಅಧಿಕಾರಿಯಾಗಿದ್ದ ಕೆ.ಎಸ್. ಹೈದರ್ ಮತ್ತು ತಾಯಿ ಗೃಹ ವಿಜ್ಞಾನ ಪದವೀಧರೆ ಹಮೀದಾ ಬೇಗಂ. 1936ರ ಫೆಬ್ರುವರಿ 5ರಂದು ಜನಿಸಿದರು. ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು, ಹೊಸಕೋಟೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿಗಳಿಸಿದ ಇವರು ಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳಿಸಿದರು. ಮೈಸೂರು ಸರಕಾರ ಭೂವಿಜ್ಞಾನ ಇಲಾಖೆಯಲ್ಲಿ ಒಂದಿಷ್ಟು ಕಾಲ ಸೇವೆ ಸಲ್ಲಿಸಿದರು. ಅನಂತರ ಕಾಲೇಜು ...
READ MORE