‘ರಚನಾತ್ಮಕ ಚಿಂತನೆಗಳು’ ಲಲಿತಾಂಬ ವೃಷಭೇಂದ್ರಸ್ವಾಮಿ ಅವರ ಲೇಖನ ಸಂಗ್ರಹವಾಗಿದೆ. ಸಾಹಿತ್ಯ ರಚನೆಯಿಂದ ಸಮಾಜಕ್ಕೆ ಒಳ್ಳೆಯದಾಗಬೇಕೆಂಬ ಹಂಬಲ ಹೊತ್ತಿರುವ ಲೇಖಕಿ ಮೂವತ್ತು ಲೇಖನಗಳಲ್ಲಿ ತಮ್ಮ ಅಮೂಲ್ಯ ಚಿಂತನೆಗಳ ಧಾರೆಯನ್ನು ಹರಿಸಿದ್ದಾರೆ. ಸಭ್ಯ ನಡತೆ, ಉತ್ತಮ ಮೌಲ್ಯಗಳಿಂದ ನಾವು ಶ್ರೇಷ್ಠತೆಯ ತುತ್ತ ತುದಿಗೇರಲು ಸಾಧ್ಯವೆಂದು ಈ ಲೇಖನಗಳು ನಿರೂಪಿಸುತ್ತವೆ. ಉತ್ತಮ ವಿಚಾರಗಳು ಎಳೆಯರ ಮನದಲ್ಲಿ ಪರಿಣಾಮಕಾರಿಯಾಗಿ ಮೂಡುವಂತೆ ಹಿರಿಯರು ಶ್ರಮಿಸಬೇಕಾದ ಅಗತ್ಯದ ಬಗ್ಗೆ ಒತ್ತಿ ಹೇಳಲಾಗಿದೆ.
ವಿದ್ವಾಂಸ ವೃಷಭೇಂದ್ರ ಸ್ವಾಮಿ ಅವರು ಜನಿಸಿದ್ದು 1928ರಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ (ತಾ) ಎಂ.ಬಿ. ಅಯ್ಯನಹಳ್ಳಿಯಲ್ಲಿ. ಸೊನ್ನದ ಮಠದ ಮನೆತನದಲ್ಲಿ ಹುಟ್ಟಿದ ಅವರು ಕಾನಾಮಡುಗು, ಕೊಟ್ಟೂರುಗಳಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪಡೆದರು. ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಬಿ.ಎ. ಪದವಿ ಮತ್ತು ಆನಂತರ ಚಿನ್ನದ ಪದಕದೊಂದಿಗೆ ಎಂ.ಎ. ಪದವಿ ಪಡೆದರು. ಡಾ. ಆರ್. ಸಿ. ಹಿರೇಮಠ ಮಾರ್ಗದರ್ಶನದಲ್ಲಿ ಕನ್ನಡ ಸಾಹಿತ್ಯದಲ್ಲಿ ’ಕನ್ನಡ ಸಾಹಿತ್ಯದಲ್ಲಿ ಅಲ್ಲಮ ಪ್ರಭುದೇವ’ ಎಂಬ ವಿಷಯದ ಮೇಲೆ ಸಲ್ಲಿಸಿದ ಪ್ರಬಂಧಕ್ಕೆ ಪಿಎಚ್.ಡಿ ಪಡೆದರು. ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಸ್ಥೆಯ ವೀರಶೈವ ಕಾಲೇಜಿನಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು 1961ರಿಂದ ಕವಿವಿ ಕನ್ನಡ ಅಧ್ಯಯನ ಪೀಠದಲ್ಲಿ ...
READ MORE