ಧಾರ್ಮಿಕ ಚಿಂತಕ-ವಿಶ್ಲೇಷಕ ಡಾ. ಕೆ.ಎಸ್. ನಾರಾಯಣಾಚಾರ್ಯರ ಕೃತಿ ‘ಶುರುವಾಗಿರುವ ಮೂರನೇ ವಿಶ್ವಯುದ್ಧ!. ಚೀನಾದಲ್ಲಿ ಕೊರೊನಾ ವೈರಸ್ ಸೃಷ್ಟಿಯು ಮನುಷ್ಯರ ದುರಾಸೆಯ ಫಲವಾಗಿದೆ. ಇಡೀ ಜಗತ್ತಿನ ಮೇಲೆ ತನ್ನ ಪ್ರಭುತ್ವ ಸ್ಥಾಪನೆಯ ಹಾಗೂ ಮನುಷ್ಯ ದ್ವೇಷಿ ಗುಣಧರ್ಮವು ಜಗತ್ತಿನ ನೆಮ್ಮದಿ ಕುರಿತು ಚಿಂತಿಸದು. ಈ ಸಾಲಿನಲ್ಲಿ ಚೀನಾ ಸಾಗುತ್ತಿದ್ದು, ಅದಕ್ಕೆ ಕನ್ನಡಿ ಹಿಡಿದಂತೆ ಕೊರೊನಾ ವೈರಸ್ ಸೃಷ್ಟಿಸಿದೆ. ಇದು ಮೂರನೇ ವಿಶ್ವಯುದ್ಧಕ್ಕೆ ನಾಂದಿ ಹಾಡಲಿದೆ ಎಂದು ಲೇಖಕರು ತರ್ಕಿಸಿದ್ದಾರೆ. ಈ ತರ್ಕಗಳಿಗೆ ಅವರು ಕೆಲವು ಸುಪ್ತ, ಗುಪ್ತ ಹಾಗೂ ಸ್ಫೋಟಕ ಆಯಾಮಗಳ ಸುಳಿವುಗಳನ್ನು ನೀಡುತ್ತಾರೆ. ಚೀನಾದ ಕರಾಳ ಚಿಂತನೆಯು ನೈತಿಕತೆಯ ಅಧಃಪತನದ ದ್ಯೋತಕ ಎಂದು ಅಭಿಪ್ರಾಯಪಟ್ಟ ಬರಹಗಳನ್ನು ಈ ಕೃತಿ ಒಳಗೊಂಡಿದೆ.
ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...
READ MORE