ಲಕ್ಷ್ಮೀ ಮಚ್ಚಿನ ಅವರು ಭಾರತದ ಎಲ್ಲ ಪ್ರಧಾನಿಗಳ ಜೀವನ ಸಾಧನೆಯ ವಿವರಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಸಾಹಿತ್ಯ ಲೋಕದಲ್ಲಿ ಇದೊಂದು ಅನನ್ಯ ಸಾಧನೆ. ಅವರು ಈ ಕೃತಿಗಾಗಿ ನಡೆಸಿದ ಅಧ್ಯಯನ ಎಷ್ಟೊಂದು ಅಗಾಧವಾಗಿತ್ತು ಎಂಬುದು ಕೃತಿಯನ್ನು ವಿಶ್ಲೇಷಿಸುವಾಗ ಮನದಟ್ಟಾಗುತ್ತದೆ. ತಾವು ಕೆಲವು ಮಾಹಿತಿಗಳನ್ನು ಸಂಗ್ರಹಿಸಿದ ಮೂಲ ಲೇಖಕರನ್ನು, ಮೂಲಗಳನ್ನು, ಅಂತರ್ಜಾಲಗಳನ್ನು ಅವರು ಉಲ್ಲೇಖಿಸಿದ್ದಾರೆ. ಈ ವಿಚಾರಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವವರಿಗೆ ಇದು ಸಕಾಲಿಕ ಮಾರ್ಗದರ್ಶಕವಾಗಿದೆ. ನೆಹರೂ, ಶಾಸ್ತ್ರಿ, ಇಂದಿರಾ, ಮೊರಾರ್ಜಿ, ಚೌಧರಿ, ರಾಜೀವ್, ವಿಪಿ, ಚಂದ್ರಶೇಖರ್, ಪಿವಿಎನ್, ಅಟಲ್, ದೇವೇಗೌಡ, ಗುಜ್ರಾಲ್, ಸಿಂಗ್‌ರವರೆಗೆ ದೇಶದ ಚುಕ್ಕಾಣಿ ಹಿಡಿದ ಈ ನಾಯಕರು ತಮ್ಮ ಕಾರ್ಯವೈಖರಿಗೆ ಸಂಬಂಧಿಸಿ ವಿಭಿನ್ನವಾದ ಶೈಲಿಗಳನ್ನು ಅನುಸರಿಸಿದರು. ಆಯಾಯ ಕಾಲಘಟ್ಟಕ್ಕೆ ಸಂಬಂಸಿ ಇಂತಹ ಶೈಲಿಗಳು ಅವರಿಗೆ ಅನಿವಾರ್ಯವೂ ಆಗಿದ್ದವು. ಈ ನಾಯಕರ ವ್ಯಕ್ತಿತ್ವದ ಬಹುಮುಖಗಳ ಸಕಾರಾತ್ಮಕ ಅನಾವರಣ ಈ ಕೃತಿಯಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತದೆ. ಅಂತೆಯೇ ಆ ಕಾಲದ ವಿಶೇಷ ಘಟನೆಗಳು, ರಾಜಕೀಯ-ಸಾಮಾಜಿಕಆರ್ಥಿಕ- ಸಾಂಸ್ಕೃತಿಕ- ಸಾಂವಿಧಾನಿಕ - ಸಂದರ್ಭಗಳನ್ನು ಚಿತ್ರಿಸುವಲ್ಲಿಯೂ ಮಚ್ಚಿನ ಅವರು ನೈಪುಣ್ಯತೆ ಮೆರೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಕ್ಷ್ಮೀ ಮಚ್ಚಿನ ಪ್ರಸ್ತುತ ಉಡುಪಿ ನಿವಾಸಿ. ಬೆಳ್ತಂಗಡಿ ತಾಲೂಕಿನಲ್ಲಿ ಪತ್ರಕರ್ತನಾಗಿ ತನ್ನ 20ನೆಯ ವಯಸ್ಸಿಗೆ ತೊಡಗಿಸಿಕೊಂಡು ಹೊಸದಿಗಂತ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕದ ಬಳಿಕ ಉದಯವಾಣಿಯಲ್ಲಿ 2008ರಲ್ಲಿ ವರದಿಗಾರನಾಗಿ ಸೇರಿ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿ ಉಪಮುಖ್ಯ ವರದಿಗಾರನಾಗಿ ಕುಂದಾಪುರದಲ್ಲಿ 2018ರಿಂದ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ಆಸಕ್ತಿ. ಕಳೆದ ಅಷ್ಟೂ ವರ್ಷಗಳಿಂದ ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಅಭ್ಯುದಯಕ್ಕಾಗಿ , ಪರಿಸರ ಪೂರಕವಾಗಿ ಮಾಡಿದ ವರದಿಗಳು ನೂರಾರು. ಇದರಲ್ಲಿ ಫಲ ಕಂಡು ಗ್ರಾಮಾಂತರದ ಸಮಸ್ಯೆ, ಬವಣೆ ನೀಗಲ್ಪಟ್ಟಿದ್ದು ಉಲ್ಲೇಖನೀಯ. ಮಾನವಾಸಕ್ತ ...
READ MORE