ಪ್ರಸಿದ್ಧ ಲೇಖಕ ಜೋಗಿ ಅವರು ಬರೆದ ಕೃತಿ. ಬದುಕಿನಲ್ಲಿ ಅದೆಷ್ಟೋ ಜನರು ವಿವಿಧ ಸಂದರ್ಭಗಳಲ್ಲಿ ನಮ್ಮ ಬದುಕಿಗೆ ಒದಗಿಬಂದಿರುತ್ತಾರೆ. ಎಲ್ಲರ ಬದುಕೂ ಇಂಥ ನೆರವಿನ ಕೊಂಡಿಗಳ ಆಪ್ತ ಬಂಧವನ್ನೂ ಸಂಬಂಧವನ್ನೂ ಹೊಂದಿರುತ್ತದೆ. ಅವರು ಬದುಕಲು ಕಲಿಸಿದ ರೀತಿಯೇ ನಮ್ಮನ್ನು ನಡೆಸುವ ದಾರಿದೀವಿಗೆಯೂ ಆಗುತ್ತದೆ. ಹಾಗೆ ಬದುಕಲು ಕಲಿಸಿದವರ ಬಗ್ಗೆ ಇಲ್ಲಿ ಆಪ್ತವಾಗಿ ಲೇಖಕ ಜೋಗಿ ಹೇಳಿದ್ದಾರೆ.
ಜೋಗಿ, ಜಾನಕಿ, ಎಚ್. ಗಿರೀಶ್ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್ ರಾವ್ ಹತ್ವಾರ್ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್ 16ರಂದು. ಮೂಲತಃ ಸೂರತ್ಕಲ್ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಾಯ್ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...
READ MORE