ರೋಗ ಜಾನಪದ

Author : ಡಿ. ಲಿಂಗಯ್ಯ

Pages 234

₹ 120.00




Year of Publication: 2008
Published by: ಕರ್ನಾಟಕ ಜಾನಪದ ಪರಿಷತ್ತು
Address: #ಕರ್ನಾಟಕ ಸರಕಾರಿ ನೌಕರರ ವಸತಿ ಬಡಾವಣೆ, ಎಂ.ಎಸ್. ರಾಮಯ್ಯ ಆಸ್ಪತ್ರೆ, ಮಹಾದ್ವಾರದ ಹತ್ತಿರ, ನ್ಯೂಬಿ.ಇ.ಎಲ್ ರಸ್ತೆ ಬೆಂಗಳೂರು- 560054

Synopsys

‘ರೋಗ ಜಾನಪದ’ ಕೃತಿಯು ಡಿ.ಲಿಂಗಯ್ಯ ಹಾಗೂ ಚಕ್ಕೆರೆ ಶಿವಶಂಕರ್ ಅವರ ಲೇಖನಗಳ ಸಂಗ್ರಹವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಇಲ್ಲಿ ಹಳ್ಳಿಗಾಡಿನಲ್ಲಿ ರೋಗಗಳ ಕುರಿತಾಗಿ ಜನಪದರು ರೂಢಿಸಿಕೊಂಡಿರುವ ನಂಬುಗೆ, ಆಚರಣೆ, ಅದರಲ್ಲೇ ಹುಟ್ಟಿಬಂದ ಸಾಹಿತ್ಯ ಮುಂತಾದವರನ್ನು ದಾಖಲಿಸಲಾಗಿದೆ. ಪ್ಲೇಗಮ್ಮ, ಮಾರಿಯಮ್ಮ, ಎಡ್ಸ್ ದೇವತೆ ಇತ್ಯಾದಿಗಳ ಕುರಿತು ಪ್ರಸ್ತಾಪ ಸಹಜವಾಗೇ ಇಲ್ಲಿ ಜಾಗ ಪಡೆದಿದೆ. ಆದರೆ ಕ್ಷಯರೋಗಿಗಳ ಸ್ಯಾನಿಟೋರಿಯಮ್ನಲ್ಲಿ ಚಿಕಿತ್ಸೆಗಾಗಿ ವರ್ಷಗಟ್ಟಲೆ ತಂಗುವ ಗ್ರಾಮೀಣರು ಬೇಸರ ಕಳೆಯಲು ತಮ್ಮ ತಮ್ಮಲ್ಲೇ ರಚಿಸಿಕೊಳ್ಳುವ ಛೇಡಿಸುವ ಪದ್ಯಗಳು, ಚಾಲ್ತಿಗೆ ತರುವ ಪದಪುಂಜಗಳನ್ನೂ ಇಲ್ಲಿ ವಿಧೇಯವಾಗಿ, ಶಾಸ್ತ್ರೀಯವಾಗಿ ಬರೆಯಲಾಗಿದೆ.

About the Author

ಡಿ. ಲಿಂಗಯ್ಯ
(16 December 1939 - 13 September 2012)

ಜಾನಪದ ತಜ್ಞ,  ಸಾಹಿತಿ ಪ್ರೊ.ಡಿ. ಲಿಂಗಣ್ಣ ಅವರು ಜನಿಸಿದ್ದು 1939 ಡಿಸೆಂಬರ್‌ 16ರಂದು. ಶ್ರೀರಂಗಪಟ್ಟಣ ತಾಲ್ಲೂಕಿನ ಪೀ ಹಳ್ಳಿಯವರಾದ ಇವರು ಮಂಡ್ಯ ಹಾಗೂ ಮೈಸೂರಿನಲ್ಲಿ ಶಿಕ್ಷಣ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.  ಸಾಹಿತಿ, ಸಂಶೋಧಕರಾಗಿ ಕನ್ನಡ ಸಾಹಿತ್ಯದಲ್ಲಿ ಸೇವೆ ಸಲ್ಲಿಸಿರುವ ಇವರು ನಾಟಕ, ಕತೆ, ಕವನ, ಜೀವನ ಚರಿತ್ರೆ, ವ್ಯಕ್ತಿಚಿತ್ರಗಳು, ಪ್ರಬಂಧ ಹಾಗೂ ಗ್ರಂಥ ಸಂಪಾದನಾ ಕ್ಷೇತ್ರದಲ್ಲಿಯು ಸೇವೆ ಸಲ್ಲಿಸಿದ್ದಾರೆ. ಜಾನಪದ ಸಾಹಿತ್ಯದಲ್ಲಿ ಕೊಂತಿ ಪೂಜೆ, ಮಣ್ಣಿನ ಮಿಡಿತ, ಪಡಿನೆರಳು, ಬಯಲು ಸೀಮೆಯ ಜನಪದ ಗೀತೆಗಳು ಮುಂತಾದ ಕೃತಿಗಳನ್ನು ರಚಿಸಿದ್ದಾರೆ.  ಇವರಿಗೆ ...

READ MORE

Related Books