‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಎ.ಆರ್. ಮಣಿಕಾಂತ್ ಅವರ ಲೇಖನ ಸಂಕಲನ. ಈ ಕೃತಿ 25 ಮುದ್ರಣ ಕಂಡಿದ್ದು, 2009ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದೆ. ಇಲ್ಲಿ ಸ್ಪೂರ್ತಿದಾಯಕ ಕಥನಗಳಿವೆ. ಈ ಕೃತಿಯಲ್ಲಿ ದೇವ್ರಿದಾನೆ ಬಿಡಪ್ಪಾ, ಅಮ್ಮ, ತಂದೆಗೆ ಮಗಳ ಪತ್ರ, ತಲ್ಲಣಿಸದಿರು ಕಂಡ್ಯಾ, ಅವನಿಗೆ, ಕಲಾಂ ಪತ್ರ ಬರೆದರು, ಅವಳು ಸತ್ತ ನಂತರವೂ ಮಾತಾಡಿದಳು, ಜನಪ್ರತಿನಿಧಿಗಳಿಗೆ ಒಂದು ಬಹಿರಂಗ ಪತ್ರ, ಕೈ ಇಲ್ಲ ಕಾಲಿಲ್ಲ ಚಿಂತೆಯೂ ಇಲ್ಲ, ಅಮ್ಮ ಹೇಳಿದ ಎಂಟು ಸುಳ್ಳುಗಳು ಸೇರಿದಂತೆ 35 ಸ್ಪೂರ್ತಿದಾಯಕ ಲೇಖನಗಳಿವೆ.
ಪತ್ರಕರ್ತ, ಬರಹಗಾರರಾಗಿರುವ ಮಣಿಕಾಂತ್ ಅವರು ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆಯತನಹಳ್ಳಿಯವರು. ಆಟೋ ಮೊಬೈಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ವಿಜಯ ಕರ್ನಾಟಕ, ಹಾಯ್ ಬೆಂಗಳೂರು, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿರುವ ಇವರು ಈ ಗುಲಾಬಿಯು ನಿನಗಾಗಿ, ಮರೆಯಲಿ ಹ್ಯಾಂಗ, ಉಭಯ ಕುಶಲೋಪರಿ ಸಾಂಪ್ರತ, ಹಾಡು ಹುಟ್ಟಿದ ಸಮಯ ಎಂಬ ಅಂಕಣಗಳನ್ನು ಬರೆದಿದ್ದಾರೆ. ಇವರ ಬರೆದಿರುವ ಕೃತಿಗಳೆಂದರೆ ಅಮ್ಮ ಹೇಳಿದ ಎಂಟು ಸುಳ್ಳುಗಳು, ಹಾಡು ಹುಟ್ಟಿದ ಸಮಯ, ಅಪ್ಪ ಅಂದ್ರೆ ಆಕಾಶ, ಭಾವ ತೀರ ಯಾನ, ಮನಸು ಮಾತಾಡಿತು ಮುಂತಾದವು. ಇವರ ಅಮ್ಮ ಹೇಳಿದ ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ 2009