ಭಾಷಣ ಕೈಪಿಡಿ

Author : ಸಿ. ಆರ್. ಗೋಪಾಲ್

Pages 245

₹ 200.00




Year of Publication: 2019
Address: ಮಲ್ಲತಹಳ್ಳಿ, ಬೆಂಗಳೂರು- 560001
Phone: 08073067542

Synopsys

ಲೇಖಕ ಗೋಪಾಲ್‌ ಅವರ ಕೃತಿ ʻಭಾಷಣ ಕೈಪಿಡಿʼ. ಪುಸ್ತಕದ ಮುನ್ನುಡಿಯಲ್ಲಿ ಲೇಖಕಿ ಡಾ. ವಸುಂಧರಾ ಭೂಪತಿ ಅವರು, “ಹಿರಿಯ ಸಾಹಿತಿಗಳು ಹಾಗೂ ವಾಗ್ಮಿ ಡಾ. ಸಿ.ಆರ್. ಗೋಪಾಲ್ ಅವರು ರಚಿಸಿದ ಭಾಷಣ ಕೈಪಿಡಿ ಒಂದು ಸಂಶೋಧನಾ ಗ್ರಂಥವಾಗಿದೆ. ಭಾಷಣ ಒಂದು ಕಲೆ ಎಂದು ಜಗತ್ತಿನಾದ್ಯಂತ ಪರಿಗಣನೆಗೆ ಒಳಗಾಗಿದೆ. ಮಾತನಾಡುವವರೆಲ್ಲ ಭಾಷಣಕಾರರಾಗಲು ಸಾಧ್ಯವಿಲ್ಲ. ಅದೇ ರೀತಿ ಉಪನ್ಯಾಸ ಮಾಡುವವರು ಭಾಷಣಕಾರರಲ್ಲ. ಏಕೆಂದರೆ ಉಪನ್ಯಾಸವೆಂಬುದು ತರಗತಿಯ ಮಿತಿಯಲ್ಲಿ ವಿಷಯದ ನಿರ್ದಿಷ್ಟತೆಯಲ್ಲಿ ಹೇಳುವ ಬೋಧನೆ. ಇದು ಶೈಕ್ಷಣಿಕ ಶಿಸ್ತಿನ ಬೋಧನೆ. ಆದರೆ ಭಾಷಣ ಹಾಗಲ್ಲ, ಅಲ್ಲಿ ಕಲಿಯುವ ಆಸಕ್ತಿಯ ವಿದ್ಯಾರ್ಥಿಗಳಿರುವುದಿಲ್ಲ. ಅದಕ್ಕೆ ಬದಲಾಗಿ ಕೇಳುವ ಕುತೂಹಲದ ಪ್ರೇಕ್ಷಕರಿರುತ್ತಾರೆ. ಜೊತೆಗೆ ಕೇಳುಗರೆಲ್ಲ ಒಂದೇ ಮನೋಧರ್ಮದವರಲ್ಲ, ಒಂದೇ ಮನಸ್ಥಿತಿಯವರೂ ಅಲ್ಲ. ಭಿನ್ನ ಭಿನ್ನ ಅಭಿರುಚಿಯ, ಭಿನ್ನ ಭಿನ್ನ ಆಸಕ್ತಿಗಳ, ಭಿನ್ನ ಸಮುದಾಯಗಳ ಗುಂಪುಗಳು ಅಲ್ಲಿರುತ್ತವೆ. ಹೀಗಾಗಿ ಭಾಷಣ ಆಯಾ ಭಾಷಣಕಾರನ / ಭಾಷಣಕಾರ್ತಿಯ ಕಲಾತ್ಮಕ ಮೆರುಗಿನಿಂದಾಗಿ ಅದು ಸ್ವೀಕಾರ ಅಥವಾ ನಿರಾಕರಣೆಗೆ ಒಳಗಾಗುತ್ತದೆ. ಭಾಷಣಕ್ಕೆ ಜನಸಾಮಾನ್ಯರು, ಪಂಡಿತರು, ಜ್ಞಾನಿಗಳು ಹೀಗೆ ಎಲ್ಲರೂ ಸಮಾವೇಶಗೊಂಡಿರುತ್ತಾರೆ. ಎಲ್ಲರಿಗೂ ನಿಲುಕುವ ನೆಲೆಯೊಳಗೆ ಪ್ರಿಯವಾಗುವ ನಿಟ್ಟಿನಲ್ಲಿ ಮಾತನಾಡಬೇಕಾಗುತ್ತದೆ. ಆದ್ದರಿಂದ ಭಾಷಣಕಾರ / ಭಾಷಣಕಾರ್ತಿಗೆ ಮಾತು ಗೊತ್ತಿದ್ದರೆ ಸಾಲದು. ಮಾತನ್ನು ಆಕರ್ಷಣೀಯವಾಗಿ ಬಳಸುವುದರ ಜೊತೆಗೆ ಆಲೋಚನಾಪೂರ್ಣವಾಗಿ ಪ್ರಬುದ್ಧತೆಯಲ್ಲಿ ಬಳಸುವ ಪ್ರೌಢಿಮೆ ಇರಬೇಕಾಗುತ್ತದೆ. ವಿಚಾರವಿಲ್ಲದ ಯಾವುದೇ ಮಾತು ಜೊಳ್ಳಾಗುತ್ತದೆ. ವಿಚಾರ ತುಂಬಿದ್ದರೂ ಆಕರ್ಷಣೀಯ ನಿರೂಪಣೆ ಇಲ್ಲದ ಮಾತು ನೀರಸವಾಗುತ್ತದೆ. ಹೀಗಾಗಿ ಇವೆರಡನ್ನೂ ಸಮತೂಕದಲ್ಲಿ ಬಳಸುವ ಔಚಿತ್ಯ ಪ್ರಜ್ಞೆ ಭಾಷಣ ಮಾಡುವವರಿಗೆ ಇರಬೇಕಾಗುತ್ತದೆ. ಇದು ಕಲಾವಂತಿಕೆಯಿಂದ ಪ್ರಯೋಗವಾಗುವ ಮಾತುಗಾರಿಕೆ. ಹೀಗಾಗಿಯೇ ಭಾಷಣ ಶಬ್ದಾಡಂಬರವಲ್ಲ, ವಿಚಾರಗಳ ತುರುಕುವಿಕೆಯಲ್ಲ, ಅದೊಂದು ಸೃಜನಶೀಲ ಕಲೆ” ಎಂದು ಹೇಳಿದ್ದಾರೆ.

About the Author

ಸಿ. ಆರ್. ಗೋಪಾಲ್
(01 January 1953)

ಲೇಖಕ ಸಿ. ಆರ್. ಗೋಪಾಲ್ ಅವರು 01 ಜನವರಿ 1953ರಲ್ಲಿ ಜನಿಸಿದರು.  ತಂದೆ- ಸ್ವಾತಂತ್ರ್ಯ ಹೋರಾಟಗಾರ, ಆದರ್ಶ ರೈತ ಸಿ.ಕೆ. ರಾಮಾಚಾರ್, ತಾಯಿ ಇಂದಿರಾಬಾಯಿ. 1974 ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು.   ರೈತ ಮಕ್ಕಳ ತರಬೇತಿ ಕೇಂದ್ರ, ಧಡೇಸೂಗೂರು, ಸಿಂಧನೂರು ತಾಲೂಕು, ರಾಯಚೂರು ಜಿಲ್ಲೆಯಲ್ಲಿ ಕೃಷಿ ತರಬೇತಿಯನ್ನು ಪಡೆದು ಮದ್ರಾಸ್ ಸಮಾಜಕಾರ್ಯ ಶಾಲೆ, ಮದ್ರಾಸ್ ವಿಶ್ವವಿದ್ಯಾಲಯ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ ಪ್ರಸ್ತುತ ನಿವೃತ್ತಿ ಹೊಂದಿದ್ಧಾರೆ. ‘ಸಂಪಾದಕೀಯ -ಛೇಂಜ್ ಅಂಡ್ ಡೆವಲಪ್‍ಮೆಂಟ್ ಇನ್ ಲಂಬಾಣಿ ಸೊಸೈಟಿ, ಉತ್ಕ್ರಾಂತಿಯತ್ತ ಲಂಬಾಣಿಗಳು, ಸಮಾಜಕಾರ್ಯ ಸಿದ್ಧಾಂತ - ಶರಣರ ಮತ್ತು ದಾಸರ ಜೀವನ ದೃಷ್ಟಿ-ಒಂದು ತೌಲನಿಕ ಚಿಂತನೆ, ...

READ MORE

Related Books