ಪಾ.ವೆಂ. ಆಚಾರ್ಯರು ಕಂಡಂತೆ ಚಿತ್ರ ವಿಚಿತ್ರ ಈ ಜಗತ್ತು!

Author : ಎಸ್.ಎಲ್. ಶ್ರೀನಿವಾಸ ಮೂರ್ತಿ

Pages 328

₹ 125.00




Year of Publication: 2001
Published by: ಸಾಹಿತ್ಯ ಪ್ರಕಾಶನ,
Address: ಸಿಟಿ ಕ್ಲಿನಿಕ್ ಕಾಂಪ್ಲೆಕ್ಸ್, ದಾಜೀಬಾನ ಪೇಟೆ, ಹುಬ್ಬಳ್ಳಿ-580028

Synopsys

ಚಿಂತಕ ಪಾ.ವೆಂ. ಆಚಾರ್ಯ ಅವರು ದೇಶ-ವಿದೇಶದ ವಿಸ್ಮಯಕಾರಿ ಅಂಶಗಳನ್ನು ಬರೆದ ಲೇಖನಗಳ ಸಂಗ್ರಹ ಕೃತಿ-ಪಾ.ವೆಂ. ಆಚಾರ್ಯರು ಕಂಡಂತೆ ಚಿತ್ರ ವಿಚಿತ್ರ ಈ ಜಗತ್ತು!. ಪಾ.ವೆಂ. ಆಚಾರ್ಯರ ಸಮಗ್ರ ಸಾಹಿತ್ಯ ಸಂಪುಟದ ಭಾಗವಾಗಿ ಈ ಕೃತಿಯನ್ನು ಎಸ್. ಎಲ್. ಶ್ರೀನಿವಾಸ ಮೂರ್ತಿ ಸಂಪಾದಿಸಿದ್ದರೆ, ಡಾ. ಶ್ರೀನಿವಾಸ ಹಾವನೂರು ಪ್ರಧಾನ ಸಂಪಾದಕರು.

1959ರಲ್ಲಿ ಕಸ್ತೂರಿ ಮಾಸಪತ್ರಿಕೆ ಆರಂಭವಾದಾಗಿನಿಂದ ಪಾ.ವೆಂ. ಆಚಾರ್ಯರು ವಿಶ್ವದ ಕುತುಹಲಕಾರಿ ವಿಸ್ಮಯಕಾರಿ ಘಟನೆಗಳನ್ನು ಹಾಗೂ ಮಾನವಾಸಕ್ತಿಯ ಅಂಶಗಳನ್ನು ಕುರಿತು ಬರೆಯುತ್ತಾ ಬಂದಿದ್ದು, ಅವುಗಳನ್ನು ಇಲ್ಲಿ ಸಂಕಲಿಸಲಾಗಿದೆ. ಇವರ ಬರವಣಿಗೆ ವಿಷಯಗಳಲ್ಲಿ ವೈಶಾಲ್ಯತೆ ಇದೆ. ಯಾವ ಯಾವ ವಿಷಯ ಕುರಿತು ಬರೆದಿದ್ದಾರೆ ಎನ್ನುವುದಕ್ಕಿಂತ ಅವರು ಯಾವ ವಿಷಯವಾಗಿ ಬರೆದಿಲ್ಲ ಎಂಬುದೇ ಇಲ್ಲಿ ಹುಡುಕಾಡಬೇಕಿದೆ. ಅಷ್ಟು ಬರೆಹ ವೈವಿಧ್ಯತೆ ಕಾಣಬಹುದು. ಈ ಕೃತಿಯಲ್ಲಿ ಮದುವೆ, ಮನರಂಜನೆ, ವಿಜ್ಞಾನ, ಸಾಮಾಜಿಕ, ಸಂಸ್ಕೃತಿ, ಬೌಗೋಳಿಕ ವಿಸ್ಮಯಗಳು ಹೀಗೆ ವಿಷಯಗಳ ವೈವಿಧ್ಯತೆಯನ್ನೇ ಕಾಣಬಹುದು. ಪಾ.ವೆಂ. ಆಚಾರ್ಯರ ಪರಿಚಯದೊಂದಿಗೆ ಆರಂಭವಾಗುವ ಕೃತಿಯು ಇದು ಕ್ರಿಸ್ತನ ಪವಿತ್ರ ಶವವೆ?, ಇವರಿಗೆ ಗುಪ್ತಗಾಮಿನಿಯ ಮೋಹ ಸೇರಿದಂತೆ ಒಟ್ಟು 64 ವೈವಿಧ್ಯಮಯವಾದ ಲೇಖನಗಳಿವೆ.

About the Author

ಎಸ್.ಎಲ್. ಶ್ರೀನಿವಾಸ ಮೂರ್ತಿ

ಡಾ, ಎಸ್.ಎಲ್ ಶ್ರಿನಿವಾಸಮೂರ್ತಿ ಅವರು ವಿಜಯ ಪದವಿ ಪೂರ್ವ ಕಾಲೇಜಿನ  ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದವರು. ಸಸ್ಯ ಅಂಗಾಂಶ ಕೃಷಿ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ, ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಜಮಿನ್ ಲೂಯಿರೈಸ್ ರವರ ಜೀವನ ಮತ್ತು ಸಾಧನೆಯನ್ನು ಕುರಿತಂತೆ ರಚಿಸಿದ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿಯನ್ನು ಪಡೆದಿದ್ಧಾರೆ. ಪಾ.ವೆಂ. ಆಚಾರ್‍ಯರ ಸಮಗ್ರ ಬರಹಗಳ ಹಲವು ಸಂಪುಟಗಳನ್ನು ಸಂಪಾದಿಸಿದ್ದಾರೆ. ಕೃತಿ ಸಂಪಾದನೆ, ಪುಸ್ತಕ ಸಂಪಾದನೆ , ಪುಸ್ತಕ ವಿಮರ್ಶೆ, ಕಾರ್ಯದಲ್ಲಿ ತಮ್ನನ್ನು ತೊಡಗಿಸಿಕೊಂಡಿದ್ದಾರೆ.  ...

READ MORE

Related Books