ವಿಮರ್ಶಕರ ಅಧ್ವಾನಗಳು- ಲೇಖಕ ಎಂ.ಎಂ.ಪ್ರಭಾಕರ ಕಾರಂತರ ಲೇಖನಗಳ ಸಂಕಲನ. ಪ್ರಭಾಕರ ಕಾರಂತರು ಸಾಮಾಜಿಕ ಕಾರ್ಯಕರ್ತರಾಗಿ, ಪತ್ರಕರ್ತರಾಗಿ, ಸಹೃದಯೀ ಸಾಹಿತ್ಯ ಪ್ರೇಮಿಯಾಗಿ, ವೃತ್ತಿಯಲ್ಲಿ ತೊಡಗಿಕೊಳ್ಳದಿದ್ದರೂ ವಕೀಲರಾಗಿ, ಸಿದ್ಧಹಸ್ತರಾಗಿ ಬೆಳೆದಿದ್ದಾರೆ. ಬಾಳುತ್ತಿದ್ದಾರೆ. ಪಲ್ಲಟಗೊಂಡ ಬದುಕು, ಆಗಿನ ತುಮುಲಗಳು, ಜೊತೆಗೆ ಅವರ ಬಹುಮುಖಿ ಚಟುವಟಿಕೆಗಳು ಅವರ ಅನುಭವದ ಹರವನ್ನು, ಆಳವನ್ನು ಹೆಚ್ಚಿಸಿವೆ. ಹೊಸಕೊಪ್ಪದಂತ ಪುಟ್ಟ ಹಳ್ಳಿಯಲ್ಲಿ ಅವರು ಭಾರತದ ರಾಷ್ಟ್ರಪತಿ, ಪ್ರಧಾನಿಗಳಿಂದ ಹಿಡಿದು ಕಗ್ಗಾಡಿನ ನಡುವಿನ ಗೇರ್ಲುವಿನ ಹಳ್ಳಿಗನೊಬ್ಬನವರೆಗೆ ಎಲ್ಲರ ಬಳಿಯೂ ಯಾವುದೇ ಅಹಂಕಾರ ಅಥವಾ ಕೀಳರಿಮೆಗಳಿಲ್ಲದೇ ಒಡನಾಡಿದ್ದಾರೆ. ಅವರ ಬದುಕಿನಲ್ಲಿನ ಪ್ರಾಮಾಣಿಕತೆ, ಉತ್ತಮ ಸಾಮಾಜಿಕ ಬದುಕಿನ ಬಗ್ಗೆ ಅವರಿಗಿರುವ ತೀವ್ರ ಕಳಕಳಿ, ನಿಷ್ಠೆಗಳು ಅವರ ಬರಹಗಳಲ್ಲೂ ಸಹಜವಾಗಿ ಬಂದಿದೆ. ಅವರಿಗಿರುವ ಸಾಮಾಜಿಕ ಕಳಕಳಿಯಿಂದಾಗಿ ಅವರಿಗರಿವಿಲ್ಲದೆಯೋ, ಅರಿವಿದೋ ಅವರ ಬರಹಗಳಿಗೆ ಸರ್ವಕಾಲಿಕತೆ ಮತ್ತು ಸಾರ್ವತ್ರಿಕತೆಗಳು ಬಂದುಬಿಟ್ಟಿದೆ. ಈ ಕೃತಿಯಲ್ಲಿರುವ ಲೇಖನಗಳು ಅವರು ತೀರ್ಥಹಳ್ಳಿಯ ಛಲಗಾರ ಪತ್ರಿಕೆಗೆ ಬರೆಯುತ್ತಿದ್ದ ಅಂಕಣ ಬರಹಗಳಾಗಿವೆ.
ಪ್ರಭಾಕರ ಕಾರಂತರು ಸಾಮಾಜಿಕ ಕಾರ್ಯಕರ್ತರಾಗಿ, ಪತ್ರಕರ್ತರಾಗಿ, ಸಹೃದಯೀ ಸಾಹಿತ್ಯ ಪ್ರೇಮಿಯಾಗಿ ಬೆಳೆದವರು. ಪಲ್ಲಟಗೊಂಡ ಬದುಕು, ಆಗಿನ ತುಮುಲಗಳು, ಜೊತೆಗೆ ಅವರ ಬಹುಮುಖಿ ಚಟುವಟಿಕೆಗಳು ಅವರ ಅನುಭವದ ಹರವನ್ನು, ಆಳವನ್ನು ಹೆಚ್ಚಿಸಿದೆ. ಹೊಸಕೊಪ್ಪದಂತ ಪುಟ್ಟ ಹಳ್ಳಿಯಲಲ್ಲಿ ಜನಿಸಿದ ಅವರು ಹಿಡಿದು ಕಗ್ಗಾಡಿನ ನಡುವಿನ ಗೀರ್ಲುವಿನ ಹಳ್ಳಿಗನೊಬ್ಬನಾಗಿ ಬಾಳಿದರು. ಎಲ್ಲರ ಬಳಿಯೂ ಯಾವುದೇ ಅಹಂಕಾರ ಅಥವಾ ಕೀಳರಿಮೆಗಳಿಲ್ಲದೇ ಒಡನಾಡಿದ್ದಾರೆ. ಅವರ ಬದುಕಿನಲ್ಲಿನ ಪ್ರಾಮಾಣಿಕತೆ, ಉತ್ತಮ ಸಾಮಾಜಿಕ ಬದುಕಿನ ಬಗ್ಗೆ ಅವರಿಗಿರುವ ತೀವ್ರ ಕಳಕಳಿ, ನಿಷ್ಠೆಗಳು ಅವರ ಬರಹಗಳಲ್ಲೂ ಸಹಜವಾಗಿ ಬಂದಿದೆ. ’ಶೀರ್ನಾಳಿ, ಬೇರು ಪ್ರೀತಿ, ವಿಮರ್ಶಕರ ಅಧ್ವಾನಗಳು’ ಅವರ ಕೃತಿಗಳು. ...
READ MORE