‘#ಬದುಕು ಸುಂದರ’ ಲವ್ ಯು ಜಿಂದಗಿ ರಂಗಸ್ವಾಮಿ ಮೂಕನಳ್ಳಿ ಅವರ ಕೃತಿಯಾಗಿದೆ. ಬದುಕಿನಲ್ಲಿ ನಮ್ಮೆಲ್ಲಾ ಸೋಲಿಗೆ, ಅಪಜಯಕ್ಕೆ ಒಬ್ಬರನ್ನು ಹೊಣೆ ಮಾಡುತ್ತೇವೆ. ಅವರನ್ನು ಶತ್ರು ಎಂದು ಬಿಂಬಿಸಿಕೊಳ್ಳುತ್ತೇವೆ. ಅವರಿಲ್ಲದಿದ್ದರೆ, ಸನ್ನಿವೇಶ ಸರಿಯಾಗಿದ್ದಿದ್ದರೆ ನಾವೇನೋ ಮಹತ್ತರವಾದದ್ದನ್ನು ಸಾಧಿಸಿ ಬಿಡುತ್ತಿದ್ದೆವು ಎನ್ನುವ ಭ್ರಮೆಯಲ್ಲಿ ಬದುಕುತ್ತೇವೆ. ಆದರೆ ನಮ್ಮ ಅತಿ ದೊಡ್ಡ ಶತ್ರು ಬೇರಾರೂ ಅಲ್ಲ ಅದು ನಾವು ಎನ್ನುವುದನ್ನು ಮರೆತು ಬಿಡುತ್ತೇವೆ. ನಮ್ಮ ಆಲೋಚನೆಗಳು, ನಮ್ಮ ಕಾರ್ಯವೈಖರಿ ನಮ್ಮ ಅತಿ ದೊಡ್ಡ ಶತ್ರು ಅಥವಾ ಅತಿ ದೊಡ್ಡ ಮಿತ್ರ ಎನ್ನುವುದನ್ನು ನಾವು ಅರಿತುಕೊಳ್ಳಬೇಕಿದೆ. ನಮ್ಮ ಚಿಂತನೆ, ಆಲೋಚನೆ ಬದಲಿಸಿಕೊಳ್ಳುವುದರ ಮೂಲಕ ಬದುಕನ್ನು ಬದಲಾಯಿಸಿಕೊಳ್ಳಬಹುದು! ಬದುಕು ಸುಂದರ ಮಾಡಿಕೊಳ್ಳಲು ಬೇಕಾದ ಎಲ್ಲವನ್ನೂ ಭಗವಂತ ನಮಗೆ ನೀಡಿದ್ದಾನೆ. ನಾವೆಂತ ದಡ್ಡರು ಎಂದರೆ, ನಾವು ಅದನ್ನು ಜಗತ್ತಿನೆಲ್ಲೆಡೆ ಹುಡುಕಲು ಶುರು ಮಾಡುತ್ತೇವೆ. ಬಯಸಿದ ಬದುಕು ನಮ್ಮದಾಗಬೇಕಿದ್ದರೆ “ಲುಕ್ ಇನ್ವರ್ಡ್.' ಎಷ್ಟು ಸಾಧ್ಯವೋ ಅಷ್ಟೂ ನಮ್ಮನ್ನು ನಾವು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಎಲ್ಲವೂ ನಮ್ಮಲ್ಲೆ ಅಡಕವಾಗಿದೆ. #ಬದುಕುಸುಂದರ ಇಂತಹ ಹತ್ತಾರು ಗುಟ್ಟುಗಳನ್ನು ರಟ್ಟು ಮಾಡಿದೆ.
ರಂಗಸ್ವಾಮಿ ಮೂಕನಹಳ್ಳಿ ಅವರು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಇರುವ ಗ್ರಾಹಕರಿಗೆ ಹಣ ಹೂಡಿಕೆಯ ತಜ್ಞ. ಸಲಹೆಗಾರರಾಗಿ ವೃತ್ತಿ ನಿರತರು. ಹಲವಾರು ಉದ್ಯಮಗಳಲ್ಲಿ ಸಹ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕನ್ನಡದ ಹಲವು ಪ್ರಮುಖ ಪತ್ರಿಕೆ ನಿಯತಕಾಲಿಕೆಗಳಲ್ಲಿ ಹಣಕಾಸು ವಿಷಯಗಳ ಬಗ್ಗೆ ತ ಅಂಕಣಗಳನ್ನು ನಿಯಮಿತವಾಗಿ ಬರೆಯುತ್ತ ಬಂದಿದ್ದಾರೆ. ಕನ್ನಡ ಮತ್ತು ಸ್ಪಾನಿಷ್ ಭಾಷೆಯ ಸಮಾನಾಂತರ ಗಾದೆಗಳನ್ನು ಗುರುತಿಸಿ ಕೃತಿಯನ್ನು ರಚಿಸಿದ್ದು, ಇದು ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿದೆ. ಹಣಕಾಸಿಗೆ ಸಂಬಂಧಿಸಿದ ಮೂರು ಅಂಕಣ ಗುಚ್ಛಗಳ ಕೃತಿಗಳು ಸಹ ಪ್ರಕಟಗೊಂಡಿವೆ. ‘ಬದುಕಿಗೊಂದು ಆಶಾಭಾವ, ವಿತ್ತ ಜಗತ್ತು ತಿಳಿಯಬೇಕಾದ ವಿಷಯ ಹಲವು ಹತ್ತು’ ಅವರ ...
READ MORE