ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗೆಲುವಿಗಾಗಿ ಹಂಬಲಿಸುವ ಮಂದಿ ಹೆಚ್ಚಿದೆ. ಆ ಗೆಲುವಿನ ದಾರಿಯಲ್ಲಿ ನಮ್ಮ ಪ್ರಯತ್ನ ಅನೇಕ ಸೋಲುಗಳು ಸಿಗುತ್ತವೆ. ಆ ಸೋಲನ್ನು ಸವಾಲಾಗಿ ಸ್ವೀಕರಿಸಿ ಗುರಿಯತ್ತ ಮುನ್ನುಗ್ಗುವುದನ್ನು ಇಲ್ಲಿ ಲೇಖಕರು ಸವಿವರವಾಗಿ ನೀಡಿದ್ದಾರೆ. ಸೋಲಿನಿಂದ ಕಲಿಯಬೇಕಾದ ಜೀವನ ಪಾಠ, ಸ್ಪೂರ್ತಿದಾಯಕವಾಗಿ ಸ್ವೀಕರಿಸುವ ಬಗೆಯನ್ನು ವಿವರಿಸುತ್ತದೆ. ನಮ್ಮ ವ್ಯಕ್ತಿತ್ವವನ್ನು ವಿಕಸಿಸುವ ಸಣ್ಣ ನೀತಿ ಕತೆಗಳು ಮುದ ನೀಡುತ್ತಾ ಗಮ್ಯದೆಡೆಗೆ ಸಾಗುವಂತೆ ಪ್ರೇರಣೆ ನೀಡುವ ಉತ್ತಮ ಕೃತಿ ಇದಾಗಿದೆ.
ಲೇಖಕ ಡಿ.ವಿ. ಗುರುಪ್ರಸಾದ್ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳಾಗಿದ್ದು, ರಾಜ್ಯದ ಪೊಲೀಸ್ ಗುಪ್ತಚರದಳ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿ ಬದುಕಿನ ಅನುಭವ ಮತ್ತು ತಮ್ಮ ವಿಚಾರಗಳನ್ನು ಕೃತಿಗಳ ಮೂಲಕ ದಾಖಲಿಸುವ ಇವರು ಕ್ರೈಂ ಲೋಕದ ವಿಸ್ಮಯ, ವಿಚಿತ್ರ ಸಂಗತಿಗಳನ್ನು ಓದುಗರಮುಂದಿಡುತ್ತಾ ಬಂದಿದ್ದಾರೆ. ‘ಪೊಲೀಸ್ ಜೀವನದಲ್ಲಿ ಹಾಸ್ಯ', 'ವೀರಪ್ಪನ್ : ದಂತಚೋರನ ಬೆನ್ನಟ್ಟಿ', 'ಕೈಗೆ ಬಂದ ತುತ್ತು’, ‘ಪೊಲೀಸ್ ಎನ್ ಕೌಂಟರ್’, 'ಕ್ರೈಂ ಕಥೆಗಳು', 'ನೀವು ಒಮ್ಮೆ ಫೇಲ್ ಆಗಲೇಬೇಕು', 'ಅಪರಾಧಗಳ ಆ ಕ್ಷಣ', 'ವಿಶ್ವಪರ್ಯಟನೆ', 'ರಾಜೀವ್ ಗಾಂಧಿ ಭೀಕರ ಹತ್ಯೆ', 'ವೈವಿಧ್ಯತೆಯಲ್ಲಿ ಸಾಮ್ಯತೆ -ಯುರೋಪಿನ ಹದಿನಾಲ್ಕು ದೇಶಗಳು', 'ಗಲ್ಲುಗಂಬದ ...
READ MORE‘ಗೆಲುವೆಂಬುದು ಗೆಲುವೇ ಅಲ್ಲ' ಎಂಬುದು ಬಲ್ಲವರ ಮಾತು. ಇದಕ್ಕೆ ಇಂಬು ನೀಡುವಂತಿದೆ 'ನೀವು ಒಮ್ಮೆ ಫೇಲ್ ಆಗಲೇಬೇಕು' ಹೊತ್ತಿಗೆ, ಶೀರ್ಷಿಕೆ ತುಸು ಭಿನ್ನ ಎನಿಸಿದರೂ ಅದರ ಒಡಲೊಳಗಿನ ಜೀವನ ಸಾರ ಹಿರಿದು. ಕೇವಲ ಗೆಲ್ಲುವುದನ್ನು ಹೇಳಿಕೊಡುವ, ಅದನ್ನೇ ಜಪಿಸುವೆಡೆ ಸೋತಾಗ ಜಗವ ಎದುರಿಸುವ ಬಗೆಯನ್ನೂ ಕಲಿಸಬೇಕಿರುತ್ತದೆ. ಸೋಲು ಸೋಪಾನವಾಗಬಲ್ಲುದು ಗೆಲುವಿಗೆ ಎಂಬುದೇ ಇದರ ಸಾರ. ಸೋತು ಗೆದ್ದವರ, ಸತ್ತು ಬದುಕಿದವರ ಚಿತ್ರಣ ಪರಿಚಯಿಸುವ ಸುಂದರ ಬರಹವಿದು. ಬದುಕು ಕಾದಿದೆ ಸೋಲಿನಾಚೆಗೆ ನೂರು ಬಣ್ಣಗಳಲ್ಲಿ ಎನ್ನುತ್ತದೆ ಬದುಕು ಪ್ರೀತಿಯ ಈ ಸಂಕಲನ. ಇಲ್ಲಿನ ಎಲ್ಲ ಬರಹಗಳಲ್ಲಿ ಸಾಮಾಜಿಕ ಕಳಕಳಿ, ಸಮಗ್ರ ಜೀವನಾನುಭವ ಎದ್ದು ಕಾಣುತ್ತದೆ.
ಕೃಪೆ: ಪ್ರಜಾವಾಣಿ, ಮೊದಲ ಓದು (2020 ಜನವರಿ 5)