‘ಅರಿವಿನ ಬಟ್ಟಲು’ ಪತ್ರಕರ್ತ, ಲೇಖಕ ಪಾರ್ವತೀಶ ಬಿಳಿದಾಳೆ ಅವರು ಬರೆದಿರುವ ಲೇಖನ ಸಂಕಲನ. ಈ ಕೃತಿಗೆ ಎನ್.ಎಂ. ಬಿರಾದಾರ ಅವರು ಬೆನ್ನುಡಿ ಬರೆದಿದ್ದಾರೆ. ಜೀವನಮೌಲ್ಯಗಳನ್ನು ಒಳಗೊಂಡ ಈ ಕೃತಿ ಯುವಜನರಲ್ಲಿ ಶಿಕ್ಷಣ, ಶಿಸ್ತು, ಸಮಯ ಪರಿಪಾಲನೆ, ಸ್ನೇಹ, ಹಣದ ಮೌಲ್ಯ, ಮಾತು ನಡವಳಿಕೆಗಳು ಇವೆ ಮುಂತಾದ ಚಿಕ್ಕ ಆದರೆ ಮುಖ್ಯವೆನಿಸುವ ವಿಚಾರಗಳನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಎಂಬ ಬಗ್ಗೆ ಆಪ್ತ ದನಿಯಲ್ಲಿ ನಿರೂಪಿಸಿದ್ದಾರೆ. ಜೀವನಮೌಲ್ಯಗಳು ಹಾಗೂ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಇಂತಹ ಬರಹಗಳು ನೆರವಾಗುತ್ತವೆ.
ಪಾರ್ವತೀಶ ಹಾಗೂ ಬಿಳಿದಾಳೆ ಈಶ ಎಂಬ ಹೆಸರಿನಲ್ಲಿ ಬರೆಯುವ ಪತ್ರಕರ್ತ- ಲೇಖಕ ಪಾರ್ವತೀಶ್ ಜನಿಸಿದ್ದು 1967ರಲ್ಲಿ. ಬಾಲ್ಯ- ಪ್ರಾಥಮಿಕ ಶಿಕ್ಷಣ ಪಡೆದದ್ದು ಆನೇಕಲ್, ಮಾಲೂರು, ದೊಡ್ಡ ಬಳ್ಳಾಪುರದಲ್ಲಿ. ಬಿ.ಕಾಂ. ಪದವಿ ಪೂರ್ಣಗೊಳಿಸಿರುವ ಅವರು ಎಂ.ಎ. ಪತ್ರಿಕೋದ್ಯಮ ಕೋರ್ಸ್ ಅನ್ನು ಅರ್ಧಕ್ಕೆ ನಿಲ್ಲಿಸಿದವರು. ಕನಕಪುರ ತಾಲ್ಲೂಕಿನ ಬಿಳಿದಾಳೆ ಗ್ರಾಮದವರಾದ ಅವರು ಅರೆಕಾಲಿಕ ರೈತರೂ ಹೌದು. ಕೆಲಕಾಲ ಸರ್ಕಾರಿ ನೌಕರಿ ಮಾಡಿದ ಪಾರ್ವತೀಶ್ ಅವರು ನಂತರ ಕರ್ನಾಟಕ ಪ್ರಗತಿರಂಗ ಹಾಗೂ ಕರ್ನಾಟಕ ವಿಮೋಚನಾ ರಂಗದ ಸಕ್ರಿಯ ಕಾರ್ಯಕರ್ತರಾಗಿದ್ದರು. ಲಂಕೇಶ್ ಪತ್ರಿಕೆ, ಗೌರಿ ಲಂಕೇಶ್ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿರುವ ಅವರು ಸಾಕೇತ್ ...
READ MORE