ಪ್ರಿಯ ಜೋಕಟ್ಟೆ ನಮ್ಮೆಲ್ಲರ ಅಚ್ಚುಮೆಚ್ಚಿನ ವ್ಯಕ್ತಿ, ಮಿತಭಾಷಿ, ಕುತೂಹಲಿ, ಎಲ್ಲವನ್ನೂ ಸದ್ದಿಲ್ಲದೆ ಆಸಕ್ತಿಯಿಂದ ಆಲಿಸುವ ಹಿಂದಿನ ಬೆಂಚಿನ ಹುಡುಗ, ನೋಡಿದ್ದನ್ನೆಲ್ಲ ಮನಸ್ಸಿನಲ್ಲಿ ಮುದ್ರಿಸಿಕೊಳ್ಳುವ ಚಲನಶೀಲ ಪತ್ರಕರ್ತ. ಬಂಡಾಯದ ಉಲ್ಬಣದ ಕಾಲದಲ್ಲಿ ಕಣ್ತೆರೆದ ಸಂವೇದನೆ ಇದ್ದರೂ ಬಂಡಾಯದ ಅವೇಶ ಅಬ್ಬರ ಇಳಿಸಿಕೊಂಡು ಅದರ ಆಶಯವನ್ನು ತನ್ನ ದಾರಿಯಲ್ಲಿ ನೆಚ್ಚಿಕೊಂಡಿರುವ ಸಮಾಜಮುಖೀ ಏಕಲವ್ಯ ಎಂದು ಜಯಂತ ಕಾಯ್ಕಿಣಿ ಅವರು ಹೇಳಿದ್ದಾರೆ.
ಸಾಹಿತಿ, ಪತ್ರಕರ್ತ 'ಶ್ರೀನಿವಾಸ ಜೋಕಟ್ಟೆ’ ಅವರು 1964 ಜುಲೈ 4 ಮಂಗಳೂರು ಜೋಕಟ್ಟೆಯಲ್ಲಿ ಜನಿಸಿದರು. ಪ್ರಸ್ತುತ ಮುಂಬಯಿ ನಗರದಲ್ಲಿ ವಾಸವಿದ್ದು, ಕನ್ನಡದ ದಿನಪತ್ರಿಕೆ 'ಕರ್ನಾಟಕ ಮಲ್ಲ'ದ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ಜೋಶ್ರೀ', 'ಶ್ರೀಜೋ', ಎಂಬ ಕಾವ್ಯನಾಮದಿಂದಲೂ ಬರೆಯುತ್ತಿದ್ದಾರೆ. ಪ್ರವೃತ್ತಿಯಲ್ಲಿ ಬರಹಗಾರರಾಗಿಯೂ ಗುರುತಿಸಿಕೊಂಡಿರುವ ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಹಿಮವರ್ಷ, ಊರಿಗೊಂದು ಆಕಾಶ, ಒತ್ತಿ ಬರುವ ಕತ್ತಲ ದೊರೆಗಳು. ಇವರ ಗದ್ದರ್ ಕವನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನಕ್ಕೆ ಆಯ್ಕೆಯಾಗಿದೆ. ...
READ MORE