‘ಗೆಳತಿ ಭಾಗ-1’ ಕೃತಿಯು ಹೇಮಾವತಿ ವೀ. ಹೆಗ್ಗಡೆವರು ಬರೆದಿರುವ ನಿರಂತರ ಪತ್ರಿಕೆಯ ‘ಗೆಳತಿ ಅಂಕಣದಲ್ಲಿ ಪ್ರಕಟಗೊಂಡ ಬರಹಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ಅಧ್ಯಾಯಗಳು ಹೀಗಿವೆ ; ಕರೆಂಟಿಲ್ಲದ ದಿನ, ಬಾಳಿನಲ್ಲಿ ಹೊಸತನ ಕೂಡಿರಲಿ, ಯಶಸ್ಸು ಮತ್ತು ತೃಪ್ತಿ, ಮರುಬಳಕೆ, ನಮ್ಮಲ್ಲಿರುವ ನೈಜ್ಯ ಸಾಮರ್ಥ್ಯವನ್ನು ಗುರುತಿಸಿಕೊಳ್ಳೋಣ, ಸೋರುವ ನಳ್ಳಿ-ಸೋರುವ ಬದುಕು, ಕಹಿ ನೆನಪುಗಳನ್ನು ಮರೆಯೋಣ, ಸಮಸ್ಯಗಳಿಗೆ ಆತ್ಮಹತ್ಯೆ ಪರಿಹಾರವಲ್ಲ, ಬಾಳಪುಟಗಳು, ಮುಗಿಯದ ಹುಡುಕಾಟ, ದೇವರ ಆಯ್ಕೆ, ಒಳ್ಳೆಯ ಸುದ್ದಿಗಳು ಬೇಕಾಗಿವೆ, ದಿವ್ಯಾಂಗಚೇತನ ಎನ್ನುವುದು ಶಾಪವಲ್ಲ, ಎರಡು ಅತಿಗಳ ನಡುವೆ, ತಂತ್ರಜ್ಞಾನಗಳ ಅತೀ ಬಳಕೆ ಸಲ್ಲದು, ಡಿ.ವಿ.ಜಿ ಎಂಬ ದಾರ್ಶನಿಕ, ಮುಂಬೈ ಡಬ್ಬಾವಾಲಾ, ಕಾಡಿನ ದೇವತೆಗಳು, ಬಚ್ ಪನ್ ಬಚಾವೋ, ಪರೀಕ್ಷೆ ಭವಿಷ್ಯದ ಮುನ್ನುಡಿ,ನೀರಿನ ಬೆಲೆ, ಬದುಕಿನಲ್ಲಿ ಉತ್ಸಾಹವಿರಲಿ, ಅತಿಯಾಸೆಯ ಬೆನ್ನೇರಿ, ಶಬ್ಧಮಾಲಿನ್ಯ, ನಿಸರ್ಗದೊಂದಿಗೆ ಬೇಕು ಒಡನಾಟ, ಕ್ರಿಯಾಶಕ್ತಿಯೆಂಬ ಮಂತ್ರದಂಡ, ಅತಿಗಳಿಗೆ ಮಿತಿ ಇರಲಿ, ದೇವರೊಲುಮೆ ಯಾರ ಕಡೆಗೆ?, ಪೌರ ಪ್ರಜ್ಞೆ-ಪರಿಸರ ಪ್ರಜ್ಞೆ, ಪ್ರಾಚೀನ ಪಾಕ ಸಂಸ್ಕೃತಿ ಉಳಿಸೋಣ, ಸೃಜನಶೀಲತೆ, ಆಪತ್ಕಾಲದ ನೆರವೇ ಆತಿಥ್ಯ, ಆಥ್ಮಗೌರವ, ಮನದಾಳದಿಂದ ಬರಲಿ ಸತ್ಕಾರ್ಯದ ಭಾವನೆ, ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಪಾತ್ರವೇನು?, ಅಭಿಯಾನ, ಶೀಕ್ಷಣ ಯಾಕೆ ಬೇಕು?, ಅಡ್ಡದಾರಿ ಎಂಬ ಆಪತ್ತು, ಮಾಗಿದ ಹಣ್ಣುಗಳ ಕೊಳೆಯಿಸಬೇಡಿ, ಉತ್ತರಾಯಣವೆಂಬ ಪುಣ್ಯ ಕಾಲ, ಸುಜ್ಞಾನದ ಬೆಳಕು, ಮಾತುಗಳೇಕೆ ಮೂಗಿನ ನೇರಕ್ಕೆ, ನಮ್ಮೊಳಗಿನ ದೇವರು, ಸಹೋದರ ಬಾಂಧವ್ಯದ ಮಧುರ ಬಂಧ, ಕೃಷ್ಣನೆಂಬ ಪ್ರಕೃತಿ ಪುರುಷ, ಜ್ಞಾನ ಸಂಪನ್ನರಾಗಿ, ವಿಧಿಲಿಖಿತ, ಅಭ್ಯಾಸವೆಂಬ ಅದ್ಭುತ, ಪುಸ್ತಕ ಪ್ರೀತಿ ಬೆಳೆಯಲಿ, ಮುಪ್ಪಿನ ಮುಪ್ಪು ಮುಳ್ಳಾಗದಿರಲಿ, ನಿತ್ಯ ಸೀಮೋಲ್ಲಂಘನದ ವಿಜ ದಶಮಿ, ಹಿತ್ತಕ ಬಳ್ಳಿಯ ಹತ್ತಾರು ಗುಣಗಳು, ಕೃತಜ್ಞತೆಯಲ್ಲಿ ಬೇಡ ಕೃತಕತೆ, ಗುರಿ ದಾರಿ ನೇರ ಇರಲಿ, ಬದುಕನ್ನು ಪ್ರೀತಿಸಲು ಕಲಿಯೋಣ, ಕಾಲದ ಮಹಿಮೆ, ಸೋಲನ್ನು ಸೋಲಿಸಿದವರು, ಆಸೆ- ಅತಿಯಾಸೆ, ಮನೋಲ್ಲಾಸಕ್ಕೆ ಪ್ರವಾಸ, ಮನಶುದ್ದಿಗೆ ಯಾತ್ರೆ, ಕೃತಜ್ಞತೆ ಮತ್ತು ಕೃತಘ್ನತೆ ಸೇರಿದಂತೆ ಹಲವಾರು ವಿಚಾರಗಳು ಈ ಕೃತಿಯಲ್ಲಿ ಅಡಕವಾಗಿವೆ.
ಹೇಮಾವತಿ ವೀ. ಹೆಗ್ಗಡೆ ಅವರು ಮೂಲತಃ ಬೆಳ್ತಂಗಡಿ ತಾಲೂಕಿನ ಪೆರಾಡಿ ಬೀಡಿನವರು. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರ ಪತ್ನಿ. ಧರ್ಮಸ್ಥಳದಲ್ಲಿ ‘ಕನ್ಯಾಕುಮಾರಿ ಯುವತಿ ಮಂಡಲ’ವನ್ನು ಪ್ರಾರಂಭಿಸಿ, ಧರ್ಮಸ್ಥಳದ ಯುವತಿಯರಿಗೆ ಮತ್ತು ಆಸಕ್ತ ಮಹಿಳೆಯರಿಗೆ ಸ್ವಉದ್ಯೋಗದ ಪರಿಕಲ್ಪನೆಯನ್ನು ಮೂಡಿಸಿದರು. ಓದಿನಲ್ಲಿ ವಿಶೇಷ ಆಸಕ್ತಿ ಇದ್ದು, ಅವರು ಉತ್ತಮ ಬರಹಗಾರರು, ಭಾಷಣಕಾರರೂ ಹೌದು. ಮಂಜುವಾಣಿ ಪತ್ರಿಕೆಯ ‘ಮಗಳಿಗೊಂದು ಪತ್ರ’ ಮತ್ತು ‘ನಿರಂತರ’ ಮಾಸಪತ್ರಿಕೆಯಲ್ಲಿ ‘ಗೆಳತಿ’ ಎಂಬ ಅಂಕಣದ ಮೂಲಕ ರಾಜ್ಯದ ಜನತೆಗೆ ಚಿರಪರಿಚಿತರು. ಕೃತಿಗಳು : ಗೆಳತಿ ಭಾಗ-1, ಗೆಳತಿ ಭಾಗ-2, ಗೆಳತಿ ಭಾಗ-3 (ಅಂಕಣ ಬರಹಗಳು) ಪ್ರಶಸ್ತಿ-ಪುರಸ್ಕಾರಗಳು: ಕೆಳದಿ ರಾಣಿ ಚೆನ್ನಮ್ಮ ...
READ MORE