‘ಮೌಖಿಕ’ ಲೇಖಕ ವೀರಣ್ಣ ದಂಡೆ ಅವರ ಸಂಶೋಧನಾತ್ಮಕ ಲೇಖನಗಳ ಸಂಕಲನ. ಇಲ್ಲಿ ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು, ಗೋವಿನ ಹಾಡು, ಸೋಮರಾಯ ಭೀಮರಾಯ, ಜನಪದ ವೈದ್ಯಪದ್ಧತಿಯ ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಮುಖಗಳು, ಕರ್ನಾಟಕ ಜನಪದ ಕಲೆಗಳು, ಜನಪದ ಕಲೆಗಳ ಸಂರಕ್ಷಣೆ ಮತ್ತು ಸಮಸ್ಯೆ, ದೊಡ್ಡಾಟ-ಹೊಸ ಸಾಧ್ಯತೆಗಳು, ಜಾನಪದ ಮತ್ತು ಕರ್ನಾಟಕ ಸಂಸ್ಕೃತಿ, ದೀಪಾವಳಿ- ಚಳಿಯನ್ನು ಸ್ವಾಗತಿಸುವ ಉತ್ಸವ, ಕರ್ನಾಟಕದ ಜಾನಪದಶಾಸ್ತ್ರ ಅಧ್ಯಯನ ಒಂದು ಮುನ್ನೋಟ, ದೇಸಿ ಸಾಹಿತ್ಯ ನಡೆದು ಬಂದ ದಾರಿ, ಜನಪದ ಕಾವ್ಯ ಮೀಮಾಂಸೆ-ಪ್ರತಿಕ್ರಿಯೆ, ಜನಪದ ಕಥೆಗಳ ಲಕ್ಷಣಗಳು ಸೇರಿದಂತೆ ಹಲವು ಮಹತ್ವದ ಸಂಶೋಧನಾತ್ಮಕ ಲೇಖನಗಳು ಸಂಕಲನಗೊಂಡಿವೆ.
ಜಾನಪದ ತಜ್ಞ, ಸಂಶೋಧಕ ವೀರಣ್ಣ ದಂಡೆಯವರು ಹುಟ್ಟಿದ್ದು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸಲಗರ ಗ್ರಾಮದಲ್ಲಿ. ತಂದೆ ಶರಣಪ್ಪ ದಂಡೆ, ತಾಯಿ ಬಂಡಮ್ಮ. ಪ್ರಾರಂಭಿಕ ಶಿಕ್ಷಣ ಸಲಗರ. ಬಿ.ಎ, ಎಂ.ಎ. ಪದವಿ ಕಲಬುರ್ಗಿ. “ಕಲಬುರ್ಗಿ ಜಿಲ್ಲೆಯ ಜನಪದ ಕಥೆಗಳ ಆಶಯ ಮತ್ತು ಮಾದರಿಗಳು” ಮಹಾಪ್ರಬಂಧ ಮಂಡಿಸಿ ಕಲಬುರ್ಗಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. 1984ರಲ್ಲಿ ಉದ್ಯೋಗಕ್ಕಾಗಿ ಸೇರಿದ್ದು ಬೋಧನಾವೃತ್ತಿ. ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಣೆ. ಸಹಾಯ ಸಂಶೋಧಕರಾಗಿ ಉತ್ತರ ಕನ್ನಡದ ಏಳು ಜಿಲ್ಲೆಗಳ ಪ್ರವಾಸ. ಜಾನಪದ ವೈದ್ಯಕೋಶ ಸಂಶೋಧನಾ ಯೋಜನೆಯಡಿ ಕ್ಷೇತ್ರ ಸಹಾಯಕರ ಕಾರ್ಯ. ನಾಲ್ಕು ...
READ MORE