ಚಿಗುರು ಚಿತ್ತಾರ

Author : ಕೆ. ಆರ್‌. ಸ್ವಾಮಿ

Pages 272

₹ 295.00




Year of Publication: 2022
Published by: ಅಂಕಿತ ಪುಸ್ತಕ
Address: ಗಾಂಧಿ ಬಜಾರ್‌ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು 560004

Synopsys

ಚಿಗುರು ಚಿತ್ತಾರ ಕೆ. ಆರ್‌ ಸ್ವಾಮಿ ನೆನಪಿನ ಕಥನವಾಗಿದೆ. ಸಿಹಿ ನೆನಪುಗಳೇ ಹಾಗೆ, ಅದರಲ್ಲೂ ಮರುಕಳಿಸಲಾಗದ ಗತದ ಬಗ್ಗೆ ಹಳಹಳಿಕೆ ಇಲ್ಲದೆ ಸಹಜ ಜೀವನ ಪ್ರೀತಿಯಿಂದ ದಾಖಲಿಸಿದಾಗ ಅದು ಸದ್ಯಕ್ಕೂ ಕನ್ನಡಿಯಾಗಬಲ್ಲದು. ಕೆ.ಆರ್. ಸ್ವಾಮಿಯವರ ಈ ಲೇಖನ ಮಾಲೆಗೆ ಆ ಗುಣ ದಕ್ಕಿದೆ. ಅವರ ಲೇಖನ ಕೃಷಿಗೆ ಎಂತಹ ಉತ್ಕಟ ಕ್ಷಣದಲ್ಲೂ, ಎಂಥ ದುರಿತ ಸಂದರ್ಭದಲ್ಲೂ ಒಳಸುಳಿಗಳಲ್ಲೆಲ್ಲೋ ಪ್ರಕಟವಾಗುವ ಬದುಕಲ್ಲಿನ ಅನುಭೋಗವನ್ನು ಸೆರೆ ಹಿಡಿಯುವ ಶಕ್ತಿ ಇದೆ. ಹಾಗಾಗಿ ಕೇವಲ ವಿಷಾದವಾಗಬಹುದಾಗಿದ್ದ ಮೂವರು ಅಜ್ಜಿಯಂದಿರ (ಬದುಕೆಂದರೆ ಹೀಗೆ) ಕಥೆಗೆ ಒಂದು ಅನುಭೂತಿ ಪ್ರಾಪ್ತವಾಗುತ್ತದೆ. ಕಲಂದರ್, ಸಿಕಂದರ್ ಅವರ ಕಥೆ (ಸಾವು ಗೆದ್ದವರು) ವ್ಯಂಗ್ಯ ಕಥಾನಕವಾಗಷ್ಟೇ ಆಗುಳಿಯದೇ ಬದುಕಿನ ವೈರುದ್ಧಗಳತ್ತ ನೋಟ ಬೀರುತ್ತದೆ. ಶಂಕರ್ಸ್ ವೀಕ್ತಿಯ ತಂಕರ್, ಆರ್.ಕೆ.ಲಕ್ಷ್ಮಣ್ ವ್ಯಂಗ್ಯ ಚಿತ್ರಶೈಲಿಯ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ತಾವೇ ಖ್ಯಾತ ವ್ಯಂಗ್ಯ ಚಿತ್ರಕಾರರಾಗಿದ್ದು, ವ್ಯಂಗ್ಯ ಚಿತ್ರವನ್ನೇ ಕಲಾಭಿವ್ಯಕ್ತಿ ಮಾಡಿಕೊಂಡ ಕೆ.ಆರ್.ಸ್ವಾಮಿಯವರ ಬರಹ ಸಮುಚ್ಚಯದಲ್ಲೂ ವ್ಯಂಗ್ಯ ಚಿತ್ರಕಲೆಯ ವೈಶಿಷ್ಟ್ಯವಾದ ಲಘುವಿನಲ್ಲಿ ಗುರು ಕಾಣುವ ಗುರುವಿನಲ್ಲಿ ತಾ ಕಾಣುವ ಪರಿಯನ್ನು ಗಮನಿಸಬಹುದು.

About the Author

ಕೆ. ಆರ್‌. ಸ್ವಾಮಿ
(28 September 1940)

ಕೆ. ಆರ್. ಸ್ವಾಮಿ ಎಂದೇ ಪ್ರಸಿದ್ಧರಾಗಿರುವ ಕಮಕೋಡು ರಾಮಸ್ವಾಮಿ ಅವರು 1940ರ ಸೆಪ್ಟೆಂಬರ್ 28ರಂದು ಮಲೆನಾಡಿನ ತೀರ್ಥಹಳ್ಳಿಯಲ್ಲಿ ಜನಿಸಿದರು. ಅವರ ತಂದೆ, ಕಮಕೋಡು ನರಸಿಂಹ ಶಾಸ್ತ್ರಿಗಳು, ಅಸ್ಪೃಶ್ಯತೆ ನಿವಾರಣೆ, ದಲಿತೋದ್ಧಾರ ಮತ್ತು ಅಂತರ್ಜಾತೀಯ ವಿವಾಹಗಳ ಪರ ಹೋರಾಡಿದ ಪ್ರಗತಿಪರ ಚಿಂತಕರು. ಅವರು ಕಲೆ, ನಾಟಕ, ಸಿನಿಮಾ, ಕ್ರೀಡೆ ಮುಂತಾದ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದ್ದರು. ಸಂಸ್ಕೃತ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರಭುತ್ವ ಹೊಂದಿದ್ದ ಅವರು ಅದ್ವಿತೀಯ ವ್ಯಕ್ತಿತ್ವದರೆಂದು ಜನಪ್ರಿಯರಾಗಿದ್ದರು. ಕೆ. ಆರ್. ಸ್ವಾಮಿ ಅವರು ಹೈಸ್ಕೂಲಿನಲ್ಲಿದ್ದಾಗಲೇ ವ್ಯಂಗ್ಯಚಿತ್ರಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಇದನ್ನು ಮತ್ತಷ್ಟು ಬೆಳೆಸಲು ...

READ MORE

Related Books