ಡಿ.ಎಸ್.ನಾಗಭೂಷಣ ಅವರು ಸಮಕಾಲೀನ ಸಮಾಜವಾದಿ ಚಿಂತನೆಗಳ ಕುರಿತ ಲೇಖನ ಸಂಗ್ರಹ ಮರಳಿ ಬರಲಿದೆ ಸಮಾಜವಾದ. ಕೃತಿಯ ಪರಿವಿಡಿಯಲ್ಲಿ ಕನಸು ಬಂಡಾಯಗಳ ನಾಯಕ: ಲೋಹಿಯಾ, ಮರಳಿ ಬರಲಿದೆ ಸಮಾಜವಾದ, ಸರಕು ಅರ್ಥಶಾಸ್ತ್ರ ಮತ್ತು ಸಮಾಜವಾದ, ದಾರಿ ತಪ್ಪಿದ ಸಮಾಜವಾದಗಳು, ಪರ್ಯಾಯ ರಾಜಕಾರಣದ ಸಾಧ್ಯತೆಗಳು, ಕನ್ನಡ ಕಟ್ಟುವ ಚಳವಳಿ, ಲೋಹಿಯಾ ಸಮಾಜವಾದ: ಮುಂದೇನು ? ಇಂತಹ 20 ಶೀರ್ಷಿಕೆಗಳ ಬರಹಗಳಿವೆ.
ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...
READ MORE