‘ನೊಂದವರ ನೋವು’ ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಲೇಖನ ಸಂಕಲನ. ಈ ಕೃತಿಗೆ ಡಾ. ಶ್ಯಾಮಸುಂದರ ಬಿದರಕುಂದಿ ಅವರ ಬೆನ್ನುಡಿಯ ಮಾತುಗಳಿವೆ. ಇಲ್ಲಿ ಹನ್ನೆರಡು ಲೇಖನಗಳು ಸಂಕಲನಗೊಂಡಿವೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ನೊಂದವರ ಅಳಲನ್ನು ಮಂದ್ರಸ್ವರದಲ್ಲಿ ಹಾಡುವ ಈ ಕವಿ, ಗದ್ಯವನ್ನು ವಾಗ್ಮಿತೆಯ ಪ್ರದರ್ಶನಕ್ಕಿಡದೇ ಸಹಜ-ವಾಸ್ತವ ಕಾಳಜಿಗಳ ಸರಳ-ಸುಂದರ ಮಂಡನೆಗೆ ಬಳಸಿಕೊಂಡು, ಪ್ರತಿಯೊಂದು ಚಿಂತನ ಸಾಮಗ್ರಿ ಹರಳುಗಟ್ಟುವಂತೆ ಬರವಣಿಗೆ ಸಾಧಿಸಿದ್ದಾರೆ ಎನ್ನುತ್ತಾರೆ ಶ್ಯಾಮಸುಂದರ ಬಿದರಕುಂದಿ. ಜೊತೆಗೆ ಇಲ್ಲಿನ ಹನ್ನೆರಡೂ ಬರೆಹಗಳ ವಿಷಯಕಲ್ಪನೆ, ನಿದರ್ಶನ ಪೂರ್ವಕ ವಾದದ ವೈಖರಿ, ವಿಶಿಷ್ಟ, ತಾಜ ಮತ್ತು ಔಚಿತ್ಯಪೂರ್ಣವಾಗಿರುವುದು ಆಕಸ್ಮಿಕವಲ್ಲ: ಅದು ಪ್ರತಿಭೆ- ಪರಿಶ್ರಮಗಳ ಸಹಯೋಗದ ಫಲ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...
READ MORE