ಬರ್ಗರ್ ಭಾರತ ಎಂಬ ಪುಸ್ತಕವು ನಾಗೇಶ ಹೆಗಡೆ ಅವರ ಕೃತಿಯಾಗಿದೆ. ಈ ಗುಚ್ಛದ ಒಂದೊಂದೂ ಬಿಡಿ ಲೇಖನವನ್ನು ಓದಿ ಮುಗಿಸಲು ಬಹುಶಃ ನಿಮಗೆ ಹತ್ತೇ ನಿಮಿಷ ಸಾಕು. ಆದರೆ ಮನನ ಮಾಡುತ್ತಾ ಓದಬೇಕಾದರೆ ಇನ್ನೂ ಹೆಚ್ಚು ಕಾಲ ಬೇಕು. ಗ್ರಹಿಸುತ್ತಾ ಓದುವ ಶ್ರೀಸಾಮಾನ್ಯನನ್ನು ಈ ಲೇಖನಗಳು ಬೇಗನೆ ಬಿಟ್ಟುಬಿಡುವುದಿಲ್ಲ. ಈ ವರೆಗೆ ನಾವು ಅರಿಯದ ಹತ್ತು ಹಲವು ಕಹಿ ವಾಸ್ತವಗಳು, ಒಳಕಥೆಗಳು, ಹುನ್ನಾರಗಳು ನಮ್ಮನ್ನು ಮತ್ತೆಮತ್ತೆ ಚಿಂತನೆಗೆ ಹಚ್ಚುತ್ತವೆ. ಎಂದು ನಾಗೇಶ ಹೆಗಡೆ ಅವರ ಪುಸ್ತಕದ ಬಗ್ಗೆ ಶ್ರೀ ಪಡ್ರೆ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...
READ MORE