ಗೌರಿ ಹೂವು – ಗೌರಿ ಲಂಕೇಶ್ ಬದುಕು ಬರಹ

Author : ಕುಮಾರ ಬುರಡಿಕಟ್ಟಿ

₹ 290.00




Published by: ಲಂಕೇಶ್ ಪ್ರಕಾಶನ

Synopsys

ಕುಮಾರ್ ಬುರಡೀಕಟ್ಟಿ ಸಂಗ್ರಹಿಸಿ, ಸಂಪಾದಿಸಿರುವ ಕೃತಿಯಲ್ಲಿ ಗೌರಿ ಲಂಕೇಶರ ಬರಹಗಳ ಜೊತೆಗೆ, ಗೌರಿಯವರ ಬಗ್ಗೆ ಅವರ ಆಪ್ತ ಒಡನಾಡಿಗಳು ಹಂಚಿಕೊಂಡ ನೆನಪುಗಳಿವೆ. ದನಿ ಎತ್ತುವುದು ಅನಿವಾರ್ಯವೆಂದು ಭಾವಿಸಿದ ಒಬ್ಬ ಹೋರಾಟಗಾರ್ತಿ-ಪ್ರಜೆಯ ವಿಶಾಲವಾದ ಕಾಳಜಿಗಳನ್ನು ಈ ಬರಹಗಳು ಬಿಂಬಿಸುತ್ತವೆ. ಇಂಗ್ಲಿಷ್ ಪತ್ರಕರ್ತೆಯಾಗಿ ಸಂಡೆ ಪತ್ರಿಕೆಗೆ ಅವರು ಬರೆದಿದ್ದ ಲೇಖನಗಳು, ತಮ್ಮದೇ ಸಂಪಾದಕತ್ವದ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಬರೆದ `ಕಂಡಹಾಗೆ’ ಅಂಕಣದ ಬರಹಗಳು, ಗೌರಿಯವರು ನಡೆಸಿದ್ದ ಸಂದರ್ಶನಗಳು ಇಡಿಯಾಗಿ ಗೌರಿಯ ಬಹುಆಯಾಮದ ವ್ಯಕ್ತಿತ್ವವನ್ನು ಓದುಗರಿಗೆ ಕಟ್ಟಿಕೊಡುತ್ತವೆ.

About the Author

ಕುಮಾರ ಬುರಡಿಕಟ್ಟಿ
(07 April 1978)

ಪತ್ರಕರ್ತ, ಬರಹಗಾರ ಕುಮಾರ ಬುರಡಿಕಟ್ಟಿ ಅವರು 1978 ಏಪ್ರಿಲ್ 7ರಂದು ಜನಿಸಿದರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಡೆನಂದಿಹಳ್ಳಿ ಇವರ ಹುಟ್ಟೂರು. ಪ್ರಾಥಮಿಕ- ಪ್ರೌಢಶಿಕ್ಷಣವನ್ನು ಕಡೇನಂದಿಹಳ್ಳಿ ಮತ್ತು ಹಿರೇಕೇರೂರಿನಲ್ಲಿ ಪಡೆದರು. ಶಿವಮೊಗ್ಗದಲ್ಲಿ ಕಾಲೇಜು ಶಿಕ್ಷಣ. ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಚಳವಳಿಗಳಲ್ಲಿ ಭಾಗಿಯಾಗುತ್ತ ಬಂದಿರುವ ಕುಮಾರ ಅವರು ದೆಹಲಿ, ಮುಂಬೈಗಳಲ್ಲಿ ನೆಲೆಸಿದ್ದರು. 2002ರ ಗುಜರಾತ್ ನರಮೇಧ, ಹರಿಯಾಣದ ಜಝಾರ್‌ನಲ್ಲಿ ನಡೆದ ದಲಿತರ ಮಾರಣಹೋಮ ಮುಂತಾದ ಘಟನೆಗಳ ಬಗ್ಗೆ ರಾಷ್ಟ್ರಮಟ್ಟದ ಸತ್ಯಶೋಧನಾ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೆಲಕಾಲ ಲಂಕೇಶ್ ವಾರಪತ್ರಿಕೆಯಲ್ಲಿ, ಸಂಡೇ ಇಂಡಿಯನ್ ಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡಿರುವ ಅವರು ಸದ್ಯ ಕಲಬುರಗಿಯಲ್ಲಿ ದ ...

READ MORE

Related Books