ಸಹಜ ನೀ ಜನನಿ

Author : ಅನುಸೂಯಾ ಮಿತ್ರ

Pages 80

₹ 80.00




Year of Publication: 2021
Published by: ರಚನಾ ಪ್ರಕಾಶನ
Address: #2346/1, 10ನೇ ಕ್ರಾಸ್, ಬಸವೇಶ್ವರ ರಸ್ತೆ, ಕೆ.ಆರ್‍. ಮೊಹಲ್ಲಾ, ಮೈಸೂರು-570004.

Synopsys

ಅನುಸೂಯಾ ಮಿತ್ರ ಅವರ ’ಸಹಜ ನೀ ಜನನಿ’ ಕೃತಿಯು ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿ ಒಂಭತ್ತು ಶೀರ್ಷಿಕೆಗಳಿದ್ದು, ನಡು ವಯಸ್ಸಿನ ಮೂಕ ಮರ್ಮರ, ಮರುಭೂಮಿಯಲ್ಲಿ ಅರಳಿದ ಹೂ, ಸಾರಾ ಅಬೂಬಕ್ಕರ್ ಕಥೆಗಳಲ್ಲಿ ಮಹಿಳಾ ಸಂವೇದನೆ, ಅಕ್ಕಮಹಾದೇವಿ ಮತ್ತು ಮೀರಬಾಯಿರವರ ನಡುವಿನ ಅಂತರಸಂಬಂಧ, ವಡ್ಡಾರಾಧನೆ: ಮನೋವಿಶ್ಲೇಷಣಾತ್ಮಕ ನೆಲೆಗಳು, ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಸ್ವರ್ಗದ ಸ್ವರೂಪ, ಕರ್ವಾಲೊ ಕಾದಂಬರಿಯ ಪರಿಸರವಾದಿ ವಿಮರ್ಶೆ, ಕುರುಮಯ್ಯನ ಅಂಕುಶದೊಡ್ಡಿ: ಕೊರವರ ಚಿತ್ರಣ, ಎಲ್ಲಮ್ಮನ ಒಂದು ಚಾರಿತ್ರಿಕ ನೋಟವನ್ನು ಒಳಗೊಂಡಿದೆ. ಕೃತಿಗೆ ಬೆನ್ನುಡಿ ಬರೆದಿರುವ ಅವರು, ಕಾದಂಬರಿಯ ಪರಿಸರವಾದಿ ವಿಮಶೆಶೆ ಅಕ್ಕಮಹಾದೇವಿ ಮತ್ತು ಮೀರಾ ಅವರ ಬಗೆಗಿನ ತೌಲನಿಕ ಅಧ್ಯಯನ ಅನೇಕ ಸಂಗತಿಗಳೆಡೆಗೆ ಗಮನ ಸೆಳೆಯುತ್ತಿದೆ. ಚೆನ್ನಮಲ್ಲಿಕಾರ್ಜುನ ಮತ್ತು ಕೃಷ್ಣ ಎಂಬ ಅಮೂರ್ತ ಲೋಕಗಳನ್ನವರು ಕಟ್ಟಿಕೊಂಡಿದ್ದಾರೆ. ಹೀಗೆ ಕಟ್ಟಿಕೊಂಡು ತಮ್ಮ ಕಾಲದ ಕಂದಾಚಾರಗಳನ್ನು ಮೀರಲು ಯತ್ನಿಸಿದ್ದಾರೆ. ಲೋಕದ ಜನ ಅವರಿಬ್ಬರನ್ನೂ ಮೂರ್ಖರಂತೆ ಕಾಣುತ್ತಿದೆ. ಆದರೆ ಅವರಿಬ್ಬರ ರಚನೆಗಳು ಲೋಕಕ್ಕೆ ಆವರಿಸಿರುವ ಮೂರ್ಖತನವನ್ನು ಕಂಡು ಮುಗುಳ್ನಕ್ಕಿವೆ. ಯಾವುದು ಮೂರ್ಖತನವೆಂಬುದು ಕಾಲ ನಿರ್ಧರಿಸುವುದು. ಹಾಗೆ ನಿರ್ಧರಿಸುವಾಗ ಮಾನದಂಡವಾಗಿ ಒದಗಿದ್ದು ಅಕ್ಕ ಮತ್ತು ಮೀರಾಳ ರಚನೆಗಳು. ಈ ಸಂಗತಿ ಆ ರಚನೆಗಳ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದ್ದು, ನಿರಾಕಾರದಲ್ಲಿ ಬದುಕಿನ ಆಕರಗಳನ್ನು ಹುಡುಕುವುದನ್ನು ಲೇಖನ ಸೂಚಿಸಿದೆ. ಗ್ರಾಮದೇವತೆ ಎಲ್ಲಮ್ಮನ್ನ ಸಂಸ್ಖೃತಿಯೂ ಕರ್ನಾಟಕದಲ್ಲಿ ವಿಸ್ತರವಾದದ್ದು. ಹಳ್ಳಿಹಳ್ಳಿಗಳಿಗೂ ಆಕೆಯ ಕುರಿತಿರುವ ಕಲ್ಪನೆ ಮತ್ತು ನಂಬಿಕೆಗಳು ಅಧ್ಯಯನಕ್ಕೆ ಯೋಗ್ಯವಾದ ಸಂಗತಿಗಳು. ಅನುಸೂಯಾ ಅವರು ತಮ್ಮ ಭಾಗದ ಹಳ್ಳಿಯಲ್ಲಿರುವ ಇಲ್ಲಿನ ಲೇಖನಗಳಲ್ಲಿ ಸ್ತ್ರೀವಾದದಿಂದ ಕಲಿತ ಪಾಠಗಳೂ ಇವೆ. ಹೀಗಾಗಿ ಲೇಖನದ ವಿಷಯ ಯಾವುದೇ ಆಗಿರಲಿ ಸಾಮಾನ್ಯವಾಗಿ ಹೆಣ್ಣು ಕೇಂದ್ರದಲ್ಲಿರುತ್ತಾಳೆ. ಅವಳ ಚೈತನ್ಯವನ್ನು ಸಮಾಜ, ಧರ್ಮ ಬಂಧನಕ್ಕೊಳಪಡಿಸಿರುವ ರೀತಿಯನ್ನು ಹುಡುಕುವ ಹಂಬಲ ಪ್ರಧಾನವಾಗಿರುತ್ತದೆ ಎಂದಿದ್ದಾರೆ.

About the Author

ಅನುಸೂಯಾ ಮಿತ್ರ

ಅನುಸೂಯಾ ಮಿತ್ರ ಮೂಲತಃ ಹುಬ್ಬಳ್ಳಿಯವರು. ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ  ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಸಹಜ ನೀ ಜನನಿ ...

READ MORE

Related Books