ಭಾರತದಲ್ಲಿ ಎಲ್ಲರೂ ಮಾತಾಡುವ, ಆದರೆ ಬಹಳ ಕಡಮೆ ಚರ್ಚೆಯಾಗುವ ವಿಷಯವೆಂದರೆ ತತ್ತ್ವ ಅರ್ಥಾತ್ ಫಿಲಾಸಫಿ. ಗ್ರೀಕ್ ನಾಗರಿಕತೆಯ ಉತ್ಪನ್ನವಾಗಿ ಬಂದ ಫಿಲಾಸಫಿಗೂ ಭಾರತೀಯ ಹಿನ್ನೆಲೆಯಲ್ಲಿ ಮೂಡಿಬಂದ ತತ್ತ್ವಜ್ಞಾನಕ್ಕೂ ಬಹಳ ವ್ಯತ್ಯಾಸವಿದೆ. ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ವಿಜ್ಞಾನ-ತಂತ್ರಜ್ಞಾನಗಳಂಥ ವಿಚಾರಗಳನ್ನು ಗ್ರೀಕ್ ಫಿಲಾಸಫಿಯ ಹಿನ್ನೆಲೆಯಲ್ಲಿ ಅರ್ಥೈಸುವ ಕೆಲಸ ನಡೆದಿದೆಯೇ ಹೊರತು ಭಾರತೀಯ ತತ್ತ್ವಜ್ಞಾನದ ಹಿನ್ನೆಲೆಯಲ್ಲಿ ನೋಡುವ, ವಿವೇಚಿಸುವ ಕೆಲಸ ನಡೆದಿಲ್ಲ. ಭಾರತೀಯ ತತ್ತ್ವಜ್ಞಾನದ ಕೆಲವು ಪ್ರಮುಖಾಂಶಗಳನ್ನು ವಿಸ್ತೃತವಾಗಿ ಚರ್ಚಿಸುವ ಬಹುಮುಖ್ಯ ಶಾಸ್ತ್ರಾರ್ಥ ಕೃತಿಯೇ “ತತ್ತ್ವಸುರಭಿ”.
ಲೇಖಕ ವಿಶ್ವನಾಥ ಸುಂಕಸಾಳ ಅವರಿಗೆ ಹರಟೆ, ಓದು, ವಕ್ರೋಕ್ತಿ, ಬರಹ ಹವ್ಯಾಸಗಳು. ವೃತ್ತಿಯಿಂದ ಪತ್ರಕರ್ತರು. ಕೃತಿಗಳು: ಪದ ಸಂಚಲನ, ಪದ ಪದರ, ...
READ MORE