`ಮಹಾಕಾವ್ಯ ಪರಂಪರೆ ಮತ್ತು ಇತರ ಲೇಖನಗಳು’ ಕೃತಿಯು ದೇಜಗೌ ಅವರ ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಲೇಖಕ ದೇಜಗೌ ಅವರು ಸಂಶೋಧನೆ ಮತ್ತು ವಿಮರ್ಶೆಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು ಹಾಗೂ ಮೌಲಿಕವಾದುದು. ಮಹಾಭಾರತ ಮತ್ತು ರಾಮಾಯಣ ಮಹಾಕಾವ್ಯಗಳನ್ನು ಕುರಿತ ಲೇಖನಗಳನ್ನು ಇಲ್ಲಿ ಕಾಣಬಹುದಾಗಿದ್ದು, ದೇಜಗೌ ಅವರ ಸಂಶೋಧನಾಸಕ್ತಿ ಎಷ್ಟು ಮಹತ್ವಪೂರ್ಣವಾದುದೆಂಬುದನ್ನು ಹೇಳುತ್ತದೆ’ ಎಂದಿದೆ.
ದೇಜಗೌ ಎಂದು ಚಿರಪರಿಚಿತರಾಗಿದ್ದ ದೇವೇಗೌಡ ಜವರೇಗೌಡ ಕೃಷಿಕ ಕುಟುಂಬದಿಂದ ಬಂದವರು. ಚನ್ನಪಟ್ಟಣ ತಾಲ್ಲೂಕಿನ ಮೂಡಿಗೆರೆಯಲ್ಲಿ 1918ರ ಜುಲೈ 6ರಂದು ಜನಿಸಿದರು. ತಂದೆ ದೇವೇಗೌಡ- ತಾಯಿ ಚೆನ್ನಮ್ಮ. ಚಕ್ಕೆರೆ, ಚನ್ನಪಟ್ಟಣಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡಿ ಬಿ.ಎ ಪದವಿ ಗಳಿಸಿ ಕೆಲವು ಕಾಲ ಗುಮಾಸ್ತರಾಗಿ ಕೆಲಸ ಮಾಡಿ ಅನಂತರ ಮೈಸೂರಿಗೆ ಹೋಗಿ ಎಂ.ಎ. ಪದವಿ ಗಳಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ (1944) ಕೆಲಸಕ್ಕೆ ಸೇರಿದ ಅವರು ಅನಂತರ ಉಪಪ್ರಾಧ್ಯಾಪಕ, ಪರೀಕ್ಷಾಧಿಕಾರಿ, ಪ್ರಾಂಶುಪಾಲರು, ಇಲಾಖಾಮುಖ್ಯರು, ನಿರ್ದೇಶಕರು, ಕೊನೆಗೆ ಮೈಸೂರು ವಿಶ್ವವಿದ್ಯಾಲಯದ ಗೌರವಾನ್ವಿತ ಉಪಕುಲಪತಿಯಾಗಿ ನಿವೃತ್ತರಾದರು. ಕುವೆಂಪು ವಿದ್ಯಾವರ್ಧಕ ...
READ MORE