ಯಹೂದಿ ಇಸ್ರೇಲ್ ನಡೆದು ಬಂದ ರಣರೋಚಕ ನೆತ್ತರಹಾದಿ ಶೀಕಾಂತ್‌ಶೆಟ್ಟಿ ಕಾರ್ಕಳ ಅವರ ರಚನೆಯ ಕೃತಿಯಾಗಿದೆ. ತನ್ನ ಬಾಹುಬಲದಿಂದ ದೇವಧೂತನೊಡನೆ ಒಂದಿಡೀ ರಾತ್ರಿ ಸೆಣಸಿ ಸೋಲೊಪ್ಪದೇ ಕಾದು ಗೆದ್ದ ಐಸಾಕನ ಪರಾಕ್ರಮಕ್ಕೆ ಮೆಚ್ಚಿ “ಇನ್ನು ಮುಂದೆ ನಿನ್ನ ಹೆಸರು ಇಸ್ರೇಲ್ ಎಂದಾಗಲಿ ಈ ಪವಿತ್ರಭೂಮಿ ನಿನ್ನ ವಂಶದವರಿಗಿರಲಿ” ಎಂದು ದೇವದೂತ ನೀಡಿದ ಅಂಬರವಾಣಿ ಕಥೆಗಳು ಹಾಗೂ "ಅರಬ್ಬರು ನಮ್ಮ ಮಕ್ಕಳನ್ನು ಕೊಲ್ಲುತ್ತಿರುವ ಬಗ್ಗೆ ನಮಗೆ ಸಿಟ್ಟಿಲ್ಲ ಆದರೆ ನಾವು ಅವರ ಮಕ್ಕಳನ್ನು ಕೊಲ್ಲುವ ಅನಿವಾರ್ಯತೆ ಸೃಷ್ಟಿಸಿದ್ದಾರೆ ಇದನ್ನು ನಾವು ಸಹಿಸುವುದಿಲ್ಲ. ಅರಬ್ಬರು ಯಾವ ದಿನ ನಮ್ಮನ್ನು ದ್ವೇಷಿಸುವುದಕ್ಕಿಂತ ಹೆಚ್ಚಾಗಿ ಅವರ ಮಕ್ಕಳನ್ನು ಪ್ರೀತಿಸುತ್ತಾರೋ ಅವತ್ತು ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲಿದೆ. ಅರಬ್ಬರ ಬಳಿ ಇರದ ಒಂದೇ ಒಂದು ಶಕ್ತಿವಾಲಿ: ಅಸ್ತ್ರ ನಮ್ಮ ಬಳಿ ಇದೆ. ಅದೆಂದರೆ ನಮಗೆ ಪಲಾಯನ ಮಾಡಲು ಇನ್ನೊಂದು ದೇಶವಿಲ್ಲ.. ಇಲ್ಲೇ ನಿಂತು ಬಡಿದಾಡಬೇಕು. ಇಲ್ಲವೇ ಇಲ್ಲ. ಸಾಯಬೇಕು" ಎನ್ನುವ ಮೂಲಕ ಅರಬ್ಬರ ಜನಾಂಗೀಯ ದ್ವೇಷವನ್ನು ಜಗತ್ತಿನೆದುರು ತೆರೆದಿಟ್ಟ ಉಕ್ಕಿನ ಮಹಿಳೆ ಗೋಲ್ಟಾಮೇರ್ ಕಿಡಿನುಡಿಗಳು ಹೀಗೆ ಅನೇಕ ಕಥೆಗಳು ಈ ಕೃತಿಗೆ ಮುನ್ನುಡಿಯಾಗಿವೆ
ಪತ್ರಕರ್ತ, ಲೇಖಕ ಶ್ರೀಕಾಂತ ಶೆಟ್ಟಿ ಕಾರ್ಕಳ ಅವರು ಮೂಲತಃ ಕಾರ್ಕಳದ ಎಣ್ಣೆಹೊಳೆಯವರು. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟೂರಲ್ಲಿ ಮುಗಿಸಿ ಬಳಿಕ ಮುಂಬೈ ಸೇರಿ ರಾತ್ರಿ ಶಾಲೆಯಲ್ಲಿ ಶಿಕ್ಷಣ ಮುಂದುವರೆಸಿ, ಡಿಪ್ಲೊಮಾ ಪೂರೈಸಿದರು. ಕಳೆದ ಹತ್ತು ವರ್ಷದಿಂದ ಪತ್ರಿಕೋದ್ಯಮದಲ್ಲಿ ಕೆಲಸ ನಿರ್ವಹಿಸಿರುವ ಅವರ ಅಂಕಣಗಳು ಕನ್ನಡದ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ದಿಗ್ವಿಜಯ ಟಿವಿ ಉಡುಪಿ ಜಿಲ್ಲಾ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ...
READ MORE