‘ಧರ್ಮ ಮತ್ತು ಸಮಲೈಂಗಿಕತೆ’ ದೇವದತ್ತ ಪಟ್ಟನಾಯಕ ಅವರ ಮೂಲ ಕೃತಿಯಾಗಿದ್ದು, ಪ್ರೊ. ಕಾಶೀನಾಥ ಅಂಬಲಗಿ ಅವರ ಅನುವಾದಿತ ಸಂಕಲನವಾಗಿದೆ. ಇಲ್ಲಿ ಸಮಲೈಂಗಿಕತೆ ಎಂದರೇನು? ನಮ್ಮ ಧರ್ಮಗಳು ಇದನ್ನು ಕುರಿತು ಏನು ಹೇಳುತ್ತವೆ? ಹಿಂದೂ ಪೌರಾಣಿಕ ಧರ್ಮ ಗ್ರಂಥಗಳು, ಇಸ್ಲಾಂ, ಜೈನ ಹಾಗೂ ಬೌದ್ಧ ಧರ್ಮಗಳು ಸಾಮಾಜಿಕವಾಗಿ ಈ ಬಗ್ಗೆ ಏನನ್ನು ಹೇಳುತ್ತವೆ? ಆಧುನಿಕ ದೃಷ್ಟಿಕೋನದಿಂದಲೂ, ಪೌರಾಣಿಕ ಸಾಹಿತ್ಯದ ವೈವಿಧ್ಯಮಯ ವಿಶ್ಲೇಷಣೆಯ ಮೂಲಕವೂ, ಪ್ರಖ್ಯಾತ ಚಿಂತಕರಾದ ದೇವದತ್ತ ಪಟ್ಟನಾಯಕ ಸಮಲೈಂಗಿಕತೆ ಕುರಿತಾದ ಆಳವಾದ ಚರ್ಚೆಯನ್ನು ಈ ಕೃತಿಯಲ್ಲಿ ಮಂಡಿಸಿದ್ದಾರೆ. ಪೌರಾಣಿಕ ದಂತಕಥೆಗಳು, ಶಿಲ್ಪಕಲಾ ಪರಂಪರೆ, ಪುರಾತನ ಗ್ರಂಥಗಳು, ಹೀಗಾಗಿ ವಿವಿಧ ಸಂಸ್ಕೃತಿಗಳ ಪಾರದರ್ಶಕ ಅಧ್ಯಯನ ಈ ಕೃತಿಯ ವೈಶಿಷ್ಟ್ಯವಾಗಿದೆ. ಇದು ಧರ್ಮ ಮತ್ತು ಸಮಲೈಂಗಿಕತೆ ನಡುವಿನ ಸಂಬಂಧದ ಕುರಿತಾದ ಅನ್ವೇಷಣೆ, ಪುರಾಣಗಳು ಮತ್ತು ಸಮಾಜದ ನಡುವಿನ ಸಂವಾದ. ಪ್ರಗತಿಶೀಲ ಯೋಗ್ಯತೆ ಮತ್ತು ಮಾನವೀಯತೆಗೆ ಒಲವು ಇರುವ ಪ್ರತಿಯೊಬ್ಬರಿಗೂ ಈ ಕೃತಿ ಓದಲು ತಕ್ಕದ್ದು.
ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು 10-07-1947 ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ. ಇವರ ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ. ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ...
READ MORE