‘ಪಾಶುಪತ ದರ್ಶನ’ಎಸ್.ಎಸ್. ಹೀರೆಮಠ ಅವರ ಲೇಖನಗಳ ಸಂಗ್ರಹವಾಗಿದೆ. ಭೌತ ನಿರೀಶ್ವರ ತಳಹದಿಯಲ್ಲಿ ರೂಪುಗೊಂಡು ವೈದಿಕರ, ಭಾವನಾವಾದಿಗಳ ಸೊತ್ತಾಗಿ ಮಾರ್ಪಾಟುಗೊಂಡ ದರ್ಶನಗಳನ್ನು ಬಣವೆಯಲ್ಲಿನ ಸೂಜಿಯನ್ನು ಹುಡುಕುವಷ್ಟು ತಾಳ್ಮೆಯಿಂದ ಮುಖ್ಯವಾಗಿ ಎಡಪಂಥೀಯ ವಿಚಾರವಾದದ ಮೂಲಕ ಲೇಖಕರು ವಿಶ್ಲೇಷಿಸುತ್ತಾರೆ.
ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಎಸ್.ಎಸ್. ಹಿರೇಮಠ ಅವರು ಬೆಳಗಾವಿ ಜಿಲ್ಲೆಯ ಸಾಣಿಕೊಪ್ಪದವರು. ರಾಯಣ್ಣನ ಸಂಗೊಳ್ಳಿ, ಸಂಗ್ಯಾಬಾಳ್ಯಾದ ಬೈಲವಾಡ, ಬೈಲಹೊಂಗಲ, ಕಿತ್ತೂರು ಪರಿಸರದಲ್ಲಿ ಬರುವ ಊರು ಸಾಣಿಕೊಪ್ಪ. ಬೆಳಗಾವಿಯಲ್ಲಿ ಬಿ.ಎ. ಮತ್ತು ಧಾರವಾಡದಲ್ಲಿ ಎಂ. ಎ ಪದವಿ ಪಡೆದ ನಂತರ ಹಿರೇಮಠರು ಹೊಸಪೇಟೆ, ಹಡಗಲಿ, ಹರಪನಹಳ್ಳಿಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡಿದ್ದರು. ಪ್ರಗತಿಪರ ಸಂಘಟನೆ ಮತ್ತು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ದಲಿತರ ಇತಿಹಾಸ ಮತ್ತು ಸಂಸ್ಕೃತಿ ಪರಂಪರೆಯ ಕುರಿತು ಶೋಧನೆ ನಡೆಸಿದ್ದಾರೆ. ದರ್ಶನಗಳ ಸರಣಿಯಲ್ಲಿ ಪಾಶುಪತ ದರ್ಶನ, ಕಾಳಾಮುಖ ದರ್ಶನ, ಲಾಕುಳ ದರ್ಶನ ಕೃತಿಗಳು ಪ್ರಕಟಗೊಂಡಿವೆ. ...
READ MOREಹೊಸತು- 2004-ಫೆಬ್ರವರಿ
ಬಹುಮುಖಿ ಸಂಸ್ಕೃತಿಯಿರುವ ಭಾರತದ ಮೂಲದರ್ಶನಗಳು ಕಾಲ ಸರಿದಂತೆ ಒಂದರೊಳಗೊಂದು ವಿಲೀನಗೊಂಡಿರುವಾಗ ಇವುಗಳ ಮೂಲ ಸ್ವರೂಪವನ್ನು ಶೋಧಿಸುವುದು ಸಾಹಸದ ಕೆಲಸ. ಭೌತ ನಿರೀಶ್ವರ ತಳಹದಿಯಲ್ಲಿ ರೂಪುಗೊಂಡು ವೈದಿಕರ, ಭಾವನಾವಾದಿಗಳ ಸೊತ್ತಾಗಿ ಮಾರ್ಪಾಟುಗೊಂಡ ದರ್ಶನಗಳನ್ನು ಬಣವೆಯಲ್ಲಿನ ಸೂಜಿಯನ್ನು ಹುಡುಕುವಷ್ಟು ತಾಳ್ಮೆಯಿಂದ ಮುಖ್ಯವಾಗಿ ಎಡಪಂಥೀಯ ವಿಚಾರವಾದದ ಮೂಲಕ ಲೇಖಕರು ವಿಶ್ಲೇಷಿಸುತ್ತಾರೆ. ಸಾಂಖ್ಯದ ಮೇಲೆ ಹೊಸ ಬೆಳಕನ್ನಾಗಲೇ ಚೆಲ್ಲಿದ ಇವರು ಇಲ್ಲಿ ಶೈವ ತತ್ವದ ಶಾಖೆಯಾದ ಪಾಶುಪತವನ್ನು ಸ್ವಾರಸ್ಯವಾಗಿ ನಿರೂಪಿಸಿದ್ದಾರೆ.