ಬಿಳಿಯರ ಜೀವನ

Author : ಸತ್ಯವತಿ ಮೂರ್ತಿ

₹ 200.00




Year of Publication: 2024
Published by: ವಿಕ್ರಂ ಪ್ರಕಾಶನ
Address: #23, 18th A\' ಕ್ರಾಸ್, 1st ಮೈನ್ ಭುವನೇಶ್ವರಿ ನಗರ, ಹೆಬ್ಬಾಳ ಬೆಂಗಳೂರು - 560024
Phone: 8971091760, 9740994008

Synopsys

‘ಬಿಳಿಯರ ಜೀವನ’ ಸತ್ಯವತಿ ಮೂರ್ತಿ ಅವರ ಕೃತಿಯಾಗಿದೆ. ಬ್ರಿಟಿಷರ ಸಂಸ್ಕೃತಿ—ಜೀವನಕ್ರಮವನ್ನು ಪರಿಶೀಲಿಸುತ್ತಲೇ ನಮ್ಮ ಭಾರತೀಯ ಸಂಸ್ಕೃತಿ—ಜೀವನಕ್ರಮಗಳೊಂದಿಗೆ ಒಂದು ತೌಲನಿಕ ಸಮೀಕ್ಷೆಯನ್ನೂ ನಡೆಸುತ್ತಾ ಹಲವಾರು ಒಳನೋಟಗಳನ್ನು ನೀಡುತ್ತಾ ಹೋಗುತ್ತಾರೆ ಲೇಖಕಿ. ಅಂತೆಯೇ ಒಂದು ವಿಷಯವನ್ನು ಕುರಿತು ಚರ್ಚಿಸುತ್ತಲೇ ಪ್ರಾಸಂಗಿಕವಾಗಿ ಬರುವ ಹತ್ತು ಹಲವು ಸಂಗತಿಗಳ ಕಡೆಗೂ ನಮ್ಮ ಗಮನವನ್ನು ಸೆಳೆಯುತ್ತಾ ಹೋಗುತ್ತಾರೆ. ಮೂಢನಂಬಿಕೆಗಳ ಬಗ್ಗೆ ಮಾತಾಡುತ್ತಿರುವಾಗಲೇ ವರ್ಡ್ಸ್ ವರ್ತ್ ಕವಿಯ ಕಾವ್ಯಜಗತ್ತಿನ ಮಿಂಚೊಂದು ಹೊಳೆದುಬಿಡುತ್ತದೆ! ಮೂಢನಂಬಿಕೆಗಳ ಬಗ್ಗೆ ಮಾತಾಡುತ್ತಲೇ ಅವುಗಳ ಹಿಂದೆ ಇದ್ದಿರಬಹುದಾದ ವೈಜ್ಞಾನಿಕತೆಯನ್ನು ಹುಡುಕುವ ಕೆಲಸವನ್ನೂ ಅವರ ಚಿಕಿತ್ಸಕ ಮನಸ್ಸು ಮಾಡುತ್ತದೆ! ಈ ಕೃತಿಯಲ್ಲಿ ಒಟ್ಟು 21 ಅಧ್ಯಾಯಗಳಿದ್ದು ಅವುಗಳ ಮೂಲಕ ಒಂದಿಡೀ ಜೀವನಕ್ರಮವನ್ನೂ ಅದರೊಂದಿಗೇ ಮಿಳಿತವಾಗಿರುವ ಅವರ ಆಚಾರ ವಿಚಾರಗಳನ್ನೂ ಕೌಟುಂಬಿಕ ಮೌಲ್ಯ ಹಾಗೂ ಸಂಪ್ರದಾಯಗಳನ್ನೂ ಮದುವೆ ಇತ್ಯಾದಿ ಸಾಮಾಜಿಕ ಒಪ್ಪಂದಗಳನ್ನೂ ಅಲ್ಲಿನ ಒಂದಷ್ಟು ಪ್ರೇಕ್ಷಣೀಯ ಸ್ಥಳಗಳನ್ನೂ ನಮಗೆ ಪರಿಚಯಿಸುತ್ತಾ ಹೋಗುತ್ತಾರೆ ಸತ್ಯವತಿ ಅವರು. ಬಿಳಿಯರ ಹಬ್ಬಗಳ ಬಗ್ಗೆ ಅವುಗಳ ಆಚರಣೆಯ ವಿಧಿ ವಿಧಾನಗಳ ಬಗ್ಗೆ ಸಾಕಷ್ಟು ವಿವರಗಳನ್ನು ನೀಡಿದ್ದಾರೆ. ಅಂತೆಯೇ ಕ್ಯಾಲೆಂಡರ್ ಕುರಿತಾಗಿ ನೀಡಿರುವ ವಿವರಗಳೂ ಸ್ವಾರಸ್ಯಕರವಾಗಿವೆ.

About the Author

ಸತ್ಯವತಿ ಮೂರ್ತಿ

ಸತ್ಯವತಿ ಮೂರ್ತಿ ಅವರು ಬಿಎಸ್ಸಿ, ಬಿ.ಎ, ಎಮ್.ಎ, ಬಿ.ಎಡ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಶಾಂತಿರಾಜ ಶಾಸ್ತ್ರಿಗಳು ಜೀವನ ಮತ್ತು ಅವರ ಕೃತಿಗಳು ಒಂದು ಅಧ್ಯಯನಕ್ಕಾಗಿ ಪಿ.ಎಚ್.ಡಿ  ಶಿಕ್ಷಣ ಪೂರೈಸಿದ್ದಾರೆ. ಪ್ರಜಾವಾಣಿ , ಸುಧಾ, ಮಯೂರ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಕಥೆ, ಕವನ , ಅನುವಾದ, ಪ್ರವಾಸ ಕಥನ, ವ್ಯಕ್ತಿ ಚಿತ್ರ ಹಾಗೂ ನಗೆಬರಹಗಳನ್ನು ಪ್ರಕಟಿಸಿದ್ದಾರೆ. ಕೃತಿಗಳು: ಸಿಟಿಬಸ್ಸು ಹಾಗೂ ತೆಳ್ಳಗಿರಬಾರದಯ್ಯ ಲೋಕದೊಳಗೆ, ಗಿನ್ನೀಸ್ ರೆಕಾರ್ಡ್ ಮತ್ತು ಇತರ ನಾಟಕಗಳು, ಸಿಟಿಬಸ್ಸು. ...

READ MORE

Related Books