ನಿಮಗೂ ಸ್ಟ್ರೆಸ್ ಇದೆಯಾ?

Author : ಉಷಾ ವಸ್ತಾರೆ

Pages 78

₹ 100.00




Year of Publication: 2024
Published by: ಬೆನಕ ಬುಕ್ಸ್‌ ಬ್ಯಾಂಕ್
Address: ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು, ಕೋಡೂರು ಅಂಚೆ, 577418, ಹೊಸನಗರ ತಾಲೂಕು, ಶಿವಮೊಗ್ಗ
Phone: 7338437666

Synopsys

‘ನಿಮಗೂ ಸ್ಟ್ರೆಸ್ ಇದೆಯಾ?’ ಉಷಾ ವಸ್ತಾರೆ ಅವರ ಕಿರುಪುಸ್ತಕವಾಗಿದೆ. ಈ ಕೃತಿಯ ಬೆನ್ನುಡಿ ಬರಹ ಹೀಗಿದೆ; ಒತ್ತಡ ಇಂದಿನ ಕಾಲದಲ್ಲಿ ಹೆಚ್ಚಾಗಿ ಎಲ್ಲರ ಬಾಯಲ್ಲಿ ಕೇಳಿಬರುವ ಪದ. ಮನೆವಾರ್ತೆಯ ಕೆಲಸ, ಉದ್ಯೋಗ ಸ್ಥಳಕ್ಕೆ ನಿತ್ಯಪ್ರಯಾಣ, ಟ್ರಾಫಿಕ್ ಜಾಮ್, ವಿದ್ಯಾರ್ಥಿಗಳಿಗೆ ಪರೀಕ್ಷೆಗಳು, ನಿವೃತ್ತರಿಗೆ ನೀರಸತೆ (boredom)... ಒತ್ತಡಕ್ಕೆ ಹಲವಾರು ಕಾರಣಗಳು. ಒತ್ತಡದ ಹಿಂದಿರುವ ವಿಜ್ಞಾನ, ಪ್ರಚೋದಕ ಮತ್ತು ಪರಿಹಾರವನ್ನು ಈ ಪುಸ್ತಕದಲ್ಲಿ ಸಂಕ್ಷಿಪ್ತವಾಗಿ ನೀಡಲಾಗಿದೆ. ಅಷ್ಟೇ ಅಲ್ಲ, ಇವೇ ಒತ್ತಡಗಳನ್ನು, ಒತ್ತಡಕಾರಕಗಳನ್ನು, ಪರಿಸ್ಥಿತಿಗಳನ್ನು ನಿರ್ವಹಿಸುತ್ತ ಅವುಗಳಿಂದಲೇ ಜೀವನ ವಿಕಸನ ಹೊಂದಬಹುದು ಎಂಬುದನ್ನು ಸುಸ್ಪಷ್ಟವಾಗಿ ಈ ಪುಸ್ತಕದ ಮೂಲಕ ತಿಳಿಯಬಹುದಾಗಿದೆ. ಜೀವನವಿರುವುದು ವಿಕಸನಕ್ಕಾಗಿ; ವಿಕಸನವೇ ಜೀವನೋದ್ದೇಶ. ಒತ್ತಡದ ನಿರ್ವಹಣೆ ಮತ್ತು ಅದರ ಮೂಲಕ ವಿಕಸನ ಹೊಂದುವ ಶಕ್ತಿ ಸಾಮರ್ಥ್ಯಗಳು ನಮ್ಮಲ್ಲಿಯೇ ಇವೆ. ಅದನ್ನು ಕಂಡುಕೊಳ್ಳುವ ಬಗೆ ಮತ್ತು ಅದಕ್ಕಾಗಿ ಬೇಕಾಗುವ ಸಾಧನಗಳು ಎಲ್ಲವನ್ನೂ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಒತ್ತಡ ನಿರ್ವಹಣೆಗೆ ರಿವೈಯರಿಂಗ್ ಸಾಧನಗಳನ್ನು ಅನುಸರಿಸುವುದು ಮತ್ತು ಒತ್ತಡ ಪ್ರತಿಕ್ರಿಯೆಗಳ ದೃಷ್ಟಿಕೋನದ ಬದಲಾವಣೆ ಎರಡೂ ಜೀವನ ವಿಕಸನಕ್ಕೆ ಅತ್ಯವಶ್ಯವಾದ ಮಾರ್ಗಸೂಚಿಗಳು ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.

About the Author

ಉಷಾ ವಸ್ತಾರೆ

ಉಷಾ ವಸ್ತಾರೆ ಮೂಲತಃ ಗವಿಪುರ ಗುಟ್ಟಹಳ್ಳಿಯವರು.1965ರಲ್ಲಿ ಅವರ ಜನನ. ಅವರು ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಪದವಿಯನ್ನು ಪಡೆದರು. ಬಿ.ಎಸ್ಸಿಯಲ್ಲಿ ಚಿನ್ನದ ಪದಕ, ಸೆಂಟ್ರಲ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯಲ್ಲಿ (ಎಂ.ಎಸ್ಸಿ) ರ್ಯಾಂಕ್ ಕೂಡಾ ಪಡೆದುಕೊಂಡರು. ನಂತರ 1981ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿ.ಎಚ್‌ಡಿ ಮಾಡಿದರು. ಪೋಸ್ಟ್ ಡಾಕ್ಟರಲ್ ರಿಸರ್ಚ್ ಮಾಡಿದ ಬಳಿಕ ಫಿಲಡೆಲ್ಪಿಯಾದಲ್ಲಿರುವ ಟೆಂಪಲ್ ಯುನಿವರ್ಸಿಟಿಯ ಮೆಡಿಕಲ್ ಸ್ಕೂಲ್ ನಲ್ಲಿ ಫೇಕಲ್ಟಿಯಾಗಿ ಕೆಲಸ ಮಾಡಿದರು. 17 ವರ್ಷ ಸಂಶೋಧನೆ ಮಾಡಿದ ಬಳಿಕ ಅಲ್ಲಿಯೇ ನ್ಯೂರೊ ಸರ್ಜರಿ ಮತ್ತು ಫಿಸಿಯಾಲಜಿ ವಿಭಾಗಗಳಲ್ಲಿ ಫೇಕಲ್ಟಿಯಾಗಿದ್ದರು. ಇದೀಗ ನರವಿಜ್ಞಾನಿಯಾಗಿ (ನ್ಯೂರೊ ಸೈಂಟಿಸ್ಟ್) ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು; ಕಥೆ ಕೇಳೋಣ ಮನಸ್ಸು ...

READ MORE

Related Books