‘ನಾನು ಯಾರು? ಎಂಬ ಆಳ-ನಿರಾಳ’ ಕೃತಿಯು ಕೆ. ಆರ್. ಮಂಗಳಾ ಅವರ ಲೇಖನಸಂಕಲನವಾಗಿದೆ. ಹಿರಿಯ ಚಿಂತಕ ಡಾ. ರಾಜೇಂದ್ರ ಚೆನ್ನಿಯವರು ಈ ಕೃತಿಯ ಕುರಿತು ಬರೆದಿರುವ ಕೆಲವೊಂದು ವಿಚಾರಗಳು ಹೀಗಿವೆ; ಇದೊಂದು ವಿಶಿಷ್ಟವಾದ ಕೃತಿ. ಸ್ವರೂಪದಲ್ಲಿ ಸುದೀರ್ಘವಾದ ಸ್ವಗತದಂತೆ ಅಥವಾ ಧ್ಯಾನಸ್ಥ ಸ್ಥಿತಿಯಲ್ಲಿ ಮಾಡಿದ ಚಿಂತನೆಯಂತಿದೆ. ಇನ್ನೊಂದು ದೃಷ್ಟಿಯಲ್ಲಿ ನೋಡಿದರೆ ಇದು ತಾತ್ವಿಕವಾದ ವಾದ ಮಂಡನೆಯ ಹಾಗಿದೆ. ಓದಲು ತೊಡಗಿದಾಗ ಮೊದಲು ಇಷ್ಟವಾಗುವ ಲಕ್ಷಣವೆಂದರೆ ಭಾಷೆ, ಶೈಲಿ ಹಾಗೂ ವಿಚಾರ ಮಂಡನೆಯ ಪಾರದರ್ಶಕತೆ. ಕೃತಿಯ ವಸ್ತು ತಾತ್ವಿಕವಾಗಿದೆ. ಅನುಭಾವದ ಶೋಧನೆಯಾಗಿದೆ. ಆದ್ದರಿಂದಾಗಿ, ಗಹನವಾದ ತಾತ್ವಿಕ ಅಂಶಗಳು ಅನಿವಾರ್ಯವಾಗಿಯೆ ಕೃತಿಯಲ್ಲಿವೆ. ಆದರೆ, ಸ್ಪಷ್ಟವಾದ ಪಾರಿಭಾಷಿಕಗಳ ಗೊಡವೆ ಇಲ್ಲದೆ ನಿರೂಪಣೆಯು ಸಾಗುತ್ತದೆ' ಎಂದು ಪ್ರಶಂಸಿಸಿದ್ದಾರೆ.
ಕೆ. ಆರ್. ಮಂಗಳಾ ಅವರು ಲೇಖಕಿ ಹಾಗೂ ಹಿರಿಯ ಪತ್ರಕರ್ತೆ. ಕೃತಿಗಳು : ನಾನು ಯಾರು? ಎಂಬ ಆಳ-ನಿರಾಳ ...
READ MORE