ಒಡಲಾಳದ ಕಥನಗಳು

Author : ಕೆ. ಮಹಾಂತೇಶ

₹ 130.00




Year of Publication: 2021
Published by: ಕ್ರಿಯಾ ಮಾಧ್ಯಮ ಪ್ರೈ.ಲಿ.
Address: ಮಹಾಲಕ್ಷ್ಮಿ ಬಡಾವಣೆ, ಬೆಂಗಳೂರು- 560086
Phone: 9741613073

Synopsys

ಲೇಖಕ ಕೆ. ಮಹಾಂತೇಶ ಅವರ ಲೇಖನಗಳ ಸಂಗ್ರಹ ಕೃತಿ ʻಒಡಲಾಳದ ಕಥನಗಳುʼ. 2018ರಲ್ಲಿ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನ ಸಹಾಯ ಪಡೆದು ಪ್ರಕಟವಾದ ಪುಸ್ತಕ. ಇಲ್ಲಿ ಅರಿವಿನ ಕಥನಗಳು, ಹೋರಾಟದ ಕಥನಗಳು, ಕಾನೂನು ಕಥನಗಳು ಹಾಗೂ ಮರೆಯಲಾಗದ ಕಥನಗಳು ಎನ್ನುವ ನಾಲ್ಕು ಕಥನಗಳಾಗಿ ವಿಂಗಡಿಸಲಾಗಿದೆ. ಅರಿವಿನ ಕಥನಗಳಲ್ಲಿ ಲೇಖಕರಿಗೆ ಅರಿವು ಮೂಡಿಸಿದ, ಯುವಜನಾಂಗಕ್ಕೆ ಅರಿವು ಮೂಡಿಸುವ ಸ್ಪೂರ್ತಿದಾಯಕ ಕಥನಗಳಿವೆ. ಹೋರಾಟದ ಕಥನಗಳಲ್ಲಿ ಲೇಖಕರು ಬೆಳೆಸಿದ ಸಂಘಟಿಸಿದ ಅನುಭವಗಳಿಂದ ಒಡಮೂಡಿದ ಕಥನಗಳಿವೆ. ಕಾನೂನಿನ ಕಥನಗಳಲ್ಲಿ; ಸರ್ಕಾರದ ಕಾನೂನು ತಿದ್ದುಪಡಿಗಳು, ಕಾರ್ಮಿಕ ವರ್ಗದ ಮೇಲೆ ಅದರ ಪರಿಣಾಮಗಳು ಕುರಿತಾದ ಕಥನಗಳು ಇವೆ. ಮರೆಯಲಾಗದ ಕಥನಗಳಲ್ಲಿ ಲೇಖಕರು ಬಾಲ್ಯದಲ್ಲಿ ಅನುಭವಿಸಿದ ಅಸ್ಪೃಶ್ಯತೆಯ ಕರಾಳ ನೆನಪುಗಳನ್ನು ಅದರಿಂದ ಅವರ ಮನಸ್ಸಿನ ಮೇಲಾದ ಗಾಯದ ನೆನಪನ್ನು ಅನಾವರಣಗೊಳಿಸಿದ್ದಾರೆ. ಇಲ್ಲಿಯ ಕೆಲವು ಲೇಖನಗಳು ಕನ್ನಡದ ವಿವಿಧ ದಿನಪತ್ರಿಕೆ, ವಾರಪತ್ರಿಕೆ ಹಾಗೂ ಮಾಸಿಕಗಳಲ್ಲಿ ಪ್ರಕಟವಾಗಿವೆ.

About the Author

ಕೆ. ಮಹಾಂತೇಶ
(01 January 1971)

ಕೆ. ಮಹಾಂತೇಶ್ ಅವರು ದಾವಣಗೆರೆ ಸಮೀಪದ ಆವರೆಗೆರೆ ಗ್ರಾಮದವರು. . ದಾವಣಗೆರೆಯಲ್ಲಿ ಬಿಎ ಎಲ್ಎಲ್ ಬಿ ಪದವೀಧರರು. ವಕೀಲ ವೃತ್ತಿಯಲ್ಲಿದ್ದೂ ಸಾಹಿತ್ಯದಲ್ಲಿ ಆಸಕ್ತರು. 2000 ರಿಂದ ಬೆಂಗಳೂರಿನಲ್ಲಿ ವಾಸ. ಯುವಜನ ಸಂಘಟನೆಯಲ್ಲಿ ಕೆಲಸ. 2001 ರಲ್ಲಿ ಆಫ್ರಿಕಾದ ಅಜ್ಜೀರಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಯುವಜನ ವಿದ್ಯಾರ್ಥಿ ಸಮ್ಮೇಳನದಲ್ಲಿ ಕರ್ನಾಟಕದ ಪರವಾಗಿ ಪಾಲ್ಗೊಂಡಿದ್ದರು. ಪಶ್ಚಿಮ ಘಟ್ಟದ ಆರ್ಥಿಕ ಸಾಮಾಜಿಕ ಪರಿಸ್ಥಿತಿ ಅಧ್ಯಯನ, ಕೇರಳದಲ್ಲಿ ಜಾರಿಗೊಂಡ ಜನತಾ ಯೋಜನೆ ಸೇರಿ ಹತ್ತಾರು ಲೇಖನಗಳು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 2006 ರಿಂದ ಟಿ.ವಿ- 9 ಕರ್ನಾಟಕ ಸುದ್ದಿವಾಹಿನಿಯಲ್ಲಿ ಪತ್ರಕರ್ತರಾಗಿ ಹಾಗೂ 2007 ರಲ್ಲಿ ಕನ್ನಡ ...

READ MORE

Related Books