ಮಿಸ್ಡ್ ಕಾಲ

Author : ಗೋಪಾಲ್ ಯಡಗೆರೆ

Pages 168

₹ 150.00




Year of Publication: 2017
Published by: ಸಾವಣ್ಣ ಪ್ರಕಾಶನ
Address: #57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು-560004
Phone: 9036312786

Synopsys

’ಮಿಸ್ಡ್ ಕಾಲ’ ಮಲೆನಾಡಿನ ನೋಟವನ್ನು ಪರಿಚಯಿಸುವ, ಒಂದು ಸಂಸ್ಕೃ ತಿಯನ್ನು ನಮ್ಮೆದುರು ತೆರೆದಿಡುವ ಕೃತಿಯಾಗಿದೆ.

ಒಂದು ತಲೆಮಾರಿನ ಮಲೆನಾಡು ಈಗ “ಮಿಸ್” ಆದ, ಆ ಮಲೆನಾಡಿನ “ಕಾಲ”ವನ್ನು ಈ ಕೃತಿ ತೆರೆದಿಡುತ್ತದೆ. ಮಲೆನಾಡೆಂದರೆ ಕುತೂಹಲದ ಕಣಿವೆ, ಅಲ್ಲಿನ ಗುಡ್ಡದ ಎತ್ತರದಲ್ಲಿ, ತಗ್ಗಿನಲ್ಲಿ, ಇಳಿಜಾರಿನಲ್ಲಿ ಗದ್ದೆ ಬಯಲಿನಲ್ಲಿ, ಹೊಳೆಯ ದಡದಲ್ಲಿ, ದಟ್ಟಡವಿಯಲ್ಲಿ, ಕಾನನದ ನಡುವಿನಲ್ಲಿ ನಿತ್ಯ ಹುಟ್ಟುವ ಅನೇಕ ಸಂಗತಿಗಳು, ಘಟನೆಗಳು, ಕುತೂಹಲ ಹುಟ್ಟಿಸುವ ಸಂಗತಿಗಳು ಇಲ್ಲಿವೆ. ಹಾಗೆಯೇ ಯಾವುದೋ ಕಾಲಘಟ್ಟದಲ್ಲಿ ಶುರುವಾದ ಕೆಲ ಕೆಟ್ಟ ಆಚರಣೆಗಳು ವಿಷಾದ ಹುಟ್ಟಿಸುವ, ಕೇಳಿದ ಘಟನೆಗಳನ್ನು ಮುಂದಿನ ತಲೆಮಾರಿಗೆ ದಾಟಿಸುವ ಪ್ರಯತ್ನವಾಗಿ ಈ ಕೃತಿ ರಚಿಸಿದ್ದಾರೆ ಲೇಖಕರು.

ಮಲೆನಾಡಿನ ಸಾಂಸ್ಕೃತಿಕ, ಸಾಮಾಜಿಕ ನೆಲೆಗಟ್ಟಿನ ಕಿರು ಚಿತ್ರಣ ಇಲ್ಲಿ ಸಿಗುತ್ತದೆ. ಹೊಸ ತಲೆಮಾರು ಹಳೆಯದೆಲ್ಲವನ್ನೂ ಮರೆತು ಅದೆಲ್ಲೋ ದೂರದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಮಲೆನಾಡಿನಲ್ಲೇ ಇದ್ದರೂ ಒಂದೆರಡು ತಲೆಮಾರುಗಳ ಅಂತರದಲ್ಲಿ, ಆಧುನಿಕತೆಯ ಸ್ಪರ್ಶದಲ್ಲಿ ಬದಲಾಗಿ ಹೋಗುವ, ಇನ್ನೊಂದು ತಲೆಮಾರು ಸರಿದರೆ ಅವರಿಗೆ ಈ ಹಳೆಯ ಮಲೆನಾಡು ಬಹುತೇಕ ಅಪರಿಚಿತರಾಗುವ ಧೋರಣೆ ಕಟ್ಟಿಕೊಡುವ ಪ್ರಯತ್ನವನ್ನು ಇಲ್ಲಿ ಲೇಖಕರು ಮಾಡಿದ್ದಾರೆ.

About the Author

ಗೋಪಾಲ್ ಯಡಗೆರೆ
(14 July 1963)

ಲೇಖಕ, ಪತ್ರಕರ್ತ ಗೋಪಾಲ್ ಎಸ್. ಯಡಗೆರೆ, 1963 ಜುಲೈ 14 ರಂದು ಚಿಕ್ಕಮಗಳೂರು ಜಿಲ್ಲೆ ಎನ್. ಆರ್. ಪುರ ತಾಲೂಕು ಯಡಗೆರೆಯಲ್ಲಿ ಜನಿಸಿದರು. ತಂದೆ ಸಿಂಗಪ್ಪಯ್ಯ, ತಾಯಿ ಪದ್ಮಾವತಿ. ಉದಯವಾಣಿ ಪತ್ರಿಕೆಯಲ್ಲಿ 28 ವರ್ಷ ಕಾಲ ಹಿರಿಯ ವರದಿಗಾರರಾಗಿ ಕೆಲಸ ಮಾಡಿದ ನಂತರ, 2017 ರಿಂದ ಕನ್ನಡಪ್ರಭ ಪತ್ರಿಕೆಯ ಶಿವಮೊಗ್ಗ ಆವೃತ್ತಿಯ ಪ್ರಧಾನ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ’ನಾನಾಗದ ನಾನು’, ಕವನ ಸಂಕಲನ, ’ಸೋಲನ್ನು ಸೋಲಿಸು’ ಮತ್ತು ’ಮಿಸ್ಡ್ ಕಾಲ್’ ಸಾಹಿತ್ಯ ಕೃತಿಗಳನ್ನು ಹೊರ ತಂದಿದ್ದಾರೆ. ’ಮಾನವೀಯ ವರದಿಗಾಗಿ ಭೂಪಾಳಂ ಚಂದ್ರಶೇಖರ ಪ್ರಶಸ್ತಿ, ಸುವರ್ಣ  ಲೇಡೀಸ್ ಕ್ಲಬ್‍ನ ಸುವರ್ಣ ಪ್ರಶಸ್ತಿ, ಗುರುಸಿದ್ದಶ್ರೀ ...

READ MORE

Related Books